ಓರ್ವ ಮಾನವಶಾಸ್ತ್ರಜ್ಞ ಒಮ್ಮೆ ಆಫ್ರಿಕನ್ ಬುಡಕಟ್ಟು ಮಕ್ಕಳಿಗೆ ಆಟವೊಂದನ್ನು ಆಡಲು ತಿಳಿಸುತ್ತಾನೆ. ಆಟದ ನಿಯಮ ಏನಂದ್ರೆ ಮಕ್ಕಳಿಂದ ಅನತಿ ದೂರದಲ್ಲಿ ಮರವೊಂದಿರುತ್ತೆ. ಅದರ ಬುಡದಲ್ಲಿ ರುಚಿಕರವಾದ ಹಣ್ಣಿನ ಬುಟ್ಟಿಯೊಂದನ್ನು ಇಟ್ಟು, ಗುಂಪಿನಲ್ಲಿರುವ ಮಕ್ಕಳಲ್ಲಿ ಯಾರು ಮೊದಲು ಆ ಮರವನ್ನು ತಲುಪುತ್ತಾರೋ ಅವರಿಗೆ ಮಾತ್ರ ಆ ಬುಟ್ಟಿಯಲ್ಲಿರುವ ಹಣ್ಣುಗಳು ಸಿಗುತ್ತೆ ಎನ್ನುತ್ತಾನೆ. ಮಕ್ಕಳು ನಡೆಯಲು ಆರಂಭಿಸುತ್ತಿದ್ದಂತೆ ಮಾನವಶಾಸ್ತ್ರಜ್ಞನಿಗೆ ಪರಮಾಶ್ಚರ್ಯ ಆಗುತ್ತೆ. ಯಾಕೆಂದರೆ ಆ ಮಕ್ಕಳು ಮರದೆಡೆಗೆ ಸ್ಪರ್ಧೆಯಿಂದ ಓಡುವ ಬದಲು, ಪರಸ್ಪರ ಕೈ ಕೈ ಹಿಡಿದು ಸೌಹಾರ್ದತೆಯಿಂದ […]Read More
ಯುಗಾಧಿ ಹಬ್ಬವು ಹಿಂದುಗಳಿಗೆ ದೊಡ್ಡ ಹಬ್ಬ. ಹಿಂದೂಗಳ ಅನೇಕ ಹಬ್ಬಗಳಲ್ಲಿ ಬಹು ಮುಖ್ಯವಾದದ್ದು ಯುಗಾಧಿ ಹಬ್ಬ. ಹಿಂದೂಗಳ ಪಂಚಾಗದ ಪ್ರಕಾರ ಮೊದಲ ಹಬ್ಬ, ಹಳೆಯ ಸಂವತ್ಸರವನ್ನು ಕಳೆದು ಹೊಸ ಸಂವತ್ಸರದ ಚೈತ್ರ ಮಾಸದ ಮೊದಲ ದಿನವೇ ಯುಗಾಧಿ ಹಬ್ಬದ ಆಚರಣೆ. ಈ ಹಬ್ಬದ ಸಂದರ್ಭದಲ್ಲಿ ಪ್ರಕೃತಿಯು ಬದಲಾಗುವ ಪರಿಯನ್ನು ನೋಡಿ ಸಂತೋಷ ಪಡುವ ಸಂದರ್ಭ ಎನ್ನಬಹುದು, ಅಂದರೆ ಚೈತ್ರಮಾಸ ಆಗಮನವೆಂದರೆ ಮನಸ್ಸು ಅರಳಿಸುವಂತಹ ವಸಂತ ಮಾಸ ಎಂದು ಕೂಡ ಹೇಳಬಹುದು. ಈ ಹಬ್ಬ ಬಂದಾಗ ಚೆಂದದ ಕಳೆ […]Read More
ಸರ್ ಜಿಮ್ ಕಾರ್ಬೆಟ್ (ಬಿಳಿ ಸಾಹೇಬ) “ಗುಡ್ಡದ ಹಿಂಬದಿಯಲ್ಲಿ ಕಂಡ ಆ ನರಬಕ್ಷಕಿ ಒಂದೇಸಮನೆ ಚಲಿಸಿ ದೊಡ್ಡ ಬಂಡೆಯ ಮರೆಗೆ ಕರೆದೋಯ್ದಿತ್ತು, ಸುಮಾರು ಜನರ ಪ್ರಾಣ ತೆಗೆದು ಸುತ್ತಮುತ್ತ ಹಲವಾರು ಹಳ್ಳಿಗಳ ಜನರ ಜೀವಭಯಕ್ಕೆ ಕಾರಣವಾಗಿದ್ದ ಆ ಹುಲಿ ನನ್ನ ಬಂದೂಕಿಗೆ ಕೇವಲ 50 ಮೀಟರ್ ನೇರದಲ್ಲಿ ಕಾಣಿಸುತಿತ್ತು. ಇನ್ನೇನು ಗುಂಡು ಹಾರಿಸಬೇಕು ಅಷ್ಟರಲ್ಲಿ ಬಂಡೆಯ ಗುಹೆಯ ಒಳಗಿನಿಂದ ನಾಲ್ಕು ಪುಟ್ಟ ಮರಿಗಳು ನೆಗೆದು ನೆಗೆದು ಹೊರಬಂದವು. ಆಗ ಆ ಹುಲಿ ನನ್ನ ಇರುವನ್ನು ಗುರಿತಿಸಿ ಆಕ್ರಮಣ […]Read More
