ಮನಸಿನ ಸವಿಭಾವ

ಮನಸಿನ ಸವಿಭಾವ ಮನಸಿನ ಲಹರಿಗೆ ತಾನೆಂದೂಸಿಗದೆನ್ನುವ ಭಾವ ಹೃದಯಕೆ!ಸಿಕ್ಕರೂ ತನಗೇನೂ ನಷ್ಟವಿರದೆನ್ನುವ..ನಿರಾಳತೆಯ ಭಾವ ಅಂತರಾಳಕೆ!! ಮನಸಲಿ ನಡೆವ ತುಮುಲಗಳಬೇರ್ಪಡಿಸುವ ಭಾವ ಚಿಂತನೆಗೆ!ಆ ಚಿಂತನೆಯಲೇ ಸಂತಸವನು..ಅರಸುವ ಭಾವ ನಿತ್ಯವೂ ಚಿತ್ತಕೆ!! ಮನದ ಸಾಗರದಿ ಏಳುವಚಿಂತೆಯಲೆಗಳ ಉಬ್ಬರ ಮುಗಿಲೆತ್ತರಕೆ!ದೇವರ ಲೀಲೆಯ ನಿತ್ಯ ಪ್ರಶ್ನಿಸುವವ..ಕಾಯಬಾರದೇ ಅವನ ಉತ್ತರಕೆ!! ಮನಸೆಂಬ ಬನದಲಿ ಸ್ನೇಹದಂಕುರಚಿಗುರಲು ಬದುಕಲಿ ಸಡಗರ!ಅದು ಕೊಡುವ ಪ್ರತಿಫಲದ..ಸಿಹಿಯ ಸವಿಯಲು ಬಾಳು ಮಧುರ!! ಸುಮನಾ ರಮಾನಂದಕೊಯಮತೂರ್Read More

ರಾಷ್ಟ್ರಕವಿ ಕುವೆಂಪು ಒಂದು ಕಿರು ನೋಟ – ಪುಸ್ತಕ ಪರಿಚಯ

ರಾಷ್ಟ್ರಕವಿ ಕುವೆಂಪು ಒಂದು ಕಿರು ನೋಟ – ಪುಸ್ತಕ ಪರಿಚಯ ಲೇಖಕಿ ಮಾನಸ ರವರು ಆರು ಕಾದಂಬರಿಗಳನ್ನು, ಐದು ಕವನ ಸಂಕಲಗಳನ್ನು, ಒಂದು ಸಂಶೋಧನಾ ಕೃತಿಯನ್ನು, ನಾಲ್ಕು ಜೀವನ ಚರಿತ್ರಗಳನ್ನು, ಮಕ್ಕಳಿಗಾಗಿ ಮೂರು ಪುಸ್ತಕಗಳನ್ನು ಬರೆದಿದ್ದಲ್ಲದೆ 14 ಕೃತಿಗಳನ್ನು ಸಂಪಾದಿಸಿದ್ದಾರೆ, ಅಷ್ಟೇ ಅಲ್ಲದೆ ಇನ್ನಿತರ ಎಂಟು ಕೃತಿಗಳನ್ನು ಅವರು ಬರೆದಿದ್ದಾರೆ ಹಾಗೆ ಇತರರೊಡನೆ ಸೇರಿ ಇವರು ಸಂಪಾದಿಸಿರುವ ಐದು ಕೃತಿಗಳು ಪ್ರಕಟಣೆ ಕಂಡಿವೆ. ಲೇಖಕಿ ಸ್ವತಃ ಹೇಳಿರುವಂತೆ ಈ ಪುಸ್ತಕವು ಕುವೆಂಪು ಅವರನ್ನು ಆಳವಾಗಿ ಅಧ್ಯಯನ ಮಾಡಿ […]Read More

