ಕತ್ತಲೆ

ಕತ್ತಲೆ ಇರುಳಿನಲಿ ರಜನಿಯು ಕಾಣದಿರೆಮನದಲಿ ಆಸೆಯು ಬತ್ತುತಲಿಆವರಿಸುವುದು ಜಗದಲಿ ಕತ್ತಲೆ ಬಾನಿನ ಅಂಚಿನಲಿ ನೀ ಕಾಣದಿರಲುಆಸೆಯ ಹೊಂಗಿರಣ ಹೊರಬರದಿರಲುಆವರಿಸುವುದು ಜಗದಲಿ ಕತ್ತಲೆ ನೇತ್ರಗಳಲಿ ಕಾಂತಿಯುಕ್ಕಿದರೂಮನದ ಅಂಗಳದಿ ಬೆಳಕಿದ್ದರೂದೇಹದೊಳಗೆ ಮೂಡಿದ ಕತ್ತಲೆ ಒಮ್ಮೊಮ್ಮೆ ಇಷ್ಟವಾಗುವ ಕತ್ತಲೆಹಾಗೆಯೇ ಬೇಸರ ಮೂಡಿಸುವ ಕತ್ತಲೆದಿನದ ನಾಗಾಲೋಟದಿ ಅನಿವಾರ್ಯ ಕತ್ತಲೆ ಸದ್ವಿಚಾರಗಳ ಬೆಳಕು ಮೊಳೆತುದುರ್ಬುದ್ಧಿಗಳ ಕತ್ತಲೆ ಕಳೆದುಬದುಕ ಬಂಡಿ ಸುಖದಿ ಸಾಗಲಿ ಕಷ್ಟದ ಜೀವನಕೆ ಬೆಳಕಾಗಿಅತಿಯಾಸೆಗೆ ನೀ ಕಪ್ಪಾಗಿಸಮಭಾವದಿ ಬೆಳಗು ನೀ ಕತ್ತಲೆ ಸಿ.ಎನ್. ಮಹೇಶ್Read More

ಹಳೇ ಪಾದಗಳ ಹೊಸ ಹೆಜ್ಜೆಗಳು…

ಹಳೇ ಪಾದಗಳ ಹೊಸ ಹೆಜ್ಜೆಗಳು… ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಡಿ. ವಿ. ಗುಂಡಪ್ಪ ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು ಊಹಿಸಿದ್ದೇ ಸತ್ಯ ಎಂದು ಕೆಲವೊಮ್ಮೆ ಮೂರ್ಖರಂತೆ ವರ್ತಿಸುತ್ತಿರುತ್ತೇವೆ. ನಮ್ಮ ನೋವುಗಳಿಗೆ ಮತ್ಯಾರನ್ನೋ ಹೊಣೆ ಮಾಡಿರುತ್ತೇವೆ. ಯಾವುದೋ, ಯಾರದೋ ವೈಯಕ್ತಿಕ ವಿಷಯಗಳು ನಮ್ಮ ಟೇಬಲ್ ನ ಬಿಸಿ ಬಿಸಿ ಚರ್ಚೆಗಳಾಗಿರುತ್ತವೆ. ಅಂತರಂಗದ ಶಾಂತಿ […]Read More

ಭಾರತೀಯತೆಯ ಅಂತಃಸತ್ವ..

ಭಾರತೀಯತೆಯ ಅಂತಃಸತ್ವ.. “ಭಾರತ” ವಿವಿಧತೆಯಲ್ಲಿ ಏಕತೆಯುಳ್ಳ ಅಗಣಿತ ಸುಂದರತೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಅದ್ಭುತವಾದ ದೇಶ. ‘ಭ’ ಎಂದರೆ ಬೆಳಕು. ಬೆಳಕನ್ನು ಅರಸುತ್ತಾ, ಬೆಳಕಲ್ಲೇ ತಾ ಸೇರಿ ತಾನೇ ಬೆಳಕಾಗುವವ ಭಾರತೀಯ. ಬೆಳಕು ಜ್ಞಾನದ ಸಂಕೇತ. ಇಲ್ಲಿನ ಮಣ್ಣಿನ ಪ್ರತೀ ಕಣ ಕಣದಲ್ಲೂ ಶ್ರೇಷ್ಠ ಭಾವಗಳ ಸಮ್ಮಿಳಿತವಿದೆ. ಒಂದೆಡೆ, ಇಡೀ ವಿಶ್ವಕ್ಕೆ ನಮ್ಮ ದೇಶದ ಸಂಸ್ಕೃತಿಯನ್ನು ಸಾರಿ ತಿಳಿಸಿದ ಸ್ವಾಮಿ ವಿವೇಕಾನಂದರು ಹೇಳುತ್ತಾರೆ ‘ ಜಗತ್ತಿನ ಯಾವುದೇ ಮೂಲೆಯಲ್ಲಿ ಒಳಿತು ಎನ್ನುವಂತಹ ವಿಚಾರಧಾರೆ ಸಿಕ್ಕರೆ, ನಿಸ್ಸಂದೇಹವಾಗಿ ಅದು ಭಾರತದಿಂದ […]Read More