ಶ್ರೀ ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ ಮಾನ್ಯ ಶ್ರೀ ಕುವೆಂಪು ರವರು ಶ್ರೀ ರಾಮಾಯಣ ದರ್ಶನಂ ರಚಿಸುತ್ತಿದ್ದ ಕಾಲ, ಕಾವ್ಯವನ್ನು ಹಾಗಷ್ಟೇ ರಚಿಸಲು ಶುರು ಮಾಡಿದ್ದರು. ಒಂದೇ ಸಮನೆ ಬರೆದು ಬರೆದು ಮುಂದಕ್ಕೆ ಸಾಗಲು ಹಠಾತನೇ ಸ್ಫೂರ್ತಿ ನಿಂತು ಹೋಗಿ ವಾರಾನುಗಟ್ಟಲೆ ಕಾವ್ಯ ಮುಂದಕ್ಕೆ ಹೋಗಲೇ ಇಲ್ಲಾ. ಈಗೆ ಶ್ರೀ ಕುವೆಂಪುರವರು ಚಡಪಡಿಸುತಿದ್ದಾಗ ತಮ್ಮ ಮಗು ಕೈಗೂಸು ತೇಜಸ್ವಿಯವರು ಊಟ ಮಾಡದೆ ರಚ್ಚೆ ಹಿಡಿದು ಅಳುತಿದ್ದಾಗ ಹಠಾತ್ತನೆ ಹೊಳೆದ ಸಾಲು “ಏಕೆ ಅಳುವೇ ತೇಜಸ್ವಿಯೇ” ಮಗು ಸಮಾಧಾನಪಟ್ಟಿತೋ ಇಲ್ಲವೋ […]Read More
ಗಲಾಟೆ ಗುಬ್ಬಿ ಗುಬ್ಬಿಗಳಿಲ್ಲದ ಮನೆಯನ್ನು ಊಹಿಸಲು ಸಾಧ್ಯವೇ? ನಮ್ಮ ಅಜ್ಜಿಯ ಮನೆಯ ಪಡಸಾಲೆಯ ತುಂಬಾ ಹಾಗಾಗ ನಾನಾ ತರಹದ ಕಾಳುಗಳು, ಅಕ್ಕಿ ನುಚ್ಚು ಹಾಗೂ ಒಮ್ಮೊಮ್ಮೆ ಗೋದಿ ಕಾಳುಗಳನ್ನು ಒಣಗಲು ಹಾಕುತಿದ್ದಾಗ ಈ ಗುಬ್ಬಿಗಳು ತಮ್ಮ ಸೈನ್ಯದ ಸಮೇತ ದಾಳಿ ಇಡುತಿದ್ದವು. ಚಿಇಂಕ್-ಚಿಇಂಕ್ ಎಂದು ಎಡೆಬಿಡದೆ ಸದ್ದು ಮಾಡಿ ಕಾಳುಗಳನ್ನು ಹಾರಿಸಿಕೊಂಡೋಗುತಿದ್ದವು. ಅದೇನು ಸದ್ದು ಅವುಗಳದ್ದು, ಅಬ್ಬಬಾ ಆದರು ಇವುಗಳ ಸದ್ದು ಮನುಷ್ಯರ ಹಾಗೂ ವಾಹನದ ಸದ್ದಿನಷ್ಟು ಕಿರಿಕಿರಿಯೇನಲ್ಲ. ನಮ್ಮ ಅಜ್ಜಿಯ ಊರುಗೋಲಿನ ಸದ್ದು ಅವುಗಳನ್ನು ಕೆಲಕಾಲ […]Read More
ಮಯೂರ ನಮ್ಮ ರಾಷ್ಟ್ರಪಕ್ಷಿ ‘ಮುಗಿಲನು ಮುದ್ದಿಡೆ ನೆಲದ ಬೆಳೆ ಚಿಗಿವುದು, ಜಿಗಿವುದು ನೆಗೆವುದಿಳೆ; ಚಿಕ್ಕೆ ಇರುಳು ಕುಣಿದಂತೆ ಕುಣೀ ಕುಣಿ ಕುಣಿ ನವಿಲೇ ಕುಣೀ ಕುಣೀ’ ಡಾ|| ದ ರಾ ಬೇಂದ್ರೆ ನಮ್ಮ ರಾಷ್ಟ್ರ ಪಕ್ಷಿ ನವಿಲಿನ ಬಗ್ಗೆ ನಮ್ಮ ವರಕವಿ ಬೇಂದ್ರೆಯವರ ಸಾಲು. ಇತ್ತೀಚೆಗೆ ನಮ್ಮ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ನವಿಲಿನ ಜೊತೆಗಿರುವ ಚಿತ್ರಗಳು ಎಲ್ಲಾ ಮಾಧ್ಯಮದಲ್ಲೂ ಬಂದಾಗ ಅದೆಷ್ಟೋ ಜನರು ರೋಮಾಂಚಿತಗೊಂಡರು. ರಾಷ್ಟ್ರನಾಯಕನಾಗಿ ರಾಷ್ಟ್ರಪಕ್ಷಿಯ ಬಗ್ಗೆ ಅರಿವು ಮೂಡಿಸಲೆಂದೇ ಈ ಚಿತ್ರಗಳು ಬಂದದ್ದು […]Read More
ಜಯತೀರ್ಥ ಈಗಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಲ್ಲೊಬ್ಬರು. “ಒಲವೇ ಮಂದಾರ” ಚಿತ್ರದ ಮೂಲಕ ನಿರ್ದೇಶಕರಾಗಿ ಟೋನಿ, ಬುಲೆಟ್ ಬಸ್ಯಾ, ಬ್ಯೂಟಿಫುಲ್ ಮನಸ್ಸುಗಳು, ಬೆಲ್ ಬಾಟಮ್, ವನಿಲಾ, ಸಿನಿಮಾಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿ ಚಿತ್ರಗಳನ್ನು ಗೆಲ್ಲಿಸಿ ಈಗ ಸದ್ಯಕ್ಕೆ ತಮ್ಮ ಹೊಸ ಚಿತ್ರ “ಬನಾರಸ್” ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಜಯತೀರ್ಥರವರು ಈಗಿನ ಜನರಿಗೆ ತಿಳಿದ ಮಟ್ಟಿಗೆ ಒಬ್ಬ ಚಲನಚಿತ್ರ ನಿರ್ದೇಶಕರು ಆದರೆ ಅವರು ಬೆಳದು ಬಂದದ್ದು ಸಂಪೂರ್ಣ ರಂಗಭೂಮಿ ಹಿನ್ನೆಲೆಯಿಂದ ಹಾಗೂ ಊಹಿಸಲಾಗದಷ್ಟು ಅದ್ಬುತ ಕೆಲಸಗಳನ್ನು ರಂಗಭೂಮಿಯಲ್ಲಿ ಮಾಡಿದ್ದಾರೆ. ಈ […]Read More
ಕು. ಶಿ : ಪ್ರಸಾದ್ ರವರೆ ನಿಮ್ಮ ಹುಟ್ಟೂರು ಬಾಲ್ಯ ಹಾಗೂ ಶಿಕ್ಷಣದ ಬಗ್ಗೆ ತಿಳಿಸಿ ಪ್ರಸಾದ್ : ನಾನು ಹುಟ್ಟಿ ಬೆಳೆದದ್ದು ಹಾಗೂ ನನ್ನ ಪಿ ಯು ಸಿ ವರೆಗಿನ ಶಿಕ್ಷಣ ಮುಗಿಸಿದ್ದು ತುಮಕೂರಿನಲ್ಲಿ. ಚಿಕ್ಕಂದಿನಿಂದ ಶ್ರೀ ಗಳ ಸಿದ್ದಗಂಗಾ ಸಂಸ್ಥೆಯಲ್ಲಿ ಕಲಿಯಲು ತುಂಬಾ ಆಸಕ್ತಿಯಿತ್ತು ನಾನಾ ಕಾರಣದಿಂದ ಆಗಿರಲಿಲ್ಲಾ ಮುಂದೆ BE ಶಿಕ್ಷಣಕ್ಕೆ ಬೇರೆ ಕಾಲೇಜಿನಲ್ಲಿ ಸೀಟು ಸಿಕ್ಕರೂ ಶ್ರೀ ಗಳ ಮೇಲಿನ ಪ್ರೀತಿ ಅಭಿಮಾನದಿಂದ ಅವರದೇ ಸಂಸ್ಥೆಯಲ್ಲಿ ಬಿ ಎಸ್ ಸಿ ಕಂಪ್ಯೂಟರ್ […]Read More