ದಖ್ಮಾ – ಪಾರ್ಸಿಗಳ ಶವಸಂಸ್ಕಾರದ ವಿಭಿನ್ನ ಪದ್ಧತಿ

ದಖ್ಮಾ – ಪಾರ್ಸಿಗಳ ಶವಸಂಸ್ಕಾರದ ವಿಭಿನ್ನ ಪದ್ಧತಿ ಭಾರತವನ್ನು ಸರ್ವಧರ್ಮ ಸಹಿಷ್ಣುತೆಯ ದೇಶ ಎನ್ನುತ್ತಾರೆ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಷ್ಚಿಯನ್, ಜೈನ ಮತ್ತು ಪಾರ್ಸಿ ಇತ್ಯಾದಿ ಧರ್ಮೀಯರು ವಾಸಿಸುತ್ತಿದ್ದಾರೆ. ಪಾರ್ಸಿ ಎಂದರೆ ಭಾರತದಲ್ಲಿ ವಾಸಿಸುವ ಜೊರಾಸ್ಟ್ರಿಯನ್ ಧರ್ಮದ ಅನುಯಾಯಿಗಳ ಒಂದು ಸಮುದಾಯ. ಇವರು ಮೂಲತಃ ಇರಾನ್ ದೇಶದವರಾಗಿದ್ದು, ಅಲ್ಲಿನ ಅನುಚಿತ ರಾಜಕೀಯ ವಿದ್ಯಾಮಾನಗಳಿಂದ ಹಾಗು ದಬ್ಬಾಳಿಕೆಗಳಿಂದ ಬೇಸತ್ತು ಭಾರತಕ್ಕೆ ವಲಸೆ ಬಂದು ಮುಂಬೈ ಮತ್ತು ಗುಜರಾತ್ ರಾಜ್ಯಗಳಲ್ಲಿ ನೆಲೆನಿಂತರು. ಇವರನ್ನು ಪರ್ಷಿಯನ್ನರು ಅಥವಾ ಪಾರ್ಸಿಗಳು ಎಂದು ಕರೆಯುತ್ತಾರೆ. […]Read More

ಚಿತ್ರಕಲಾಪ್ರದರ್ಶನ – ಸಂಸ್ಕಾರ ಭಾರತೀ ಕರ್ನಾಟಕ

ಚಿತ್ರಕಲಾಪ್ರದರ್ಶನ – ಸಂಸ್ಕಾರ ಭಾರತೀ ಕರ್ನಾಟಕ ಸ್ವಾಭಿಮಾನ ಭಾರತ್ ಮತ್ತು ಸಂವಿಧಾನ75 – ಸಂಸ್ಕಾರ ಭಾರತೀ ಕರ್ನಾಟಕ (ನೋಂ) ದಕ್ಷಿಣ ಪ್ರಾಂತ ದೃಶ್ಯ ಕಲಾ ವಿಭಾಗವು ಮೇಲ್ಕಂಡ ಶೀರ್ಷಿಕೆಯಲ್ಲಿ ಆಯೋಜಿಸಿದ್ದಚಿತ್ರಕಲಾಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಶುಕ್ರವಾರ ಬೆಳಿಗ್ಗೆ ಖ್ಯಾತ ಕಲಾವಿದರಾದ ಶ್ರೀ ಚಂದ್ರನಾಥ ಆಚಾರ್ಯ ಅವರಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಬಸವನಗುಡಿಯಲ್ಲಿ ಉದ್ಘಾಟನೆಗೊಂಡಿತು. ದೃಶ್ಯ ಕಲಾ ವಿಭಾಗದ ಪ್ರಾಂತ ಕಲಾ ಸಂಯೋಜಕರಾದ ಹಾಗೂ ಉತ್ಕೃಷ್ಟ ಕಲಾವಿದರೂ ಆದ ಶ್ರೀ ಗಣಪತಿ ಹೆಗಡೆ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ […]Read More

ಕಲಾ ಪ್ರದರ್ಶನ – ಸಂಸ್ಕಾರ ಭಾರತೀ ವತಿಯಿಂದ….

