ಚಿಕ್ಕವರಿದ್ದಾಗ ಮಧ್ಯೆ ಬೈತಲೆ ತೆಗೆದುಬಿಗಿಯಾಗಿ ಎರಡು ಜಡೆ ಹೆಣೆದುನಮ್ಮಜ್ಜಿ ಮುದ್ದು ಗೌರಿ ಅಂದುನೆಟ್ಟಿಗೆ ತೆಗೆದಾಗ, ಬಿಟ್ಟರೆಗೌರಿಗೂ ನಮ್ಮಜ್ಜಿ ಹೀಗೆ ಬಿಗಿಯಾಗಿಜಡೆ ಹೆಣೀತಾರೆ ಅನ್ನಿಸೋದು ಅಜ್ಜಿ, ಅಮ್ಮ , ಸೋದರತ್ತೆ ಒಟ್ನಲ್ಲಿಮನೆಯ ಹೆಂಗಸೆರೆಲ್ಲಾ ಪೈಪೋಟಿಮೇಲೆ ಮೊಗ್ಗಿನ ಜಡೆ ಹಾಕಿ, ಅಲಂಕರಿಸಿಆಹಾ! ಒಳ್ಳೆ ಮುದ್ದು ಗೌರಿ ಕಂಡಂಗೆಕಾಣ್ತಾಳೆ ಅಂತ ಕೊಂಡಾಡುವಾಗಗೌರಿ ಯಾವಾಗಲೂ ಜಡೆ ಹಾಕ್ಕೋತಾಳಾ?ತಲೆಯಲ್ಲೊಂದು ಪ್ರಶ್ನೆ ಮೂಡುತ್ತಿತ್ತು ಪರೀಕ್ಷಿಸಲು ನೋಡಿದ ಎಲ್ಲಾ ಗೌರಿಯರುಒಂದೋ ಕೂದಲು ಬಿಟ್ಟಿರ್ತಾರೆಇಲ್ಲವೇ ಸಡಿಲವಾಗಿ ಜಡೆ ಹೆಣೆದುತಲೆತುಂಬಾ ಹೂ ಮುಡಿದಿರ್ತಾರೆ ಬಾಲ್ಯದಲ್ಲಿ ಗೌರಿ ಎಂದರೆ ಸುಂದರಿಶಿವನ ಇಬ್ಬರು […]Read More
ಗುರು ಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯ್ಯೇ ಶ್ರೀ ಗುರುಭ್ಯೋ ನಮಃ. ವಿದ್ಯೆಯನ್ನು ಕಲಿಸುವಾತ ಗುರು. ಅದಕ್ಕೆ ವಿದ್ಯೆ ಕಲಿಸಿದಾತಂ ಗುರು ಎಂದು ಪ್ರತೀತಿ. ನಮ್ಮ ಪ್ರತಿಯೊಂದು ಹಂತದಲ್ಲೂ ಗುರುವಿನ ಸ್ಥಾನ ತುಂಬಾ ಮಹತ್ವಪೂರ್ಣವಾದದ್ದು. “ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು” ಎಂದು ಗುರುಗಳ ಬಗ್ಗೆ ರಾಮಕೃಷ್ಣ ಆಶ್ರಮದ “ಸ್ವಾಮಿ ಪುರುಷೋತ್ತಮಾನಂದರು” ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ತಾಯಿಯ ಗರ್ಭದಲ್ಲಿರುವಾಗ ಒಂದು ಮಗು ಮಣ್ಣಿನ ಬೊಂಬೆಯಷ್ಟೆ! ಅದಕ್ಕೆ ತಾಯಿಯ […]Read More
