ದಿಟ್ಟತನದಲ್ಲಿ ಭಾತೃತ್ವವನ್ನು ಹುಡುಕಿ
ಹೊರಟವಳಿಗೆ ದೊರಕಿದುದು
ದೂರದಲ್ಲೊಂದು ಆಶಾಕಿರಣ…..
ಬಾಲ್ಯದಲ್ಲಿ ಬೆಸೆದಿದ್ದ ಸಂಬಂಧಗಳು
ಹೇಳಹೆಸರಿಲ್ಲದೆ ಅಳಿದಿಹವು
ಕಾಲೇಜಿನಲ್ಲಿ ರಕ್ಷಾಬಂಧನದ ಹೆಸರಿನಲ್ಲಿ
ಎಷ್ಟೊಂದು ಸಹೋದರರು
ಬಣ್ಣಬಣ್ಣದ ಅನುಬಂಧಗಳವು
ಈ ಸಂಬಂಧಗಳು ದಿನಕಳೆದಂತೆ
ಬಣ್ಣ ಕಳೆದುಕೊಂಡಿದೆ.
ಕಾಲ ಚಕ್ರ ಉರುಳಿದಂತೆ
ಸಂಬಂಧಗಳ ಮಹತ್ವ ಅರಿತು
ಹುಡುಕಿದವಳಿಗೆ……
ಜನಪದರು ನೆನಪಾಗದೆ ಇರದು
ಬೆನ್ನಿಗೊಬ್ಬ ಸೂರ್ಯನಂತಹ ಅಣ್ಣ
ಚಂದ್ರನಂತ ತಮ್ಮ ಇರಬೇಕೆಂಬ
ಮಾತು ದಿಟ….
ಒಂದೇ ಬಳ್ಳಿ ಎಂದು ಜತನ ಮಾಡಿ
ಬೆಳೆಸಿದ ಅಪ್ಪ-ಅಮ್ಮ ಕಂಗಾಲಾಗಬೇಕೀಗ…
ಆದರೂ ಸಹೋದರರು ಸಿಗರೆ….
ಪುಟ್ಟ ತಮ್ಮನೊಬ್ಬ ಅಚಾನಕ್ಕಾಗಿ
ದೊರೆತು ಅಕ್ಕಾ ಎಂದಾಗ….
ಅಪರೂಪದ ಅನುಬಂಧ ಬೆಸೆದು
ಹೃದಯದ ಭಾವನೆಗಳೆಲ್ಲಾ ಅಳಿದು
ಸಂತಸದ ಒಡಲು ತುಂಬಿ
ರಕ್ಷಾಬಂಧನದ ದಿನ ರಕ್ಷೆ ಕಟ್ಟಿ
ಹಾರೈಸಿದಾಗ ಮನ ಸಂತಸದ
ಗೂಡಾಗಿತ್ತು.
ದಿವ್ಯ .ಎಲ್.ಎನ್.ಸ್ವಾಮಿ