ಓ ನನ್ನ ಬಾಲ್ಯದಾ ಗೆಳತೀ..

ಓ ನನ್ನ ಬಾಲ್ಯದಾ ಗೆಳತೀ..

ಬಾಳ ಮುಸ್ಸಂಜೆಯಲಿ
ಮನವು ಮಾಗಿರುವಾಗ,
ಹೀಗೇಕೆ ಅಳುತಿರುವೆ
ನನ್ನ ಅಂತರಂಗ ಸಖಿ!

ಬದುಕಿನಲಿ ಬಂದಿದ್ದ
ಕಷ್ಟ-ಸುಖಗಳನೆಲ್ಲಾ
ನಾವು ಕಂಡುಂಡಾಗಿದೆ
ಇನ್ನೇಕಳುವೆ ನೀ ಸಖಿ!

ನಿನ್ನವರೇ ನಿನ್ನನರಿಯದೆ
ತೊರೆದರೆಂದು ಈ
ಅಶ್ರುಗಳ ಹರಿಸುತಿಹೆಯಾ
ಓ ನನ್ನ ಜೀವಸಖಿ!

ನೊಂದ ಮನದ ಭಾವ
ನೊಂದು ಬೆಂದಿಹ
ಮನವಷ್ಟೇ ಅರಿವುದು
ಕಣ್ಣೀರಿಡದಿರು ಸಖಿ!

ನನಗೆ ನೀನು, ನಿನಗೆ
ನಾನೆಂಬ ಭಾವದಿ
ಬಾಳೋಣ ನೋಯದಿರು
ನನ್ನ ಬಾಲ್ಯದಾ ಗೆಳತಿ!!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *