ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ ಸಾಲುಮರದ ತಿಮ್ಮಕ್ಕ ಎಂದೇ ಹೆಸರುವಾಸಿಯಾಗಿರುವ ತಿಮ್ಮಕ್ಕ ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ವೃಕ್ಷ ಪ್ರೇಮಿ ಮತ್ತು ಪರಿಸರವಾದಿ ಎಂದರೆ ತಪ್ಪಾಗಲಾರದು. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿಯೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿರುವುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ತಿಮ್ಮಕ್ಕ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾರೆ. ಇವರು ಮಾಗಡಿ ತಾಲೂಕಿನ ಹುಲಿಕಲ್ […]Read More

ಅಕ್ಷತಾ ಪಾಂಡವಪುರ ಮನದಾಳದ ಮಾತು

ಅಕ್ಷತಾ ಪಾಂಡವಪುರ ಮನದಾಳದ ಮಾತು (ʼಲೀಕ್‌ ಔಟ್‌ʼ ನಾಟಕ ನೂರರ ಸಂಭ್ರಮದಲ್ಲಿ) ನಾಡಿನ ಹೆಸರಾಂತ ರಂಗ ಕಲಾವಿದೆ ಹಾಗೂ ಚಿತ್ರನಟಿ ಅಕ್ಷತಾ ಪಾಂಡವಪುರ ಅಭಿನಯದ ʼಲೀಕ್‌ ಔಟ್‌ʼ ನಾಟಕ ನೂರರ ಪ್ರದರ್ಶನಕ್ಕೆ ಸಜ್ಜಾಗಿದೆ. ಶಿವಮೊಗ್ಗದಲ್ಲಿ ಡಿಸೆಂಬರ್ 7ರ ಶನಿವಾರ ಈ ನಾಟಕದ 100ನೇ ಪ್ರದರ್ಶನವು ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಆ ಮೂಲಕ ಶಿವಮೊಗ್ಗದ ಹವ್ಯಾಸಿ ರಂಗ ತಂಡಗಳ ಕಲಾವಿದರ ಒಕ್ಕೂಟವು ಜಿಲ್ಲೆಯ ರಂಗ ಇತಿಹಾಸಕ್ಕೆ ಹೊಸ ದಾಖಲೆಯೊಂದನ್ನು ಮುಡಿಗೇರಿಸಿಕೊಳ್ಳುವುದಕ್ಕೆ ಅಣಿಯಾಗಿದೆ. ಕಲಾವಿದರ ಒಕ್ಕೂಟದ ಮೂಲಕ […]Read More

ಯುವ ಉದ್ಯೋಗಕ್ಕಾಗಿ ಕೌಶಲ್ಯ ಅಭಿವೃದ್ಧಿ ಸಾಮಾಜಿಕ ಪಾಲು

ಯುವ ಉದ್ಯೋಗಕ್ಕಾಗಿ ಕೌಶಲ್ಯ ಅಭಿವೃದ್ಧಿ ಸಾಮಾಜಿಕ ಪಾಲು ಉದ್ಯೋಗ ಮಾರುಕಟ್ಟೆಯ ಕ್ಷಿಪ್ರ ವಿಕಸನವು ವಿಶೇಷ ಕೌಶಲ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೃಷ್ಟಿಸಿದೆ, ಅವುಗಳಲ್ಲಿ ಹಲವು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗಳ ವ್ಯಾಪ್ತಿಗೆ ಬರುವುದಿಲ್ಲ. ಇದರ ಪರಿಣಾಮವಾಗಿ, ಯುವ ಉದ್ಯೋಗದಲ್ಲಿ ನಿರ್ಣಾಯಕ ಅಂಶವಾಗಿ ಕೌಶಲ್ಯ ಅಭಿವೃದ್ಧಿಯತ್ತ ಗಮನ ಹರಿಸಲಾಗಿದೆ. ಆಧುನಿಕ ಕೌಶಲ್ಯ ಅಭಿವೃದ್ಧಿಯನ್ನು ರೂಪಿಸುವಲ್ಲಿ, ಮೌಲ್ಯಯುತ ತರಬೇತಿಗೆ ಪ್ರವೇಶವನ್ನು ಪ್ರಜಾಸತ್ತಾತ್ಮಕಗೊಳಿಸುವಲ್ಲಿ ಮತ್ತು ಯುವ ಸಬಲೀಕರಣವನ್ನು ವೇಗಗೊಳಿಸುವಲ್ಲಿ ತಾಂತ್ರಿಕ ಪ್ರಗತಿಗಳು ಪ್ರಮುಖ ಪಾತ್ರ ವಹಿಸಿವೆ. ಯುವ ಕೌಶಲ್ಯ ಅಭಿವೃದ್ಧಿಯಲ್ಲಿ ತಂತ್ರಜ್ಞಾನವು ಹೇಗೆ ಪರಿವರ್ತಕ […]Read More

