ಕಲಿಕೆಯಲ್ಲಿ ತೊಡಗುವ ಮೊದಲುಶಿಷ್ಯಂದಿರು ಒಂದು ಮರದ ಕೊರಡು! ಅದನು ಗುರುವು ತಮ್ಮಲ್ಲಿನಅಪಾರ ಪಾಂಡಿತ್ಯ ಹಾಗೂಶಿಷ್ಯನ ಮೇಲಿನ ಪ್ರೀತಿಯಿಂದಸ್ಪರ್ಶಿಸಿ, ಸಲಹಿ, ಬೋಧಿಸಿ,ಸಂರಕ್ಷಿಸಿ ಗಂಧದ ತುಂಡಾಗಿಸುತ್ತಾರೆ… ಹಂತ ಹಂತವಾಗಿ ಅದರಲ್ಲಿಸುಗಂಧವನ್ನು ತುಂಬಿಸುತ್ತಾರೆ. ಇದು ಕೊರಡಲ್ಲವೆಂದೂಸುಗಂಧಭರಿತ ಕೊರಡೆಂದೂಶಿಷ್ಯನಿಗೆ ಅರ್ಥೈಸಿತಿಳಿಯ ಪಡಿಸುತ್ತಾರೆ… ಅಲ್ಲದೇ ನಿನ್ನ ಶಕ್ತಿಯ ಪ್ರಕಾರಇದನ್ನು ತೇಯಿತೇಯುತ್ತಲ್ಲೇ ಇರು.ಎಷ್ಟೆಷ್ಟು ತೇಯುವಿಯೋಅಷ್ಟಷ್ಟೂ ನಿನ್ನ ಪರಿಸರವುಸುಗಂಧಭರಿತವಾಗುವುದುಎನ್ನುವರು ಗುರು…. ಗುರುಭ್ಯೋ ನಮಃ 🙏 ತುಂಕೂರ್ ಸಂಕೇತ್ ಸಕಲ ಗುರುಗಳಿಗೆಲ್ಲಾ ಕೋಟಿ ನಮನ 🙏Read More
ಅನಂತ್ ಎಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ಆನೆಯನ್ನು ತಡವಿದಂತೆ. ಇನ್ನೂ ಅನಂತ್ ಏನೆಂದು ಅರ್ಥವಾಗೇ ಇಲ್ಲಾ ಎಂದರೆ ತಪ್ಪಾಗಲಾರದು. ಅನಂತ್ ತಮ್ಮ ಅಭೂತಪೂರ್ವ ನಟನೆಯಿಂದ ಮೂರು ತಲೆಮಾರಿನ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. “ಹಂಸಗೀತೆ, ಕನ್ನೇಶ್ವರ ರಾಮ” ಗಳಂತಹ ಚಿತ್ರಗಳನ್ನು ನೋಡಿದ್ದ ಹಿರಿಯರಿಗೆ ಅನಂತ್ ಅವರಲ್ಲಿ ಕಂಡಿದ್ದೇ ಬೇರೆ. ಆನಂತರದಲ್ಲಿ ನಟಿಸಿದ ಮಧ್ಯಮ ವರ್ಗದ ಸಾಮಾನ್ಯನ ಪಾತ್ರದಲ್ಲಿ ಲಕ್ಷ್ಮೀ ಅವರ ಜೋಡಿಯಾಗಿ ನಟಿಸಿದ್ದನ್ನು ಎರಡನೇ ತಲೆಮಾರಿನವರ ತಲೆಯಲ್ಲಿ ಈಗಲೂ ಉಳಿದಿದೆ. ಇತ್ತೀಚಿಗೆ ಹಾಸ್ಯ ಪಾತ್ರಗಳಲ್ಲದೇ ವಿಭಿನ್ನ ಪಾತ್ರಗಳಲ್ಲಿ ನೈಜವಾಗಿ ನಟಿಸಿ ಈ […]Read More
ರಂಗಭೂಮಿಯು ಒಮ್ಮೆ ಸೆಳೆಯಿತೆಂದರೆ ಸಾಕು. ಅದರಿಂದ ಹೊರ ಬರಲು ಸಾಧ್ಯವೇ ಇಲ್ಲಾ. ಕುಟುಂಬದಲ್ಲಿನ ಒಬ್ಬ ವ್ಯಕ್ತಿಯು ಈ ರಂಗಕ್ಕೆ ಪ್ರವೇಶ ಕೊಟ್ಟರೆ ಆ ವ್ಯಕ್ತಿಯ ಮುಂದಿನ ಎರಡು ಮೂರು ಪೀಳಿಗೆಯೂ ಇದರಲ್ಲಿ ಸಕ್ರಿಯರಾಗುತ್ತಾರೆ. ಅದು