ಪೊರೆ ಕಳಚಿದೆಹೆಡೆಯೆತ್ತಿದೆಖೂಳ ಕಾಯಕದಿಭುಸುಗುಟ್ಟಿದೆತಾಜಾ ಪಾಷಾಣದ ಹೊಗೆ!ಮತ್ತೊಮ್ಮೆಪೂರ ಶತಮಾನದ ಅನಂತರದಲಿಮಸಣಗೀತೆ ಗುನುಗಿದೆಸರ್ವವ್ಯಾಪಿ ಬಿರುಗಾಳಿ! ಕಾಲ ಕೆಟ್ಟಿಲ್ಲನಿಜ!ಕರಿ ಬಣ್ಣದೊಳು ಯಥೇಚ್ಛ ಅದ್ದಿದಕುಂಚದಿಂದಕಾಲದ ದಿವ್ಯ ಮುಖದುದ್ದಗಲಕ್ಕುಕಾಳೋರಗನ ಚಿತ್ತಾರ ಗೀಚಲಾಗಿದೆಅಗೋಚರ ಖಳರಿಂದ!ಮತ್ತೊಂದು ಬಣ್ಣದಯಕಃಶ್ಚಿತ್ ಗೆರೆಯೊಂದಕ್ಕೂತಾವಿರದ ಹಾಗೆ ಕಿಂಚಿತ್ತೂ ಹುತ್ತದಿಂದ ಹೊರ ಹರಿದುಬಂದದ್ದುವಿಷಪೂರಿತ ಉರಗಗಳಲ್ಲಕ್ಷುಲ್ಲಕ ಇರುವೆ ಸೈನ್ಯಅನಿಸಿದ್ದುಹಾಗೆ ಕಹಳೆ ಊದಿಸಿದ್ದು ಮಿಥ್ಯಅನುಭವಿಸಿದ್ದು ಮಾತ್ರ ಅನೂಹ್ಯಘನ ಘೋರ ವಿಪತ್ತು! ಏನಿರಬಹುದುಏಕಿರಬಹುದುಕ್ಷಣ ಜಿಜ್ಞಾಸೆಗೂಆಸ್ಪದವಿಲ್ಲದ ಹಾಗೆಖಂಡಾಂತರ ವಿದ್ಯುತ್ವೇಗದಿ ಹರಿದುದೇಶ ವಿದೇಶಗಳಲಿ ಗುಡಿಸಿ ಗುಂಡಾಂತರ!ಸ್ನೇಹ ಸಂಬಂಧಗಳ ಕಿತ್ತೊಗೆದುಹಾಳುಬಡಿದ ಬದುಕುದಕ್ಕಿದ ಸಿಕ್ಕಿದೆಲ್ಲರ ಕೊರಳು ಹಿಡಿವಗಟ್ಟಿ ಹಿಸುಕುವಈ ಅದೃಶ್ಯ ಅನಂತಪಾದಿಮೃತ್ಯುಘಾತಕ!ಬೀದಿ ಬೀದಿಗಳಲಿ ದಢಕ್ಕನುರುಳಿಬಿದ್ದಳಿದ […]Read More
ಚಳಿಗಾಲದ ಸುಖಗಳಲ್ಲಿ ವಲಸೆ ಬರುವ ಇಂತಹ ಹಕ್ಕಿಗಳನ್ನು ನೋಡುವುದೂ ಒಂದು. ಕರಾರುವಾಕ್ಕಾಗಿ ಅದೇ ಪ್ರದೇಶಕ್ಕೆ ಬರುವ ಇವು ಸಂತೋಷ ತರುವುದಲ್ಲದೆ ಇವು ಬರುವುದು ನಿಲ್ಲುವಷ್ಟು ವಾತಾವರಣ ಕೆಟ್ಟಿಲ್ಲ ಎಂಬ ಭರವಸೆಯನ್ನೂ ಮೂಡಿಸುತ್ತವೆ. ಮೊನಾರ್ಚ್ ಬ್ಲೂ (Black-naped Monarch Hypothymis azurea) ಎಂದು ಇಂಗ್ಲಿಷಿನಲ್ಲಿ ಕರೆಯಲಾಗುವ ಇದು ನಮ್ಮ ಸುಂದರ ನೊಣ ಹಿಡುಕಗಳಲ್ಲಿ ಒಂದು (ಹಕ್ಕಿಗಳಲ್ಲಿ ಎಲ್ಲವೂ ಸುಂದರವೇ!). ಜೀವಿಗಳನ್ನು ಸುಂದರ/ಇಲ್ಲ ಎಂದು ಎಣಿಸುವುದು ಮನುಷ್ಯನ ದೌರ್ಬಲ್ಯ. ಇರಲಿ. ಈ ನೀಲಿ ಬಣ್ಣದ ಹಕ್ಕಿಗೆ ಕಪ್ಪು ನೆತ್ತಿ ಒಂದು ಮೆರುಗನ್ನು […]Read More
ಕುಮಾರಿ ಸೃಷ್ಟಿ ಸ್ವಾಮಿ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಚಿಕ್ಕ ವಯಸ್ಸಿಗೆ ತನ್ನ ಪ್ರತಿಭೆಯಿಂದ ಕಲಾದೇವಿಯನ್ನು ವಶಪಡಿಸಿಕೊಂಡಿದ್ದಾಳೆ. ಗುರುಸಿದ್ದಯ್ಯ ದಂಪತಿಗಳು ಪುತ್ರಿಯ ಕಲಾ ಪ್ರತಿಭೆಗೆ ಪ್ರೀತಿಯೆಂಬ ಖನಿಜಯುಕ್ತ ನೀರನ್ನು ಪೋಷಿಸಿ ಬೆಳೆಸುತಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟದ ಮಂಗರೂಳೆ ಪ್ರಶಾಲೆಯಲ್ಲಿ ಓದುತ್ತಿರುವ ಕುಮಾರಿ ಸೃಷ್ಟಿ ಬರೆದ ಅಮಿತಾಭ್ ಬಚ್ಚನ್ ಚಿತ್ರವನ್ನು ಸ್ವತಃ ಅಮಿತಾಭ್ ಮೆಚ್ಚಿ ಅಭಿನಂದಿಸಿದ್ದಾರೆ ಹಾಗೆಯೇ ಸುಧಾ ಮೂರ್ತಿಯವರು ಸಹ ಚಿತ್ರಗಳನ್ನು ಕಂಡು ಸಂತಸದಿಂದ ತಮ್ಮ ವೈಯಕ್ತಿಕ ಮೆಚ್ಚುಗೆಯನ್ನು ಹೇಳಿ ಹಾರೈಸಿದ್ದಾರೆ. ಇಂತಃ ಕಲಾ ಚಿಗುರೂಗಳನ್ನು ಗುರುತಿಸಿ […]Read More
BTS ನಲ್ಲೊಬ್ಬ ರವಿಚಂದ್ರನ್!! BTSನ ಕನಸುಗಾರ ಸೂಗಾ ಸೂಗಾ ಎಂಬ ಸಾಗಾ ಮಿನ್ ಯೂಂಗಿ (Min Yoongi) ಅಂದ್ರೆ ಯಾರಿಗೂ ಗೊತ್ತಾಗೊಲ್ಲ. ಆದರೆ ಸೂಗ SUGA ಅಂದಾಕ್ಷಣ ಎಲ್ಲರಿಗೂ ಮಿಂಚಿನ ಸಂಚಾರ ಆದಂತೆ ಆಗುವುದು. ಸೂಗ, ಆಗಸ್ಟ್-ಡಿ ಇವನ ಸ್ಟೇಜ್ ಹೆಸರುಗಳು. ಸೂಗಾ ಹುಟ್ಟಿದ್ದು ಮಾರ್ಚ್ 9, 1993ರಲ್ಲಿ. ಇದೀಗ ಅವನಿಗೆ 28 ವರ್ಷಗಳ ಪ್ರಾಯ. ಈ ಸೂಗಾ ಥೇಟ್ ನಮ್ಮ ರವಿಚಂದ್ರನ್ ನಂತೆಯೆ. ಕನಸುಗಾರ, ಪರಿಶ್ರಮಿ, ತಾಂತ್ರಿಕತೆಯ ಅಪಾರ ಜ್ಞಾನ ಉಳ್ಳವನು. ತಾನು ರಚಿಸುವ ಗೀತೆಗಳನ್ನು […]Read More
