ಎನ್. ಶಿವರಾಮಯ್ಯ (17.02.1933 – 26.04.2016) ಕಾವ್ಯನಾಮ – ನೇನಂಶಿ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನೇಗಲಾಲ ಗ್ರಾಮದವರು. ತಂದೆ ಎನ್.ಆರ್. ನಂಜಪ್ಪ, ತಾಯಿ ವೆಂಕಟಲಕ್ಷಮ್ಮ.
ಕನ್ನಡ ಎಂ.ಎ., ಬಿ.ಎಡ್., ಕನ್ನಡ ಪಂಡಿತ್, ಹಿಂದೀ ವಿದ್ವಾನ್, ರಾ.ಭಾ. ಪ್ರವೀಣ್, ಸಂಸ್ಕೃತ ಕೋವಿದ, ಕನ್ನಡ ಉಪನ್ಯಾಸಕ ರಾಗಿದ್ದರು.
`ನೇನಂಶಿ’ಯವರು ಬಹುಶ್ರತರಾಗಿದ್ದರು. ಅವರೊಬ್ಬ ಲಿಂಗ್ವಿಸ್ಟ್. ಅವರು ಬಹುಭಾಷಾ ಪಂಡಿತರಾಗಿದ್ದರು. ಅವರಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಬಂಗಾಳಿ ಭಾಷೆಗಳಲ್ಲಿ ಪರಿಣತಿ ಇತ್ತು. ಕನ್ನಡಕ್ಕೆ ಈ ಎಲ್ಲಾ ಭಾಷೆಗಳಿಂದ ಅನುವಾದಗಳನ್ನೂ ಮಾಡಿದ್ದಾರೆ.
1952 ರಿಂದ ಸಾಹಿತ್ಯ ರಚನೆ ಪ್ರಾರಂಭಿಸಿದ್ದು ಕಥೆ, ಕವನ ಹಾಗೂ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ‘ನೇನಂಶಿ’ ಕಾವ್ಯನಾಮದಿಂದ ಪ್ರಕಟವಾಗಿವೆ.
ಪ್ರಕಟಗೊಂಡ ಕೃತಿಗಳು:
ಪ್ರತ್ಯಗಾತ್ಮ ಚಿಂತನ (ಕಗ್ಗದ ದಾಟಿಯಲ್ಲಿ ಬರೆದ 350 ಚೌಪದಿಗಳ ಸಂಕಲನ ಸ್ವಾನುಭವದ ಚಿಂತನ), ‘ಏಕನಾದ ಮತ್ತು ಇತರ ಲಲಿತ ಪ್ರಬಂಧಗಳು’ ಸ್ವಾನುಭವದ ಲಲಿತ ಪ್ರಬಂಧಗಳ ಸಂಗ್ರಹ.
ಶಿವಾನಂದ ಲಹರಿ – ಶ್ರೀ ಶಂಕರಾಚಾರ್ಯರ ಸಂಸ್ಕøತ ಶತಕದ ಪದ್ಯಾನುವಾದ, `ಅದೃಷ್ಟದ ಆಟ’ (ಬಂಗಾಳಿ ಕಾದಂಬರಿಯ ಕನ್ನಡಾನುವಾದ), ದಿ ಸೀಕ್ರೆಟ್ – ತೆಲುಗಿನಿಂದ ಕನ್ನಡಕ್ಕೆ ಅನುವಾದ, ಮಾಘ ಕವಿ (ತೆಲುಗಿನ ಕವಿಯ ಜೀವನಾಧಾರಿತ ಸಾಹಿತ್ಯ ಕನ್ನಡಾನುವಾದ), ವೇಮನ ಸುಭಾಷಿತ (ತೆಲುಗಿನಿಂದ ಕನ್ನಡಕ್ಕೆ ಪದ್ಯಾನುವಾದ), ಹಿಂದೀ ಸೂಕ್ತಿ ಸುಧಾ (ಕಬೀರ್, ತುಳಸೀದಾಸ್, ರಹೀಮ್, ವೃಂದ ಹಾಗೂ ಬಿಹಾರಿ ಮೊದಲಾದವರ ದೋಹಾಗಳ ಭಾವಾನುವಾದ).
ಅಚ್ಚಿಗೆ ಸಿದ್ಧವಾಗಿರುವ ಹಸ್ತಪ್ರತಿಗಳು:
ಹರಿಚಿತ್ತ ಮತ್ತು ಇತರ ಕಥೆಗಳು, ಪಂಚಮಹಾ ಕಾವ್ಯಗಳು (ತಮಿಳಿನಿಂದ ಕನ್ನಡಕ್ಕೆ ಅನುವಾದ), ಜೇನುಹೊಳೆ (ಕವನ ಸಂಕಲನ), ಮೂರು ನಕ್ಷತ್ರ ಮಾಲಿಕೆಗಳು, ಈಸೋಪನ ಕಥನ ಕವನಗಳು.
2005ರಲ್ಲಿ ತುಮಕೂರು ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ತಪಸ್ವಿ ಹಾಗೂ ಸಾಹಿತ್ಯ ಮಣಿರತ್ನ ಬಿರುದುಗಳು ಲಭಿಸಿವೆ.
ನಾನು ನನ್ನದು ಎಂಬ ಅಹಮಿಕೆಯು ನನಗಿಲ್ಲ
ನಾನು ಬರೆದಿಹ ಕವಿತೆ ಎಂಬುದೂ ಇಲ್ಲ
ನಾನೊಬ್ಬ ಲಿಪಿಕಾರ; ಒಳಗೆ ಕಬ್ಬಿಗನಿಹನು
ನಾನು ಪರತಂತ್ರದವ- || ಪ್ರತ್ಯಗಾತ್ಮ ||
ನಾನು ಪಂಡಿತನಲ್ಲ; ಪಾಂಡಿತ್ಯವೆನಗಿಲ್ಲ,
ನಾನಂತು ಸುಜ್ಞಾನಿ ಅಲ್ಲವೇ ಅಲ್ಲ
ನಾನೊಬ್ಬ ನಾಡಾಡಿ ನಾಡು ನುಡಿಯಭಿಮಾನಿ
ನಾನೊಬ್ಬ ಕನ್ನಡಿಗ- || ಪ್ರತ್ಯಗಾತ್ಮ ||
ಬಾಳಿನಲಿ ಕಂಡುಂಡ ಅನುಭವದ ಸಾರವನು
ನಾಳೆ ಬಹಳ ಮಕ್ಕಳಿಗೆ ನೆರವಾಗಲೆಂದು
ಹಾಳೆಯಲಿ ಬರೆದಿಹೆನು ಚುಟುಕರೂಪದಿ ಅದನೆ
ಬೀಳುಗಳೆಯಲು ಬೇಡ- || ಪ್ರತ್ಯಗಾತ್ಮ ||
ತುಂಕೂರು ಸಂಕೇತ್
2 Comments
Shri Nenumshi was my paternal aunt’s and I had the privilege of hearing him on various occasions. There was a strong urge in him to share to the Society members whatever he had learnt and experienced during his life time. He had a special liking for me.
He was highly knowledgeable besides a oted poet he was a highly dedicated teacher. He has dedicated his entire life for pursuing knowledge and reduced it to writing for the benefit of existing ad forthcoming generations. His all the 3 sons have imbibed his art of writing and also have been continuing his legacy.
Thank you for sharing the information.we are proud of our Guru!
Sahasra pranamagalu.