ಖಚಿತ. ರಂಗಕ್ಕೆ ಅಷ್ಟು ಸೆಳೆತವಿದೆ! ಈ ನಿಟ್ಟಿನಲ್ಲಿ ಮಹಿಳಾ ರಂಗಕರ್ಮಿ ಮಾಧುರಿ ಕೆ ಶಿವಣಗಿ ಅವರೂ ಇಂತಹ ಸೆಳೆತಕ್ಕೆ ಒಳಗಾಗಿದ್ದಾರೆ. ಓದಿದ್ದೇ ಬೇರೆ ವೃತ್ತಿಯೇ ಬೇರೆ. ಆದರೆ ತಮ್ಮ ತಂದೆಯಲ್ಲಿದ್ದ ರಂಗದ ನಂಟು ಮತ್ತೆ ಈಕೆಯಲ್ಲಿ ತುಡಿತವನ್ನು ಉಂಟು ಮಾಡಿ ಈ […]Read More
ಗಂಜೀಫಾ ಚಿತ್ರಕಲೆಯು ಸಂಪ್ರದಾಯಿಕ ಚಿತ್ರಕಲಾ ಪ್ರಪಂಚದ ಒಂದು ವಿಶಿಷ್ಟವಾದ ಕಲಾ ಕೊಡುಗೆ. ‘ಗಂಜೀಫಾ ಕಲೆಯು ಮೊಘಲರ ಕಾಲದಲ್ಲಿ ಇರಾನ್ ದೇಶದಿಂದ ನಮ್ಮ ಭಾರತಕ್ಕೆ ಬಂದ ಕಲೆ. ಹಾಗೆ ಬಂದ ಪರ್ಷಿಯನ್ನರ ಈ ಕಲೆ ಈಗ ಭಾರತೀಯ ಕಲೆಯೇ ಆಗಿಬಿಟ್ಟಿದೆ. ಮೈಸೂರು ಶೈಲಿಯ ಗಂಜೀಫಾ ಕಲೆ, ಆಟಗಳ ಶ್ರೇಯಸ್ಸು, ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಸೇರಬೇಕು. ಮುಮ್ಮಡಿಯವರನ್ನು ಒಳಗೊಂಡಂತೆ ಮೈಸೂರಿನ ಅರಸು ಮನೆತನದವರು ಸಾಹಿತ್ಯ, ಚಿತ್ರಕಲೆ, ನೃತ್ಯ, ಕ್ರೀಡೆ ಎಲ್ಲವನ್ನೂ ಸೇರಿದಂತೆ ಅನೇಕ ಕಲಾಪ್ರಕಾರಗಳ ಉನ್ನತಿಗೆ ಕಾರಣರಾಗಿದ್ದಾರೆ. ಆಗ ಇದನ್ನು […]Read More
ಚಿಟಿಕೆ ಹೊಡೆವಷ್ಟರಲಿ ಹೇಳಿ ಮುಗಿಸುವ ಕವನಪಠಿಸಿದರೆ ಸಾಕೊಮ್ಮೆ ನೆನಪಿಗೂ ಸುಲಭ.ಜಟಿಲತೆಯ ತೊಡಕಿಲ್ಲ; ಸುಲಿದ ಬಾಳೆಯ ಹಣ್ಣುಚುಟುಕ ಹೃದಯಂಗಮವು- || ಪ್ರತ್ಯಗಾತ್ಮ || ಹೂವಿಂದ ಹೂವಿಂಗೆ ಹಾರುತ್ತ ತಂದಿರುವೆಹೂವೊಡಲೊಳಿದ್ದಂಥ ಮಕರಂದವನ್ನುನೀವಿದನು ಸವಿನೋಡಿ ಮೆಚ್ಚಿದರೆ ಬಂಡುಣಿಗೆಆವುದಿದೆ ಬೇರೆ ಸುಖ?- || ಪ್ರತ್ಯಗಾತ್ಮ || ಈ ಜಗದಿ ದುಃಸಾಧ್ಯವೆಂಬುದಾವುದೂ ಇಲ್ಲಸಜ್ಜನ ಮಹಾಮಹಿಮ ಪುರುಷ ಸಿಂಹನಿಗೆ,ಆಂಜನೇಯನು ತಾನು ಶರಧಿಯನೆ ದಾಟಿದನುಸೋಜಿಗವದೇನಲ್ಲ- || ಪ್ರತ್ಯಗಾತ್ಮ || ಯಾವುದೇ ವಿಷಯದಲಿ ಸಂಶಯವು ಮೂಡಿರಲುಯಾವ ವ್ಯಕ್ತಿಯ ಕಡೆಗೂ ಹೋಗದಿರು ಒಡನೆ,ಸಾವದಾನದಿ ಕುಳಿತು ಆತ್ಮಚಿಂತನೆ ಮಾಡುಕಾವುದೈ ನಿನ್ನರಿವು- || […]Read More
