ಅಂಬಿಗಾ! ದಡ ಹಾಯಿಸು…

ಭಾರತೀಯ ವೇದಾಂತ ಆಧುನಿಕ ಭೌತವಿಜ್ಞಾನದ ಸಮಸ್ಯೆಗಳನ್ನು ಪರಿಹರಿಸಲು ಸ್ಫೂರ್ತಿ ಎನ್ನುವವರು ಪ್ರೊ ಎಚ್‌ಆರ್‌ಆರ್.

ಪ್ರೊ ಎಚ್ ಆರ್ ರಾಮಕೃಷ್ಣರಾವ್

ಪ್ರೊ ಎಚ್ ಆರ್ ರಾಮಕೃಷ್ಣರಾವ್ ನಾಡಿನ ಹೆಸರಾಂತ ಭೌತವಿಜ್ಞಾನ ಪ್ರಾಧ್ಯಾಪಕರು, ವಿಜ್ಞಾನ ಲೇಖಕರು, ಸಂವಹನಕಾರಾದ ಪ್ರೊ ಎಚ್‌ಆರ್‌ಆರ್ ಈ ಕ್ಷೇತ್ರದ ಬಹುದೊಡ್ಡ ಹೆಸರು. ಬರೆಹ, ಭೌತವಿಜ್ಞಾನ ಪಠ್ಯಪುಸ್ತಕ ರಚನೆ, ಸ್ನಾತಕೋತ್ತರ ಅಧ್ಯಯನಕ್ಕೆ ಪಠ್ಯಕ್ರಮ ವಿನ್ಯಾಸ, ಆಕಾಶವಾಣಿ, ದೂರದರ್ಶನಗಳಲ್ಲಿ ವಿಜ್ಞಾನ ಬೋಧನೆ ಹಾಗೂ ಖ್ಯಾತ ವಿಜ್ಞಾನಿಗಳ ಸಂದರ್ಶನ ನಡೆಸಿ ಉನ್ನತವಿಜ್ಞಾನವನ್ನು ಜನಮಾನಸಕ್ಕೆ ಹತ್ತಿರ ತಂದವರು. ಸಾಕ್ಷ್ಯಚಿತ್ರದಂತಹ ಮಾಧ್ಯಮಗಳಲ್ಲೂ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡವರು. ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಅಮೂಲ್ಯ ಸೇವೆ ಸಲ್ಲಿಸಿದವರು. ದೇಶ-ವಿದೇಶಗಳಲ್ಲಿ ವಿಸ್ತ್ರತ ಪ್ರವಾಸ, ಚಾರಣ, ವಿವಿಧ ವಿಶ್ವವಿದ್ಯಾಲಯಗಳಿಗೆ ಭೇಟಿ, ನಿರಂತರ ಜ್ಞಾನಾರ್ಜನೆ ಅವರ ಬದುಕಿನ ಅವಿಭಾಜ್ಯ ಅಂಗ. ಮೇಲಿನೆಲ್ಲವುದರ ಜೊತೆಗೆ ರಾಮಕೃಷ್ಣರಾವ್ ಅವರು ಒಬ್ಬ ಅತ್ಯುತ್ತಮ ಪತಿ, ತಂದೆ, ಬಂಧು, ಸ್ನೇಹಿತ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿ. ದೇಶ-ವಿದೇಶಗಳಲ್ಲಿ ವಿಸ್ತ್ರತ ಪ್ರವಾಸ, ಚಾರಣ, ವಿವಿಧ ವಿಶ್ವವಿದ್ಯಾಲಯಗಳಿಗೆ ಭೇಟಿ, ನಿರಂತರ ಜ್ಞಾನಾರ್ಜನೆ ಅವರ ಬದುಕಿನ ಅವಿಭಾಜ್ಯ ಅಂಗ. ಮೇಲಿನೆಲ್ಲವುದರ ಜೊತೆಗೆ ರಾಮಕೃಷ್ಣರಾವ್ ಅವರು ಒಬ್ಬ ಅತ್ಯುತ್ತಮ ಪತಿ, ತಂದೆ, ಬಂಧು, ಸ್ನೇಹಿತ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿ.

ಇಂತಹ ಅದ್ಬುತ ವ್ಯಕ್ತಿಯ ಆತ್ಮಕಥೆಯನ್ನು ಬೆಂಗಳೂರಿನ “ಉದಯ ಭಾನು ಕಲಾಸಂಘವು” ವಿಜ್ಞಾನ, ಗಣಿತ ಹಾಗು ವನ್ಯ ಜೀವಿ ಸಂರಕ್ಷಣಾ ಶಿಕ್ಷಕರಾದ ಶ್ರೀ “ನವೀನ್ ಕಲ್ಗುಂಡಿ” ಯವರ ನಿರೂಪಣೆಯಲ್ಲಿ “ಅಂಬಿಗಾ! ದಡ ಹಾಯಿಸು” ಎಂಬ ಪುಸ್ತಕ ರೂಪದಿ ಹೊರತಂದಿದ್ದಾರೆ. ಅವರ ಜೀವನಗಾಥೆ ಸಾಧನೆಗಳು ಇಲ್ಲಿ ಹದಿನಾರು ಅಧ್ಯಾಯಗಳು ಹಾಗೂ ಎಂಟು ಅನುಬಂಧಗಳಲ್ಲಿ ಮೂಡಿಬಂದಿದೆ. ವೈಯಕ್ತಿಕ ವಿಷಯವೇ ಆಗಿರುವಂತಹ ಆತ್ಮಕತೆಯಲ್ಲಿಯೂ ಸಾರ್ವತ್ರಿಕವಾಗಿ ಸಮಷ್ಠಿ ಹಿತದ ವಿಷಯಗಳೇ ತುಂಬಿದೆ ಎಂದರೆ ಆ ವ್ಯಕ್ತಿಯ ಶ್ರೇಷ್ಠತೆಯ ಮಟ್ಟ ಅರಿವಾಗೆ ಬರುತ್ತದೆ. ಜೀವನದ ಒಂದು ಹಂತದಲ್ಲಿ ಓದನ್ನು ನಿಲ್ಲಿಸಬೇಕಾಗಿ ಬಂದರೂ ಬಂದ ಸವಾಲನ್ನು ಯಶಸ್ವಿಯಾಗಿ ಎದುರಿಸಿ, ಪರಿಸ್ಥಿತಿ ಸರಿಯಾದ ಕೂಡಲೆ ಮತ್ತೆ ಕಾಲೇಜಿಗೆ ಸೇರಿ ತಮ್ಮ ಯೋಜಿತ ಗುರಿ ತಲುಪಿ ಯಶಸ್ಸು ಕಂಡರು. ಅಧ್ಯಾಪಕನೊಬ್ಬನ ಯಶಸ್ಸು ಕನಿಷ್ಠ ಮೂರುಪೀಳಿಗೆಯ ಯಶಸ್ಸಾಗಿರುತ್ತದೆ ಎಂಬುದನ್ನು ಮರೆಯಬಾರದು. “ಹೊರಜಗತ್ತು ಅದೆಷ್ಟು ಕಷ್ಟಪಟ್ಟಿರಿ!” ಎಂದಾಗ “ನನಗೆ ಎಂದೂ ಕಷ್ಟವೇ ಇರಲಿಲ್ಲ. ಆನಂದವಾಗಿಯೇ ಇದ್ದೆ” ಎಂಬುದರಲ್ಲಿ ಅವರ ಜೀವನದ ಔನತ್ಯ ಅಡಗಿದೆ.

ನವೀನ್ ಕಲ್ಗುಂಡಿ – ಪುಸ್ತಕ ನಿರೂಪಕರು

ಶ್ರೀ ನವೀನ್ ಕಲ್ಗುಂಡಿ ಯವರು ಮೂಲತಃ ಗಣಿತ ಹಾಗು ವಿಜ್ಞಾನ ಶಿಕ್ಶಕರು ಹಾಗು ವನ್ಯಜೀವಿ ಸಂರಕ್ಷಕರು ಕೂಡ. ಅವರ ನೂರಕ್ಕೂ ಹೆಚ್ಚು ಲೇಖನಗಳು ಕನ್ನಡ ಹಾಗು ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನವೀನ್ ರವರು ವಿಜ್ಞಾನ ಸಂವಹನದಲ್ಲಿಯೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಮಹತ್ವದ ಯೋಜನೆಗಳಾದ “ಕನ್ನಡ ವಿಶ್ವಕೋಶ” ಕರ್ನಾಟಕ ಕಲಾದರ್ಶನ, ಬೆಂಗಳೂರು ದರ್ಶನಗಳಲ್ಲಿ ಸಹ ಲೇಖನಗಳನ್ನು ಬರೆದಿದ್ದಾರೆ.

ಇದೇ ಭಾನುವಾರ ತಾ|| 19-09-2021 ರಂದು ಬೆಂಗಳೂರಿನ ಕೆಂಪೇಗೌಡ ನಗರದ “ಉದಯಭಾನು ಸಭಾಂಗಣದಲ್ಲಿ” ಪುಸ್ತಕ ಬಿಡುಗಡೆಯಾಗಲಿದೆ. ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಡಾ ಎಸ್ ಎಸ್ ಅಯ್ಯಂಗಾರ್ ಅದ್ಯಕ್ಷತೆಯಲ್ಲಿ ಶುರುವಾಗಲಿದೆ. ಶ್ರೀ “ನವೀನ್ ಕಲ್ಗುಂಡಿ” ಆತ್ಮಕತೆ ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ. ಪುಸ್ತಕದ ಮೂಲ ಬೆಲೆ 200 ರೂಪಾಯಿಗಳು ಆದರೆ ಕಾರ್ಯಕ್ರಮದಲ್ಲಿ 100 ರೂಪಾಯಿಗಳಿಗೆ ಪುಸ್ತಕ ಪಡೆಯಬಹುದು. ಆಸಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕ್ಕಾಗಿ ವಿನಂತಿ.

ಕಾರ್ಯಕ್ರಮ ನೆಡೆಯುವ ಜಾಗದ ಮಾಹಿತಿ

ಉದಯಭಾನು ಸಾಂಸ್ಕೃತಿಕ ಸಭಾಂಗಣ
ಗವಿಪುರ ಸಾಲು ಛತ್ರಗಳ ಎದುರು
ಕೆಂಪೇಗೌಡನಗರ, ರಾಮಕೃಷ್ಣ ಬಡಾವಣೆ,
ಬೆಂಗಳೂರು – 560019

ಪ್ರಕಟಣೆ : ಸಾಹಿತ್ಯಮೈತ್ರಿ ತಂಡ

Related post

2 Comments

  • ತುಂಬ ಧನ್ಯವಾದಗಳು! ಇದೊಂದು ಮಹತ್ವದ ಪುಸ್ತಕ. ಶಿಕ್ಷಣ ಕುರಿತಾಗಿ ಆಳವಾದ ಚಿಂತನೆಗಳಿವೆ.

  • ಮಾತಹರಿ ಪುಸ್ತಕ ಸ್ವಲ್ಪ ಓದಿದೆ. ಚೆನ್ನಾಗಿದೆ. ನನಗೆ ಇಂಥ ಸಾಹಸ ಕತೆಗಳು ಬಾಲ್ಯ ದಿಂದಲು ಓದಲು ಇಷ್ಟ. ಇದರಲ್ಲಿ ಜೇವವನ್ನೇ ಪನ ವಾಗಿಟ್ಟು ಆಡುವ ಆಟ.

Leave a Reply

Your email address will not be published. Required fields are marked *