ಮೈಸೂರು ಪಾಕ್ – ದಕ್ಷಿಣ ಭಾರತದ ಜಗತ್ಪ್ರಸಿದ್ಧ ಸಿಹಿ ತಿನಿಸು

ಮೈಸೂರು ಪಾಕ್ – ದಕ್ಷಿಣ ಭಾರತದ ಜಗತ್ಪ್ರಸಿದ್ಧ ಸಿಹಿ ತಿನಿಸು ಮೈಸೂರು ಪಾಕ್ ಎಂಬುದು ಕರ್ನಾಟಕದ ಮೈಸೂರು ನಗರದ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾಗಿದೆ. ಸಮೃದ್ಧವಾದ, ಬಾಯಿಯಲ್ಲಿ ಕರಗುವ ರಚನೆ ಮತ್ತು ಅವನತಿ ಹೊಂದುತ್ತಿರುವ ರುಚಿಗೆ ಹೆಸರುವಾಸಿಯಾದ ಈ ಮಿಠಾಯಿಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸಿಹಿ ಉತ್ಸಾಹಿಗಳ ನಡುವೆ ಅಚ್ಚುಮೆಚ್ಚಿನ ಸಿಹಿತಿಂಡಿಯಾಗಿದೆ. ಮೂಲ ಹೆಸರು ಹೇಗೆ ಬಂತು ಮೈಸೂರು ಪಾಕಿನ ಮೂಲವು 19ನೇ ಶತಮಾನದಲ್ಲಿ ಮೈಸೂರು ಅರಮನೆಯ ಅಡಿಗೆಮನೆಯಲ್ಲಿ ಹುಟ್ಟಿಕೊಂಡಿತು. ದಂತಕಥೆಯ ಪ್ರಕಾರ, ಈ ಖಾದ್ಯವನ್ನು ಅಂದಿನ ಮೈಸೂರು […]Read More

ಮಾದಕ ವಸ್ತು ಬೇಡ – ಈ ಜೀವ ದೈವಿದತ್ತ

ಮಾದಕ ವಸ್ತು ಬೇಡ – ಈ ಜೀವ ದೈವಿದತ್ತ ‘ಕಷ್ಟಪಟ್ಟು ಬೆವರನ್ನು ಕೊಡುವ ಬದಲು ಒಂದು ಹನಿ ರಕ್ತ ಕೊಡಲು ಸಿದ್ಧರಿರುವ ಯುವಕರ ಒಂದು ಗುಂಪನ್ನು ನನಗೆ ಕೊಡಿರಿ, ಇಡೀ ಜಗತ್ತನ್ನೇ ಗೆಲ್ಲುತ್ತೇನೆ’ ಎಂದು ಹೇಳಿದ ಸಿಡಿಲ ಮರಿ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಸತ್ವವಿದೆ. ಆದರೆ ಇಂದಿನ ಯುವ ಪೀಳಿಗೆಯು ಹನಿ ರಕ್ತವನ್ನು ಕೊಡುವುದು ಇರಲಿ, ಹನಿ ಬೆವರನ್ನೂ ಕೊಡಲು ಒದ್ದಾಡುತ್ತಾ ಇರುವುದನ್ನು ಎಲ್ಲೆಡೆ ನಾವು ಕಾಣಬಹುದು. ಬದಲಿಗೆ ಹನಿ ಮಾದಕ ವಸ್ತುಗಳ ದಾಸರಾಗಿ ಜೀವನವನ್ನೇ ಅದರ […]Read More