ಬದುಕಿನ ಸುಂಕ

ಬದುಕಿನ ಸುಂಕ ಸುಮ್ಮನೆ ರೂಪಗೊಳ್ಳದೀ ಬದುಕುಸುಂಕ ಕಟ್ಟಲೇಬೇಕು ಪ್ರತೀ ಹೊತ್ತುನಮ್ಮ ನಮ್ಮ ವ್ಯವಹಾರಕ್ಕೆ ನಾವೇ ಹೊಣೆಗಾರರುದೂಷಿಸುವಂತಿಲ್ಲ ಯಾರಿಗೂ ತಪ್ಪಿಸಿಕೊಳ್ಳುವಂತಿಲ್ಲ ಸುಂಕದ ಬಾಬ್ತುಇಂದಿಲ್ಲ ನಾಳೆಯಾದರೂ ಕಟ್ಟಲೇಬೇಕು ದುಪ್ಪಟ್ಟು,ಜಾಣ್ಮೆಯ ನಡೆಗೆ ವಿನಾಯಿತಿಘೋಷಿಸಿದರು ಪರಿಶೀಲನೆಗೊಬ್ಬ ಲೆಕ್ಕಿಗನಿರುವ,ಬರೆದಿಟ್ಟುಕೊಂಡಿರುವ ಎಲ್ಲದರ ಎಲ್ಲರ ಲೆಕ್ಕಾಚಾರವ ಬದುಕೊಂದ ಬದುಕೋಣು ಬಾರಹೇಗಾದರೂ ಸರಿಯೇ ಬದುಕಿಬಿಡುವ ಎನ್ನುವಂತಿಲ್ಲ,ಗಮನಿಸುತಲೇ ಇದ್ದಾನೆ ಓರ್ವ ತೀರ್ಪುಗಾರ ಸುಂಕಕಂಜದಿರು ಮನವೇಸರಿಯಾದ ಸಮಯಕ್ಕೆ ಪಾವತಿಸಿದರೆಅದುವೇ ಪುರಸ್ಕಾರ… ಪವನ ಕುಮಾರ ಕೆ. ವಿ.ಬಳ್ಳಾರಿRead More

ಸುರಕ್ಷಾ ಜಾಗೃತಿ – 7

ಸುರಕ್ಷಾ ಜಾಗೃತಿ – 7(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು) ಅಪರಿಚಿತರನ್ನು ಅನುಮಾನಿಸು ಸುರಕ್ಷತೆಯ ಪಾಠದಲ್ಲಿ ಇದು ಕೂಡ ಒಂದು ಮುಖ್ಯವಾದ ವಾಕ್ಯವಾಗಿದೆ ಮತ್ತು ಇದನ್ನು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿಟ್ಟುಕೊಳ್ಳತಕ್ಕದ್ದು. ನಿಮಗೆಲ್ಲರಿಗೂ ನಿಮ್ಮ ಬಾಲ್ಯದಲ್ಲಿ ತಂದೆ ತಾಯಂದಿರು ನೀವು ಶಾಲೆಗೆ ಹೋಗುವಾಗ ಹೇಳುತ್ತಿದ್ದಂತಹ ಬುದ್ದಿಮಾತು ಇಂದಿಗೂ ನೆನಪಿದೆಯಲ್ಲವೇ? ಅದೇನಂದರೆ ಯಾರೇ ಆದರೂ ಏನಾದರೂ ಚಾಕೋಲೇಟ್ ಕೊಟ್ಟರೆ ತೆಗೆದುಕೊಳ್ಳಬಾರದು. ಯಾರಾದರೂ ಕರೆದರೆ ಅಥವಾ ಮನೆಗೆ ಬಿಡುತ್ತೇನೆ ಅಂದರೆ ಹೋಗಬಾರದು. ಇಂತಹ ಹಲವಾರು ಬುದ್ದಿಮಾತುಗಳನ್ನು ದಿನನಿತ್ಯ ನಮಗೆಲ್ಲರಿಗೂ […]Read More

