UTI -ಮೂತ್ರನಾಳದ ಸೋಂಕು ಈ ಸೋಂಕು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳವನ್ನು ಬಾಧಿಸುತ್ತದೆ.ಈ ದಿನಗಳಲ್ಲಿ ಇದೊಂದು ಸಾಮಾನ್ಯ ಸೋಂಕಾಗಿದ್ದು, ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮೂತ್ರನಾಳದ ಸೋಂಕಿಗೆ ಕಾರಣಗಳು ಇ-ಕೊಲೈ ಬ್ಯಾಕ್ಟೀರಿಯಾದಾ ಸೋಂಕುಕಡಿಮೆ ನೀರು ಕುಡಿಯುವುದುನೀರನ್ನೇ ಕುಡಿಯದೆ ಇರುವುದು,ಅತಿಯಾದ ಹುಳಿಯುಕ್ತ, ಮಸಾಲೆಯುಕ್ತ ಪದಾರ್ಥ ಸೇವನೆ, ಹೆಚ್ಚು ಸಕ್ಕರೆ ಇರುವ ಆಹಾರ ಸೇವನೆಕಾರ್ಬೊನೇಟೆಡ್ ಪಾನೀಯಗಳು,ಕಾಫಿ, ಚಾಕೊಲೇಟುಗಳನ್ನು ಅತಿಯಾಗಿ ತಿನ್ನುವುದು,ಅಸುರಕ್ಷಿತ ಲೈಂಗಿಕ ಕ್ರಿಯೆ,ಶುಚಿಯಿಲ್ಲದ ಶೌಚಾಲಯದ ಬಳಕೆ,ಲೈಂಗಿಕ ಕ್ರಿಯೆಯ ಸಮಯದಲ್ಲಿ ಕೀಟಾಣುಗಳು ಮೂತ್ರನಾಳಕ್ಕೆ ಹೋದಾಗ ಮೂತ್ರನಾಳದ ಸೋಂಕು ಉಂಟಾಗುತ್ತದೆ. ಹಾರ್ಮೋನ್ ಬದಲಾವಣೆಗಳು,ಮೂತ್ರಪಿಂಡದ […]Read More
ಮಾರ್ಕೋಲು… ಒಂದು ಜಾನಪದ ಕಾದಂಬರಿ ಕೃತಿ: ಮಾರ್ಕೋಲುಲೇಖಕರು: ಶ್ರೀಮತಿ ಆಶಾ ರಘುಪ್ರಕಟಣೆ: ಉಪಾಸನ ಬುಕ್ಸ್ ಶ್ರೀಮತಿ ಆಶಾ ರಘು ರವರ ಮಾತು: “ನಮ್ಮ ಕುಟುಂಬದಲ್ಲಿ ಒಬ್ಬರಾಗಿ ಬೆರೆತುಹೋಗಿರುವ ಸಂಪಿಗೆ ಲಕ್ಷ್ಮಮ್ಮನವರು ನನ್ನ ಬಾಲ್ಯದ ದಿನಗಳಲ್ಲಿ ಪುನರಾವರ್ತಿತವಾಗಿ ಹೇಳುತ್ತಿದ್ದ ವಿಧಿಯಮ್ಮನ ಜನಪದ ಕಥೆಯು ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ ನಾಟಕಕ್ಕೆ ಹೋಲುತ್ತಿದ್ದುದನ್ನು ಸಾಹಿತ್ಯಾಸಕ್ತಿ ಬೆಳೆದ ನಂತರದ ದಿನಗಳಲ್ಲಿ ಕಂಡುಕೊಂಡೆ. ಸಿಗ್ಮಂಡ್ ಫ್ರಾಯ್ಡ್ ಈ ಕಥೆಯ ಹಿನ್ನೆಲೆಯಲ್ಲಿ ‘ಈಡಿಪಸ್ ಕಾಂಪ್ಲೆಕ್ಸ್’ ಎಂಬ ಮಾನಸಿಕ ಪರಿಕಲ್ಪನೆಯೊಂದನ್ನು ಹೆಸರಿಸಿದ್ದಾನೆ. ವಿಧಿಯಮ್ಮನ ಕಥೆಯನ್ನು ಕಾದಂಬರಿಯಾಗಿಸುವ ಕನಸು […]Read More