ಕಲಾ ಪ್ರದರ್ಶನ – ಸಂಸ್ಕಾರ ಭಾರತೀ ವತಿಯಿಂದ…. ಸ್ವಾಭಿಮಾನ ಭಾರತ್ ಮತ್ತು ಸಂವಿಧಾನ 75 ರ ಶೀರ್ಷಿಕೆಯಡಿಯಲ್ಲಿ ಕಲಾ ಪ್ರದರ್ಶನವನ್ನುಸಂಸ್ಕಾರ ಭಾರತೀ ಕರ್ನಾಟಕ, ದಕ್ಷಿಣ ಪ್ರಾಂತ ದೃಶ್ಯಕಲಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕಲಾ ಪ್ರದರ್ಶನದಲ್ಲಿ ಕರ್ನಾಟಕದ ಖ್ಯಾತ 75ಕ್ಕೂ ಹೆಚ್ಚು ಕಲಾವಿದರು ಐತಿಹಾಸಿಕ, ಸಾಮಾಜಿಕ, ರಾಜಕೀಯ, ತಂತ್ರಜ್ಞಾನ ಕ್ಷೇತ್ರ ಒಳಗೊಂಡಂತೆ ತಮ್ಮ ಕಲಾಕೃತಿಗಳನ್ನು ಪ್ರದರ್ಶನಗೊಳಿಸಲಿದ್ದಾರೆ. ದಿನಾಂಕ 12.06.2026, ಶುಕ್ರವಾರ ಬೆಳಗ್ಗೆ 10:30ಕ್ಕೆ ಖ್ಯಾತ ಕಲಾವಿದರಾದ ಶ್ರೀ ಎಸ್ ಜಿ ವಾಸುದೇವ್ ಕಲಾಪ್ರದರ್ಶನ ಉದ್ಘಾಟಿಸಲಿದ್ದು, ಸಂಸ್ಕಾರ ಭಾರತೀ ಕರ್ನಾಟಕ […]Read More

ಅಮ್ಮ – ಅಜರಾಮರ….

ಅಮ್ಮ – ಅಜರಾಮರ…. ಜಗತ್ತಿನಲ್ಲಿ ಎಷ್ಟೋ ಸಂಬಂಧಗಳಿರಬಹುದು, ಆದರೆ ತಾಯಿ ಮತ್ತು ಮಗುವಿನ ನಡುವಿನ ಬಂಧಕ್ಕೆ ಸಾಟಿಯೇ ಇಲ್ಲ. ಇದು ಕೇವಲ ರಕ್ತದ ಸಂಬಂಧವಲ್ಲ, ಬದಲಿಗೆ ಎರಡು ಆತ್ಮಗಳ ನಡುವಿನ ಅವಿನಾಭಾವ ಬೆಸುಗೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ, ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ಅರಸ ಶ್ರೀ ಕೃಷ್ಣದೇವರಾಯ ಕೇವಲ ಒಬ್ಬ ಶೂರ ಯೋಧ ಅಥವಾ ದಕ್ಷ ಆಡಳಿತಗಾರ ಮಾತ್ರವಲ್ಲ, ಆತ ಒಬ್ಬ ಪರಮ ಮಾತೃಭಕ್ತ ಕೂಡ ಹೌದು. ಇತಿಹಾಸದ ಪುಟಗಳಲ್ಲಿ ರಾಜರು ತಮ್ಮ ವೈಭವಕ್ಕಾಗಿ ಅರಮನೆಗಳನ್ನು ಅಥವಾ […]Read More

ಬಿ‌ ಎಸ್ ದೇಸಾಯಿ – ಬಹುಮುಖ ಪ್ರತಿಭೆಯ ಕಲಾವಿದ‌

ಬಿ‌ ಎಸ್ ದೇಸಾಯಿ – ಬಹುಮುಖ ಪ್ರತಿಭೆಯ ಕಲಾವಿದ‌ ನಮ್ಮ ನಾಡಿನ ಹಿರಿಯ ಕಲಾವಿದರು ಹಾಗೂ ಛಾಯಾಚಿತ್ರಗಾರರು ಆದ ಬಿ ಎಸ್ ದೇಸಾಯಿ ರವರಿಗೆ ಇತ್ತೀಚಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕಾರ ಹುಡುಕಿಕೊಂಡು ಬಂದಿದೆ. ಸರಳ ಸಜ್ಜನ ಮೃದು ಭಾಷಿ ಬಿ.ಎಸ್.ದೇಸಾಯಿ ಯವರು ಪ್ರಸ್ತುತ ಹಾಸನದಲ್ಲಿ ನೆಲೆಸಿರುವ ಸಮಕಾಲೀನ ದೃಶ್ಯ ಕಲಾವಿದ. ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರಾದ ಇವರು ಚಿತ್ರಕಲೆಯ ಮೂಲಕ ತಮ್ಮ ಬದುಕಿನ ಅರ್ಥವನ್ನು ಕಂಡುಕೊಂಡಿದ್ದಾರೆ. ಇವರ ಕಲಾ ಪಯಣವು ಪ್ರಕೃತಿಯ […]Read More