ಓ ಮನುಜ,ಸಾವಿನ ಸ್ವರಕೇ ಅಂಜಿಹೆ ನೀ,ಸತ್ತ ಪ್ರತಿ ಸಲವುಬಿಟ್ಟ ಕೇವಲ ಕಣದಿಂ ಹುಟ್ಟಿಅರಳಿ ಮರಳಿಹೆ ನಾ.. ಬದುಕ ನಡೆಸುವ ಕರ್ಮ ನಿನಗೆಉಸಿರನ್ ಇತ್ತು,ಅನ್ನವ ಕೊಟ್ಟುಉಳಿಸಿ ಬೆಳೆಸುವ ಮರ್ಮ ಎನಗೆ … ಬದುಕುವ ಬವಣೆಗೆಕೊಲ್ಲುವ ಸ್ವಾರ್ಥಿ ನೀನಾದೆನೀ ಎಷ್ಟೇ ಕೊಂದರು, ಕೊಟ್ಟು ಕಾಯುವಬದುಕಿಗೆ ಅರ್ಥ ನಾನಾದೆ … ಮರಣಕೆ ಮರುಗುವ ಮನುಜಅರಿವನೆ ಮರೆತೆಯ ತನುಜಕಷ್ಟದಲಿ ತಾಳ್ಮೆಯಿಂ ತಾಳುಬಂದಷ್ಟು ದಿನ ಬದುಕಿ ಬಾಳು … ಸಮಾಜದ ಸಮರದೊಳ್ಸತ್ಕಾರ್ಯವ ಮಾಡು,ನಿಸರ್ಗವ ಅಳಿವಸಾವಿಗೇ ಸಾವಾಗು,ಪ್ರಕೃತಿಯ ಬದುಕಿನಬಸಿರಿಗೇ ಉಸಿರಾಗು … ಅRead More
ಶ್ವೇತ ವರ್ಣದ ಒಂಟಿ ಮನೆ, ಮನೆಯ ಹಿಂದೆ ಕಗ್ಗತ್ತಲ ಕಾಡು ಮನೆಯ ಮುಂದೆ ಅಡಿಕೆ ತೋಟ. ನೋಡಲು ಸುಂದರವಾದ ತಾಣವಾಗಿದ್ದರೂ ಅಲ್ಲಿ ನಡೆದ ಕೆಲ ಘಟನೆಗಳಿಂದ ಯಾರೂ ಆ ಮನೆ ಕೊಳ್ಳುವ ಧೈರ್ಯ ಮಾಡಿರಲಿಲ್ಲ. ಕೃಷಿಯ ಮೇಲಿನ ಆಸಕ್ತಿಯಿಂದ ಪಟ್ಟಣ ತೊರೆದು ಬಂದ ದಂಪತಿಗಳು ಊರಿನ ಎಷ್ಟೋ ಜನ ಎಷ್ಟು ರೀತಿಯಾಗಿ ಆ ಮನೆಯ ಬಗ್ಗೆ ಎಚ್ಚರಿಸಿದರು ಕೇಳದೆ ಆ ಮನೆ ಮತ್ತು ತೋಟವನ್ನು ಕೊಂಡಿದ್ದರು.ಆ ದಂಪತಿಗಳಿಗೆ ವಿಜ್ಞಾನದ ಹೊರತು ಮೂಢನಂಬಿಕೆಗಳ ಬಗ್ಗೆ ನಂಬಿಕೆ ಇರಲಿಲ್ಲ. ಮನೆ […]Read More
ಹಿಂದಿನ ಸಂಚಿಕೆಯಿಂದಅಗಸ್ತ್ಯನ ಮನೆಯಲ್ಲಿ ನಾಗ ಗಾಂಧಾರಿಯನ್ನು ಕಂಡ ಅಪ್ರಮೇಯನಿಗೆ ತನ್ನ ಹಾಗು ಅವಳ ಬಾಲ್ಯದ ನೆನಪುಗಳು ಮರುಕಳಿಸಿ ಅವಳ ಪ್ರೇಮಪಾಶದಿಂದ ಪಾರಾದ ಬಗೆಯನ್ನು ಚಿಂತಿಸುತಿದ್ದಾಗ ಅಗಸ್ತ್ಯ ವಾಗ್ವಾದಕ್ಕೆ ಬಿದ್ದು ನಾಗ ಗಾಂಧಾರಿಯು ನಿನಗೋಸ್ಕರ ಇನ್ನು ಮದುವೆಯಾಗದೆ ಉಳಿದಿರುವಳು ಎಂದು ಅಪ್ರಮೇಯನಿಗೆ ನೆನಪಿಸಿದ. ಅಪ್ರಮೇಯ ನಿರಾಕರಿಸಿದ್ದಕ್ಕೆ ನಾಗ ಗಾಂಧಾರಿಯು ಸಿಟ್ಟಿನಿಂದ ಕಿರುಚುತ್ತಾ “ನಾನು ನಿನ್ನ ಜೊತೆಗೆ ಜೋಷಿಮಠದ ಆಶ್ರಮಕ್ಕೆ ಬರ್ತೀನಿ. ಅದೇನು ಮಾಡ್ತೀಯೋ ಗೊತ್ತಿಲ್ಲ” ಎನ್ನುತ್ತಾ ಹೊರಬಂದು “ಈ ಅಪ್ರಮೇಯನಿಗೆ ಬುದ್ಧಿ ಕಲಿಸ್ತೇನೆ. ಅವನಿಗೆ ಕೆಟ್ಟ ಹೆಸರು ಬರುವಂತೆ […]Read More