“ರೇಮಂಡ್ಸ್” ಅಧಿಪತಿಯ ಕರುಣಾಜನಕ ಕಥೆ… ಶ್ರೀಮಂತಿಕೆ ಶಾಶ್ವತವಲ್ಲ. ತಾನೊಬ್ಬ ಶ್ರೀಮಂತ ವ್ಯಕ್ತಿ ಆಗಬೇಕೆಂಬ ಬಯಕೆ ಇಂದಿನ ದಿನದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಇರುವುದು ಸಹಜ. ನಿಜವಾಗಿ ಸಂಪತ್ತು ಅಥವಾ ಶ್ರೀಮಂತಿಕೆ ಎನ್ನುವುದು ಒಂದು ವ್ಯಕ್ತಿಯಲ್ಲ, ಬದಲಾಗಿ ಅದೊಂದು ಸಾಧನದ ಪ್ರತಿರೂಪ ಎಂದು ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲದೇ ಭೌತಿಕ ಯುಗದಲ್ಲಿ ಹಣವಿಲ್ಲದ ಜೀವನವನ್ನು ಊಹೆ ಮಾಡುವುದೂ ಅಸಾಧ್ಯ. ಇದಕ್ಕಾಗಿ ಮನುಷ್ಯನು ತನ್ನ ಬದುಕನ್ನು ಸುಲಲಿತ ಮತ್ತು ಆರಾಮ ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತನ್ನು ಗಳಿಸಲು ಹಪಹಪಿಸುತ್ತಾನೆ. ಯಾವುದರಲ್ಲಿ ಆದರೂ ಒಂದಷ್ಟು […]Read More
ಯೋಗಾ ಯೋಗ.. ಯೋಗ ಭಾರತೀಯ ಸಂಸ್ಕೃತಿಯ ಹೆಮ್ಮೆ. ವರ್ಷದ ಅತೀ ದೀರ್ಘ ದಿನವಾದ, ಅಥವಾ ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾದ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲು ಆದಿಯೋಗಿಯಾದ ಶಿವ ಯೋಗವನ್ನು ಸಪ್ತರ್ಷಿಗಳಿಗೆ ಬೋಧಿಸಿದರೆಂದು, ನಂತರ ಯೋಗವೆಂಬುದು ಅಸ್ತಿತ್ವಕ್ಕೆ ಬಂತು ಎಂದು ಹೇಳಲಾಗುತ್ತದೆ. ಆನಂತರ ಆದಿಶೇಷ ಯೋಗದ ವಿಸ್ತಾರತೆಯನ್ನು ತಿಳಿಯುವ ಸಲುವಾಗಿ, ಮತ್ತು ಜಗತ್ತಿಗೆ ತಿಳಿಸುವ ಸಲುವಾಗಿ ಪತಂಜಲಿ ಮಹರ್ಷಿಯಾಗಿ ಜನ್ಮವೆತ್ತಿ ಯೋಗಾಭ್ಯಾಸ ಮಾಡಿ ಭೂಮಿಯಲ್ಲಿ ಯೋಗದ ಮಹತ್ವವನ್ನು ಸಾರಿದರು ಎಂದು […]Read More