ಬದಲಾಗು ನೀ ಬೆಳಕಾಗು ನೀ – ಪುಸ್ತಕ ಬಿಡುಗಡೆ

ಬದಲಾಗು ನೀ ಬೆಳಕಾಗು ನೀ – ಪುಸ್ತಕ ಬಿಡುಗಡೆ ಕೊಪ್ಪಳದ ಶ್ರೀ ಗವಿಮಠದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಇವರ ನಾಲ್ಕನೇ ಕೃತಿ “ಬದಲಾಗು ನೀ ಬೆಳಕಾಗು ನೀ” ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪರಮಪೂಜ್ಯ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಬಿಡುಗಡೆಯಾಯಿತು. ಪರಮ […]Read More

ಅಂಗವಿಕಲತೆ ಶಾಪವಲ್ಲ ಅದೊಂದು ಅವಕಾಶ – ಜೆಸ್ಸಿಕಾ ಕಾಕ್ಸ್

ಅಂಗವಿಕಲತೆ ಶಾಪವಲ್ಲ ಅದೊಂದು ಅವಕಾಶ – ಜೆಸ್ಸಿಕಾ ಕಾಕ್ಸ್ ಅಂಗವೈಕಲ್ಯ ಒಂದು ರೀತಿಯಲ್ಲಿ ವ್ಯಕ್ತಿಯ ಕೊರತೆಯಲ್ಲ ಎನ್ನಬಹುದು, ಬದಲಿಗೆ ಸಾಧನೆಯ ಹಸಿವು ಇರುವರಿಗೆ ಅದೊಂದು ಅವಕಾಶವೇ ಸರಿ. ವಿಕಲಚೇತನರೂ ಇಂದು ಮಹತ್ತರವಾದ ಸಾಧನೆಯನ್ನು ಮಾಡಿ ಪ್ರಾಪಂಚಿಕ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಅವರ ಪೈಕಿ ನಿಕ್ ವುಜಿಸಿಕ್, ಜೆಸ್ಸಿಕಾ ಕಾಕ್ಸ್, ಮಾನಸಿ ಜೋಶಿ, ಆಸ್ಕರ್ ಪಿಸ್ಟೋರಿಯಸ್ ಮೊದಲಾದವರು ಪ್ರಮುಖರು. ಜೆಸ್ಸಿಕಾ ಕಾಕ್ಸ್ ಗರ್ಭಾವಸ್ಥೆಯಲ್ಲಿ ಕಂಡುಬರುವ ಅನುವಂಶಿಕ ರೋಗದ ಕಾರಣದಿಂದ ಹುಟ್ಟುವಾಗಲೇ ತೋಳುಗಳಿಲ್ಲದೆ ಹುಟ್ಟಿದಳು. ನನಗೇಕೆ ಎಲ್ಲಾ […]Read More

ಮಾರ್ಕೋಲು – ವಿಧಿಯಾಟದ ಕಾದಂಬರಿ

ಮಾರ್ಕೋಲು – ವಿಧಿಯಾಟದ ಕಾದಂಬರಿ ಪುಸ್ತಕ – ಮಾರ್ಕೋಲುಲೇಖಕರು – ಆಶಾ ರಘುಪ್ರಕಟಣೆ : ಉಪಾಸನ ಬುಕ್ಸ್ ಮಾರ್ಕೋಲು’ ಆಶಾ ರಘು ಅವರು ರಚಿಸಿದ ಒಂದು ಜಾನಪದ ಆಧಾರಿತ ಕಾದಂಬರಿ. ಅವರೇ ತಿಳಿಸಿರುವಂತೆ. ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ಗೆ ಸಮಾನವಾದ ಕಥಾವಸ್ತುವನ್ನು ಹೊಂದಿರುವ ಈ ಕಥೆಯ ನಡು ನಡುವೆ ಲೇಖಕರು ‘ಸಂತಾಲಿ’, ‘ಮರಾಠಿ’, ತಮಿಳು ಕನ್ನಡ ಮೊದಲಾದ ಭಾಷೆಯ ಜನಪದ ಕಥೆ- ಉಪಕಥೆಗಳನ್ನೂ ಬಳಸಿದ್ದಾರೆ. ಇದು ಕಾದಂಬರಿಗೆ ವಿಶೇಷ ಮೆರಗು ನೀಡುವಂತಿದೆ. ಬಾಲ್ಯದಲ್ಲಿ ಲೇಖಕಿಗೆ ಸಂಪಿಗೆ ಲಕ್ಷ್ಮಮ್ಮನವರು ಹೇಳುತ್ತಿದ್ದ […]Read More