‘ಹೆಣ್ಣು’ ಎಲ್ಲರ ಮನೆಯ ಕಣ್ಣು. ಹೆಣ್ಣೆಂದರೆ, ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ ಬದುಕುವ ಜೀವ. ಒಂದು ಸೃಷ್ಟಿಗೆ ಕಾರಣ ಹೆಣ್ಣು. ಹೆಣ್ಣು ಒಂದು ಅದ್ಭುತ. ಪ್ರತಿಯೊಬ್ಬ ಗಂಡಿನ ಜೀವನದಲ್ಲಿ ತಾಯಿಯಾಗಿ, ಅಕ್ಕ-ತಂಗಿಯಾಗಿ, ಹೆಂಡತಿಯಾಗಿ, ಮಗಳಾಗಿ ಪಾತ್ರವಹಿಸುತ್ತಿದ್ದಾಳೆ. ಅವಳ ಶಕ್ತಿಯ ಬಗ್ಗೆ ಅವಳಿಗೆ ತಿಳಿಯಬೇಕಾಗಿದೆ. ವೇಗವಾಗಿ ಓಡುತ್ತಿರುವ ಈ ಪ್ರಪಂಚದಲ್ಲಿ ಹೆಣ್ಣು ತನ್ನ ಸ್ಥಾನವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಎಲ್ಲಾ ಕಾರ್ಯಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಲಗ್ಗೆ ಇಟ್ಟಿದ್ದಾರೆ. ತನ್ನ ಸಂಸಾರದ ಭಾರವನ್ನು ಹೊತ್ತಿರುವ ಹೆಣ್ಣು ತನ್ನ ಕಾರ್ಯಕ್ಷೇತ್ರದಲ್ಲೂ ಯಾರಿಗೂ ಕಮ್ಮಿಯಿಲ್ಲದಂತೆ ದುಡಿಯುತ್ತಿದ್ದಾಳೆ. ಆದರೆ […]Read More
ಬಾಲ್ಯದ ನೆನಪುಗಳನ್ನು ನೆನೆದರೆ ಈಗಲೂ ಆ ಮಧುರ ಕ್ಷಣಗಳು ಮರಳಿ ಬಾರದೆ ಎನಿಸುತ್ತದೆ. ನಮ್ಮಂತಹ ಪಟ್ಟಣಗಳಲ್ಲಿ ಬೆಳೆಯುವ ಮಕ್ಕಳಿಗಂತೂ ಬೇಸಿಗೆಯ ರಜೆ ಶುರುವಾಗುವುದನ್ನು ಕಾಯುವುದೇ ದೊಡ್ಡ ಸಾಹಸ. ರಜೆ ಬಂದ ಕೂಡಲೇ ಅಜ್ಜಿಯ ಹಳ್ಳಿಯ ಮನೆ ಕಡೆಗೆ ದಾರಿ ಹಿಡಿದುಬಿಡುತಿದ್ದೆವು. ಅಂತಹ ಬಾಲ್ಯ ಮರುಕಳಿಸದೆ ಇರುವುದು ಕಹಿಯ ಸಂಗತಿ. ಕಾಂಕ್ರೀಟ್ ಕಾಡಿನಲ್ಲಿ ಬೆಳೆದ ನಮಗೆ ಹಳ್ಳಿಯ ಸೊಬಗು, ಹಸಿರು ಸೌಂದರ್ಯವೆಂದರೆ ಸ್ವರ್ಗವೇ ಸಿಕ್ಕಂತೆ. ಅಜ್ಜಿಯೊಡನೆ ಹೊಲಕ್ಕೆ, ತೋಟಕ್ಕೆ ಅಥವಾ ಹಿತ್ತಲಿಗೆ ಹೋಗಿ ಅಲ್ಲಿಯ ಹಸಿರನ್ನು ಕಣ್ತುಂಬಿಕೊಳ್ಳುವ ಕಾತುರ. […]Read More