ಕವಿತೆಯ ಸ್ಫೂರ್ತಿಸೆಲೆ

ಕವಿತೆಯ ಸ್ಫೂರ್ತಿಸೆಲೆ ಮನದ ಗೂಡಲಿ ಭಾವವು ಅವಿತಾಗಮನಸು ಆ ಭಾವದಲಿ ಬಂಧಿಯಾದಾಗಭಾವದುಯ್ಯಾಲೆಯಲಿ ಮನ ಜೀಕಿದಾಗ..ಕವಿತೆಯೊಂದು ಮನದಿ ಮೂಡಿದೆ!! ಕನಸುಗಳ ಚಿತ್ತಾರದಿ ಮನವಿರಲುಮನದ ಮಾತು ಹೃದಯವರಿತಿರಲುನೂರಾಸೆಯ ಭಾವವೇ ಕಣ್ಣಲಿರಲು..ಕಾವ್ಯವು ಮನದಾಗಸದಿ ಚಿತ್ತೈಸಿದೆ!! ಬಾಳಿನ ನವಭಾವಕೆ ನಾಂದಿಯ ಹಾಡಿಸಂತಸವದು ಕಂಗಳಲಿ ಮನೆಮಾಡಿಪದಭಂಡಾರವೇ ಮನೋನ್ಮಣಿಯಲಿ ಮೂಡಿಕವನವೊಂದು ಹೃದಯದಲಿ ಉದಯಿಸಿದೆ!! ಮನದ ಕಂಗಳಲಿ ನಲಿವಿನ ನೆಲೆಯಿರಲುನಿರ್ಜೀವದ ಭಾವಗಳಿಗೆ ಜೀವಸೆಲೆಯಿರಲುಸೋತ ಚಿಂತನೆಗೆ ಸವಿಸ್ಪೂರ್ತಿಯ ಅಮಲಿರಲು..ಕವಿತೆಯದು ಅಂತರಾಳವ ತೆರೆದಿದೆ!! ಸುಮನಾ ರಮಾನಂದಮುಂಬೈRead More

ಆಹಾ, ಇಲ್ಲೆ ಸ್ವರ್ಗ…!

ಆಹಾ, ಇಲ್ಲೆ ಸ್ವರ್ಗ…! ಬೆಳಗಿನ ವಾಯುವಿಹಾರ ಇಂದೇಕೋ ಬಹಳ ಆಪ್ತವೆನಿಸಿತು, ಬೆಚ್ಚಗಿನ ಸೂರ್ಯನ ಕಿರಣಗಳು, ವಿಶಾಲವಾದ ಹಸಿರಿನ ತೋಪನ್ನು ಸೀಳಿ, ನನ್ನ ಮೈಮನದ ಮೇಲೆ ಚೈತನ್ಯದ ಬೆಳಕು ಬೀರಿದವು, ಮುಖವೆತ್ತಿ, ಕಣ್ಣು ಮುಚ್ಚಿ, ಆ ಹಿತವನ್ನು ಸವಿದೆ, ಅಲ್ಲಲ್ಲಿ ಹಕ್ಕಿಗಳ ಕಲರವ, ಸಣ್ಣದಾಗಿ ಬೀಸುವ ಶೀತಗಾಳಿಗೆ ಕೈ ಚಾಚಿ, ಮೈ ಒಡ್ಡ ಬೇಕೆಂಬ ಬಯಕೆ ಮೂಡಿತು, ಹಾಕಿದ ‘ಹೂಡಿ’ ಬೇಡವಾಗಿತ್ತು….. ಇಂತಹ ಹಸಿರು ಸ್ವರ್ಗದಲ್ಲಿ ನಾ ಇರುವುವೆನೆಲ್ಲ ಎಂದು ಹೆಮ್ಮೆಯ ಭಾವ ಮೂಡಿತು. ಹೌದು ನಾನಿರುವ ಊರು, […]Read More