ಮನವ ಗೆದ್ದ ಪರಿ

ಮನವ ಗೆದ್ದ ಪರಿ ಮನಸನು ಅಪಹರಿಸಿ ಚಣದೊಳುನೀ ಬೇಸರಿಸಿ ಹೋಗಿದ್ದಾದರೂ ಎತ್ತ!ಕನಸನು ಚೂರಾಗಿಸಿ ಕಣಕಣದಲಿ..ಮತ್ತೆಂದು ಬರುವೆ ನೀ ಮನದತ್ತ!! ಹಿತಮಿತ ಮಾತಿನಲಿ ತಲೆದೂಗಿಸಿಕತ್ತಲ ಇರುಳಲಿ ಮರೆಯಾಗಿ ಹೋದೆ!ನಿನ್ನ ಸವಿಗನಸುಗಳ ಮಾಲೆ ಧರಿಸಿ..ಆ ರಾಧೆಯಂತೆ ನಾ ದಿನವೂ ಕಾದೆ!! ಕಳೆದ ಜನುಮದ ಮೈತ್ರಿಯ ಬೆಸೆವಆತ್ಮಬಂಧುವೇ ನೀನಾದೆ ನನಗೆ!ಪನ್ನೀರ ಹನಿಯಂತೆ ಒಲವ ಹರಿಸುವ..ಆ ಗುಳಿಕೆನ್ನೆಯ ನೋಟದಲೇ ಬೆಸುಗೆ!! ಪದಗಳನು ಮುತ್ತಂತೆ ಅಣಿಯಾಗಿಸಿಕವಿತೆ ಬರೆಯಲು ಆಗದು ನನಗೆ!ಜನುಮಗಳ ಪ್ರೀತಿಯ ಬಂಧಿಸಿ..ನುಡಿತೋರಣವಾಗಿಸಿ ಅರ್ಪಿಸಲೇ ನಿನಗೆ!! ಸುಮನಾ ರಮಾನಂದRead More

ಕನ್ನಡ ಸಾಹಿತ್ಯ ಸಮ್ಮೇಳನ – 87 ಮಂಡ್ಯ

ಕನ್ನಡ ಸಾಹಿತ್ಯ ಸಮ್ಮೇಳನ – 87 ಮಂಡ್ಯ ಕನ್ನಡ ಬರೀ ಒಂದು ಭಾಷೆಯಲ್ಲ. ಅದೊಂದು ಸಂಸ್ಕಾರ ಮತ್ತು ಸಂಸ್ಕೃತಿ. ಎಷ್ಟೇ ಸಂಖ್ಯೆಯಲ್ಲಿ ಬೇರೆ ಬೇರೆ ಭಾಷೆಗಳಿದ್ದರೂ, ಅಪ್ಪಟ ಕನ್ನಡಿಗರಿಗೆ ಕನ್ನಡವನ್ನ ದಿನ ನಿತ್ಯ ಬಳಸುವವರಿಗೆ ದಿನವೂ ಹಬ್ಬವೇ. ಇದೀಗ ಎಲ್ಲೆಡೆ ಕನ್ನಡ ಹಬ್ಬದ್ದೇ ಮಾತು. ಅಖಿಲ ಭಾರತ 87 ನೇ ಕನ್ನಡ ಸಮ್ಮೇಳನವು ನಮ್ಮೆಲ್ಲರ ಹೆಮ್ಮೆಯ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 20, 21,ಹಾಗೂ 22 ರಂದು ನೆಡೆಯುತ್ತಿದೆ. ಮಂಡ್ಯದ ಪ್ರಮುಖ ಬೀದಿಯಲ್ಲಿ ಕೆಂಪೇಗೌಡರ ಪ್ರತಿಮೆ ದೀಪಾಲಂಕಾರಗಳಿಂದ […]Read More

ಪ್ರಕೃತಿ ಪುರುಷ

ಪ್ರಕೃತಿ ಪುರುಷ ಸ್ತ್ರೀ ಪುರುಷರ ಸಮಾಜದಲಿ,ಪುರುಷರೇ ಮೇಲುಗೈ ಒಂದು ಹಂತದಲಿ |ಸ್ತ್ರೀ ಕೆಲಸ ಮಾಡುತ್ತಿರೆ ತನ್ನ ಗೃಹದಲಿಪುರುಷ ನಿಪುಣ, ಹೊರಗೆ ದುಡಿವಲ್ಲಿ || “ಉದ್ಯೋಗಂ ಪುರುಷ ಲಕ್ಷಣಂ”ಎನ್ನುತಿದ್ದರು ಪುರಾತನ ಕಾಲದಲ್ಲಿ |“ಲಜ್ಜಾ ವಿನಯಂ ಸ್ತ್ರೀ ಲಕ್ಷಣಂ”ಎನ್ನುವರು ಸ್ತ್ರೀಗೆ ಸದಾ ಕಾಲದಲ್ಲಿ || ಬೇಕು ಶಕ್ತಿ ಸೃಷ್ಟಿಕರ್ತನ ಕಾರ್ಯಕೆಸ್ತ್ರೀ ಬೇಕು ಪುರುಷನ ಅಸ್ತಿತ್ವಕೆ |ಮಹಾಪುರುಷನೆನಿಸಿಕೊಳ್ಳುವುದಕೆಪುರುಷನ ಹಿಂದೇ ಇರುವಳು ಆಕೆ || ಸ್ತ್ರೀಯು ತಾಳಿ ಕಟ್ಟಿಸಿಕೊಳ್ಳುವಳುಪುರುಷನ ಕೈಯಲ್ಲಿ, ತಲೆ ಬಾಗಿಸಿರುವಳು |ಪುರುಷನ ಪುರುಷ ಸಿಂಹ ಎನ್ನುವರುಲಗ್ನ ಕಾಲದಿ ಸ್ತ್ರೀಯ ಧಾರೆ […]Read More