ಯಕೃತ್ತು (ಲಿವರ್ ) ಎಂಬ ಸಂಸ್ಕರಣ ಅಂಗ ಇತ್ತೀಚಿಗೆ ಲಿವರ್ ಖಾಯಿಲೆಗಳು ಹೆಚ್ಚಾಗುತ್ತಿವೆಇದು ಅತಿ ಅಪಾಯಕಾರಿ ಹಾಗೂ ದುಬಾರಿ ಖಾಯಿಲೆಆದ್ದರಿಂದ ಇವತ್ತು ಅದರ ಆರೋಗ್ಯದ ಬಗ್ಗೆ ತಿಳಿದುಕೊಳ್ಳೋಣ. ಯಕೃತ್ತು ಒಂದು ಜೀವಧಾರಕ ಅಂಗ. ಚಯಾಪಚಯ ಎಂದರೆ ಜೀವಿಯಲ್ಲಿ ಆರೋಗ್ಯ ಸ್ಥಿತಿಯ ಜೈವಿಕ ಕ್ರಿಯೆಯಾಗಿ ನಿರಂತರ ಜರಗುವ ಸಮಸ್ತ ರಾಸಾಯನಿಕ ಕ್ರಿಯೆಗಳು ಮತ್ತು ಶಕ್ತಿಯ ಬಿಡುಗಡೆ ಈ ಕಾರ್ಯದಲ್ಲಿ ಯಕೃತ್ತು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಯಕೃತ್ತು 11/2 kg ತೂಕ ಇದ್ದು, ಸಮವಾಗಿಲ್ಲದ 4 ಭಾಗಗಳನ್ನು ಒಳಗೊಂಡಿದೆ. ಇದು […]Read More
ಗುಮ್ನಾಮಿ ಬಾಬಾ – ಸುಭಾಷ್! ಉತ್ತರ ಪ್ರದೇಶದ ಅಯೋಧ್ಯೆಯ ಸಮೀಪದ ಪಟ್ಟಣವಾದ ಫೈಜಾಬಾದಿನಲ್ಲಿ 1985ರವರೆಗೆ ವಾಸವಾಗಿದ್ದು, ಆ ರಾಜ್ಯದಾದ್ಯಂತ ಸುತ್ತಾಡುತ್ತಿದ್ದ ಸನ್ಯಾಸಿಯೊಬ್ಬರನ್ನು ಅಲ್ಲಿನ ಜನರು ಭಗವಾನ್, ಬಾಬಾಜಿ, ಗುಮ್‌ನಾಮಿ ಬಾಬಾ ಎಂದೆಲ್ಲಾ ಕರೆಯುತ್ತಿದ್ದರು. ಫೈಜಾಬಾದ್ ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರು ತನ್ನನ್ನು ಭೇಟಿ ಮಾಡುವ ಭಕ್ತಾದಿಗಳನ್ನು ಮುಖಕ್ಕೆ ಮುಖ ಕೊಟ್ಟು ಮಾತನಾಡಿಸುವ ಬದಲು ಬಟ್ಟೆಯ ಪರದೆಯ ಒಳಗಡೆಯೇ ಇದ್ದು, ಮಾತಾನಾಡಿಸುತ್ತಿದ್ದರು, ಆದರೆ ಯಾರಿಗೂ ತನ್ನ ಮುಖವನ್ನು ತೋರಿಸುತ್ತಾ ಇರಲಿಲ್ಲ ಎನ್ನುತ್ತಾರೆ ಅಲ್ಲಿನ ಜನರು. ಈ ಕಾರಣಕ್ಕೆ […]Read More
ಆಮೆಯೆಂಬ ಅದ್ಭುತ ಪ್ರಾಣಿ! ಆಮೆ ನಿಧಾನ ವೇಗಕ್ಕೆ ಹೆಸರುವಾಸಿ. ಆದರೆ ಅದು ಜೀವಜಗತ್ತಿನ ಓಟದಲ್ಲಿ ಹಿಂದೆ ಬಿದ್ದಿಲ್ಲ. ಆಮೆ ಮತ್ತು ಮೊಲದ ಓಟದ ಸ್ಪರ್ಧೆಯ ಕಥೆಯನ್ನು ಸಾಕಷ್ಟು ಬಾರಿ ಕೇಳಿ ಕೊನೆಗೆ ಆಮೆಯ ನಿಧಾನವೇ ಪ್ರಧಾನದ ವೇಗವೇ ಉತ್ತಮ ಎಂದು ತೀರ್ಮಾನಿಸಿಯಾಗಿ ಶತಮಾನಗಳೇ ಕಳೆದಿವೆ. ಮೊಲ ಮತ್ತು ಆಮೆ ನಡುವಿನ ಓಟದ ಕಥೆಯು ಅದ್ಭುತವಾದ ಮಕ್ಕಳ ಕಥೆಯಾಗಿದೆ. ನಿಧಾನ ಮತ್ತು ಸ್ಥಿರವಾದ ವೇಗ ಹೊಂದಬೇಕು ಎಂಬುದಕ್ಕೆ ಈ ಕಥೆಯು ಮಕ್ಕಳಿಗೆ ನಿಧಾನ ಮತ್ತು ನಿರಂತರ ಪರಿಶ್ರಮದ ಮಹತ್ವವನ್ನು […]Read More
ಬದುಕಿನ ಲೆಕ್ಕಾಚಾರ At the end of the day, ನಾನೊಮ್ಮೆ ನನ್ನ ಬದುಕನ್ನ ಹಿಂತಿರುಗಿ ನೋಡಿದಾಗ ನನಗೆ ಎಷ್ಟು ಪಾಪ ಪ್ರಜ್ಞೆ ಕಾಡುತ್ತದೆ, ಮತ್ತು ಯಾಕೆ ಕಾಡುತ್ತದೆ. ನಾನೆಷ್ಟು ಬಾರಿ ನಿಜವಾಗಿಯೂ ಬದುಕಿದ್ದೆ, ಮತ್ತು ಹೇಗೆ? ನಾನು ಹೀಗೆ ಮಾಡಬಾರದಿತ್ತ? ಅಥವಾ ಇಲ್ಲ ನಾನು ಮಾಡಿದ್ದು ಸರಿಯಾಗಿಯೆ ಇತ್ತು! ಹೀಗೆ ಎಷ್ಟೊ ಲೆಕ್ಕಾಚಾರಗಳು ಕಣ್ಣೆದುರು ಬಂದು ನಿಂತುಬಿಡಬಹುದು. ಕೆಲವು ವಿಚಾರಗಳು ಕಾಡಬಹುದು, ಕೆಲವೊಂದು ಮನಸ್ಸಿಗೆ ಹತ್ತಿರವೆನಿಸಬಹುದು, ಹಲವು ಕಾಡುವ ಪಾತ್ರಗಳು ಜೀವನದಲ್ಲಿ ಬಂದು ಹೋಗಿರಬಹುದು, ಇದೆಲ್ಲದರ […]Read More
ಏಳು ಬೀಳಿನ ದಾರಿ ನಡೆಯುತ್ತೇನೆ ನಾನುನನ್ನದೇ ಲಯದಲ್ಲಿಮನದೊಳಗಿನಆಲಯದೊಳಗಿಳಿಯುವಪ್ರಯತ್ನ ಮಾಡುತ್ತಾಕೆಲವೊಮ್ಮೆ ತಪ್ಪುತ್ತೇನೆಹೆಜ್ಜೆಗಳ ಲೆಕ್ಕಾಚಾರವನ್ನೂ ಇಣುಕುತ್ತೇನೆ ಅಲ್ಲಿ ಇಲ್ಲಿಕಣ್ಣಿಗೆ ಬೀಳುವಮೂಲೆ ಕಂದರಗಳಲ್ಲಿಎಳೆಯುತ್ತೇನೆ ಪರದೆಆಗಾಗ ಮನದ ಭಾವನೆಗಳಿಗೂ ಹತ್ತುತ್ತೇನೆ ಇಳಿಯುತ್ತೇನೆಗಟ್ಟಿಯಾಗಿ ಹೆಜ್ಜೆಯೂರಲಾರದೇಕಣ್ಣಿನ ಪೊರೆ ಕಳಚಿಹೊಸ ದಾರಿ ಹುಡುಕಲಾಗದೇಯಾವುದೋ ಅರ್ಥಕಂಡುಕೊಳ್ಳುವಲ್ಲಿ ಸೋಲುತ್ತೇನೆ ಆದರೂ ಗೆಲ್ಲುತ್ತೇನೆಸದಾಕಾಲವಲ್ಲದಿದ್ದರೂಸಾವಕಾಶವಾಗಿಆಗೊಮ್ಮೆ ಈಗೊಮ್ಮೆಯಾವುದೋ ಸಣ್ಣ ಬೆಳಕುಹಿಡಿದು ದಾರಿ ಸಾಗುವಾಗ ಸೌಜನ್ಯ ದತ್ತರಾಜRead More