ಕಲಿಕೆಯಲ್ಲಿ ತೊಡಗುವ ಮೊದಲುಶಿಷ್ಯಂದಿರು ಒಂದು ಮರದ ಕೊರಡು! ಅದನು ಗುರುವು ತಮ್ಮಲ್ಲಿನಅಪಾರ ಪಾಂಡಿತ್ಯ ಹಾಗೂಶಿಷ್ಯನ ಮೇಲಿನ ಪ್ರೀತಿಯಿಂದಸ್ಪರ್ಶಿಸಿ, ಸಲಹಿ, ಬೋಧಿಸಿ,ಸಂರಕ್ಷಿಸಿ ಗಂಧದ ತುಂಡಾಗಿಸುತ್ತಾರೆ… ಹಂತ ಹಂತವಾಗಿ ಅದರಲ್ಲಿಸುಗಂಧವನ್ನು ತುಂಬಿಸುತ್ತಾರೆ. ಇದು ಕೊರಡಲ್ಲವೆಂದೂಸುಗಂಧಭರಿತ ಕೊರಡೆಂದೂಶಿಷ್ಯನಿಗೆ ಅರ್ಥೈಸಿತಿಳಿಯ ಪಡಿಸುತ್ತಾರೆ… ಅಲ್ಲದೇ ನಿನ್ನ ಶಕ್ತಿಯ ಪ್ರಕಾರಇದನ್ನು ತೇಯಿತೇಯುತ್ತಲ್ಲೇ ಇರು.ಎಷ್ಟೆಷ್ಟು ತೇಯುವಿಯೋಅಷ್ಟಷ್ಟೂ ನಿನ್ನ ಪರಿಸರವುಸುಗಂಧಭರಿತವಾಗುವುದುಎನ್ನುವರು ಗುರು…. ಗುರುಭ್ಯೋ ನಮಃ 🙏 ತುಂಕೂರ್ ಸಂಕೇತ್ ಸಕಲ ಗುರುಗಳಿಗೆಲ್ಲಾ ಕೋಟಿ ನಮನ 🙏Read More
ಅನಂತ್ ಎಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ಆನೆಯನ್ನು ತಡವಿದಂತೆ. ಇನ್ನೂ ಅನಂತ್ ಏನೆಂದು ಅರ್ಥವಾಗೇ ಇಲ್ಲಾ ಎಂದರೆ ತಪ್ಪಾಗಲಾರದು. ಅನಂತ್ ತಮ್ಮ ಅಭೂತಪೂರ್ವ ನಟನೆಯಿಂದ ಮೂರು ತಲೆಮಾರಿನ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. “ಹಂಸಗೀತೆ, ಕನ್ನೇಶ್ವರ ರಾಮ” ಗಳಂತಹ ಚಿತ್ರಗಳನ್ನು ನೋಡಿದ್ದ ಹಿರಿಯರಿಗೆ ಅನಂತ್ ಅವರಲ್ಲಿ ಕಂಡಿದ್ದೇ ಬೇರೆ. ಆನಂತರದಲ್ಲಿ ನಟಿಸಿದ ಮಧ್ಯಮ ವರ್ಗದ ಸಾಮಾನ್ಯನ ಪಾತ್ರದಲ್ಲಿ ಲಕ್ಷ್ಮೀ ಅವರ ಜೋಡಿಯಾಗಿ ನಟಿಸಿದ್ದನ್ನು ಎರಡನೇ ತಲೆಮಾರಿನವರ ತಲೆಯಲ್ಲಿ ಈಗಲೂ ಉಳಿದಿದೆ. ಇತ್ತೀಚಿಗೆ ಹಾಸ್ಯ ಪಾತ್ರಗಳಲ್ಲದೇ ವಿಭಿನ್ನ ಪಾತ್ರಗಳಲ್ಲಿ ನೈಜವಾಗಿ ನಟಿಸಿ ಈ […]Read More
