ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಸರಿದ ತೆರೆ
ಮುಚ್ಚಿಟ್ಟ ಕೊಟ್ಟಡಿಯಲಿ
ವಾಸ ಮಾಡಲುಬಹುದೆ
ಅಂತೆಯೇ ಮನವನ್ನು
ಬಂಧಿಸಲು ಬಾರದು!
ಮನದೊಳಗೆ ತುಂಬಿರುವ
ನೋವು ಸಂಕಟವನ್ನು ,
ಕಣ್ಣೆಂಬ ಕಿಟಕಿಯಲಿ
ಒಮ್ಮೆಲೇ ತೂರಿಬಿಡು!
ಬಚ್ಚಿಟ್ಟ ನೋವುಗಳೇ
ಹಾವುಗಳಾದೀತು,
ವಿಷವ ಹರಿಸುತ್ತ ನಿನ
ಮನವ ಕೊಂದೀತು !
ತೆರೆದ ಕಿಟಕಿಯ ತೆರದಿ,
ತೆರೆ ಮನದ ಕಿಟಕಿಯನು
ಗಾಳಿ, ಬೆಳಕಿನ ತೆರದಿ
ಹೊಸ ಹೊಳವು ಬರಲಿ!

ಶ್ರೀವಲ್ಲಿ ಮಂಜುನಾಥ