ಬೆಳವಣಿಗೆ ಯಾವುದು..!?

ಬೆಳವಣಿಗೆ ಯಾವುದು..!? ಪ್ರತಿಯೊಬ್ಬ ಮನುಜನ ಜೀವನದಲ್ಲೂ ಬಾಲ್ಯ, ಯೌವ್ವನ, ಮುಪ್ಪು ಎಂಬ ಮೂರು ಹಂತಗಳಿರುತ್ತವೆ. ಈ ಎಲ್ಲಾ ಹಂತದಲ್ಲಿನ ನಮ್ಮ ನಡೆಗೆಯ ಅಖೈರು ಮೊತ್ತವೆ ಸಾರ್ಥಕ ಜೀವನ. ಬಾಲ್ಯ ನಮ್ಮಿಡೀ ಜೀವನದ ಅಡಿಪಾಯ ಎಂದರೆ ತಪ್ಪಾಗಲಾರದು. ಬಾಲ್ಯದಲ್ಲಿ ನಾವು ಬೆಳೆಸಿಕೊಳ್ಳುವ ಹವ್ಯಾಸಗಳು, ಅಥವಾ ನಮ್ಮ ಪೋಷಕರು ನಮಗೆ ನೀಡುವ ಸಂಸ್ಕಾರ, ನಾವು ಬೆಳೆಯುವ ವಾತಾವರಣ, ಎಲ್ಲವೂ ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿರುತ್ತವೆ. ಹಿಂದೆಲ್ಲ ಹೆತ್ತವರು ಈಗಿನ ರೀತಿ ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ಮಾಡಿ ಮಕ್ಕಳನ್ನ […]Read More

ಕಾಣೆಯಾದಾಗ ಕಂಡದ್ದು – ಶರ್ಮಿಳಾ. ಎಸ್

ಕಾಣೆಯಾದಾಗ ಕಂಡದ್ದು – ಶರ್ಮಿಳಾ. ಎಸ್ “ಕಾಣೆಯಾದಾಗ ಕಂಡದ್ದು ಎನ್ನುವ ಭಾವವೇ ವಿಶಿಷ್ಠವಾದ ಅನುಭವ. ಹಾಗೆ ಕಾಣಲು ನಾನು ನಾನಾಗಬೇಕು ,ನನ್ನೊಳಗಿನ ಭಾವ ನಿಷ್ಕಲ್ಮಶವಾಗಿರಬೇಕು”. ಕವಯತ್ರಿಯ ಮೊದಲ ಕವನ ಸಂಕಲನ ಇದು. ವಿವಿಧ ಕಾಲಘಟ್ಟಗಳಲ್ಲಿ ಹೊಮ್ಮಿದ ಭಾವಗಳನ್ನು ಪದಮಾಲೆ ಕಟ್ಟಿ ಬರಹವಾಗಿಸಿರುವ ಕವನಗಳ ಸಂಕಲನ ಇದು. ಶಮಾ ಎಂಬ ಕಾವ್ಯನಾಮದಲ್ಲಿ ಬರೆದಿರುವ ಎಲ್ಲಾ ಕವನಗಳೂ ಅಂತರಂಗದ ಅರಿವಿನ ಸುತ್ತಲೂ ಸುತ್ತುತ್ತಾ ಕಾಣೆಯಾದದ್ದನ್ನು ಕಾಣುವ ಪ್ರಯತ್ನದಲ್ಲಿ ಅರಿವಿನ ಆಡುಂಬೊಲವನ್ನು ಹುಡುಕುತ್ತವೆ. ಸಾವಿತ್ರಿ ಎಂದರೆ ಸೂರ್ಯನ ಕಿರಣ ಎಂಬ ಅರ್ಥವೂ […]Read More