ರಂಗಭೂಮಿಯು ಒಮ್ಮೆ ಸೆಳೆಯಿತೆಂದರೆ ಸಾಕು. ಅದರಿಂದ ಹೊರ ಬರಲು ಸಾಧ್ಯವೇ ಇಲ್ಲಾ. ಕುಟುಂಬದಲ್ಲಿನ ಒಬ್ಬ ವ್ಯಕ್ತಿಯು ಈ ರಂಗಕ್ಕೆ ಪ್ರವೇಶ ಕೊಟ್ಟರೆ ಆ ವ್ಯಕ್ತಿಯ ಮುಂದಿನ ಎರಡು ಮೂರು ಪೀಳಿಗೆಯೂ ಇದರಲ್ಲಿ ಸಕ್ರಿಯರಾಗುತ್ತಾರೆ. ಅದು ಖಚಿತ. ರಂಗಕ್ಕೆ ಅಷ್ಟು ಸೆಳೆತವಿದೆ! ಈ ನಿಟ್ಟಿನಲ್ಲಿ ಮಹಿಳಾ ರಂಗಕರ್ಮಿ ಮಾಧುರಿ ಕೆ ಶಿವಣಗಿ ಅವರೂ ಇಂತಹ ಸೆಳೆತಕ್ಕೆ ಒಳಗಾಗಿದ್ದಾರೆ. ಓದಿದ್ದೇ ಬೇರೆ ವೃತ್ತಿಯೇ ಬೇರೆ. ಆದರೆ ತಮ್ಮ ತಂದೆಯಲ್ಲಿದ್ದ ರಂಗದ ನಂಟು ಮತ್ತೆ ಈಕೆಯಲ್ಲಿ ತುಡಿತವನ್ನು ಉಂಟು ಮಾಡಿ ಈ […]Read More
ಗಂಜೀಫಾ ಚಿತ್ರಕಲೆಯು ಸಂಪ್ರದಾಯಿಕ ಚಿತ್ರಕಲಾ ಪ್ರಪಂಚದ ಒಂದು ವಿಶಿಷ್ಟವಾದ ಕಲಾ ಕೊಡುಗೆ. ‘ಗಂಜೀಫಾ ಕಲೆಯು ಮೊಘಲರ ಕಾಲದಲ್ಲಿ ಇರಾನ್ ದೇಶದಿಂದ ನಮ್ಮ ಭಾರತಕ್ಕೆ ಬಂದ ಕಲೆ. ಹಾಗೆ ಬಂದ ಪರ್ಷಿಯನ್ನರ ಈ ಕಲೆ ಈಗ ಭಾರತೀಯ ಕಲೆಯೇ ಆಗಿಬಿಟ್ಟಿದೆ. ಮೈಸೂರು ಶೈಲಿಯ ಗಂಜೀಫಾ ಕಲೆ, ಆಟಗಳ ಶ್ರೇಯಸ್ಸು, ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಸೇರಬೇಕು. ಮುಮ್ಮಡಿಯವರನ್ನು ಒಳಗೊಂಡಂತೆ ಮೈಸೂರಿನ ಅರಸು ಮನೆತನದವರು ಸಾಹಿತ್ಯ, ಚಿತ್ರಕಲೆ, ನೃತ್ಯ, ಕ್ರೀಡೆ ಎಲ್ಲವನ್ನೂ ಸೇರಿದಂತೆ ಅನೇಕ ಕಲಾಪ್ರಕಾರಗಳ ಉನ್ನತಿಗೆ ಕಾರಣರಾಗಿದ್ದಾರೆ. ಆಗ ಇದನ್ನು […]Read More