ಭಾರತದಲ್ಲಿ ವಾಣಿಜ್ಯ ಶಿಕ್ಷಣದ ಪ್ರಯೋಜನ

ಭಾರತದಲ್ಲಿ ವಾಣಿಜ್ಯ ಶಿಕ್ಷಣದ ಪ್ರಯೋಜನ ಭಾರತದಲ್ಲಿ ವಾಣಿಜ್ಯ ಶಿಕ್ಷಣವು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ವ್ಯಾಪಾರ, ಹಣಕಾಸು, ಅರ್ಥಶಾಸ್ತ್ರ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ಇಲ್ಲಿ ಕೆಲವು ಪ್ರಮುಖ ಪ್ರಯೋಜನಗಳಿವೆ: ಉದ್ಯಮಶೀಲತೆ: ವಾಣಿಜ್ಯ ಶಿಕ್ಷಣವು ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನವನ್ನು ಒದಗಿಸುತ್ತದೆ, ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಅವರನ್ನು ಸಿದ್ಧಪಡಿಸುತ್ತದೆ.ಸರ್ಕಾರಿ ಸೇವೆಗಳುಃ ವಿದ್ಯಾರ್ಥಿಗಳು ಭಾರತೀಯ ಆಡಳಿತಾತ್ಮಕ ಸೇವೆಗಳು (ಐಎಎಸ್) ಭಾರತೀಯ ವಿದೇಶಾಂಗ ಸೇವೆಗಳು (ಐಎಫ್ಎಸ್) ಅಥವಾ ಬಲವಾದ ವ್ಯಾಪಾರ ಮತ್ತು ಆರ್ಥಿಕ ತಿಳುವಳಿಕೆಯ […]Read More

ಕಾಗಿನೆಲೆಯ ಕನಕದಾಸರು

ಕಾಗಿನೆಲೆಯ ಕನಕದಾಸರು ಭಕ್ತಿ ಭಾವಕೆ ಅಜರಾಮರದ ಹೆಸರುಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿಉಡುಪಿಯ ಕನಕನ ಕಿಂಡಿಯ ರೂವಾರಿಯಾಗಿಕೃಷ್ಣನ ಪ್ರೀತಿಯ ಭಕ್ತರಾದರು ಲೋಕ ಕಲ್ಯಾಣಕ್ಕಾಗಿಜಾತಿ ಪದ್ಧತಿಯ ತಾರತಮ್ಯ ತಿರಸ್ಕರಿಸಿದರು ಮನುಕುಲಕ್ಕಾಗಿ ಕಾಗಿನೆಲೆ ಆದಿಕೇಶವರಾಯರ ಅಂಕಿತದಲಿಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ ಸ್ಮರಣೆಯಲಿ […]Read More

ವಿಭಿನ್ನ ಕರಕುಶಲ ಕಲಾವಿದ ಜಗದೀಶ್ ಭಾವಿಕಟ್ಟಿ

ವಿಭಿನ್ನ ಕರಕುಶಲ ಕಲಾವಿದ ಜಗದೀಶ್ ಭಾವಿಕಟ್ಟಿ ಜನಪದ ಕರಕುಶಲ ಕಲೆಗಳು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಇವುಗಳನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದು ವಿಂಗಡಿಸಲಾಗಿದೆ. ಕರಕುಶಲ ಕಲೆಗಳು ಪ್ರಯೋಜನ ಮೂಲ ಕಲೆ ಆಗಿದ್ದು, ದುಡಿಮೆಗಾಗಿ ಮತ್ತು ಆದಾಯದ ಉದ್ದೇಶದಿಂದ ಈ ಕಲೆಗಳನ್ನು ಬಳಸುತ್ತಾರೆ. ಇವು ಜೀವನೋಪಾಯಕ್ಕೆ ಆಧಾರವಾಗಿವೆ ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ವಿನೋದದ ಉದ್ದೇಶಕ್ಕಾಗಿ ನಿರ್ವಹಿಸಲಾಗುತ್ತದೆ. ಕರಕುಶಲ ಕಲೆಗಳು ಇಂದು ಪೂರ್ತಿ ಅವಸಾನದ ಹಂತದಲ್ಲಿ ಇದ್ದು, ಇದಕ್ಕೆ ಪುನಶ್ಚೇತನ ನೀಡುವ […]Read More