ಅಪ್ಪನೆಂದರೆ
ಆಟವಾಡಿಸುತಲೇ
ಬದುಕಿನ ಪಾಠವನು
ಹೇಳುವವ, ಜೀವನದ
ಅನುಭವವ ತಿಳಿಸುವವ
ಮಕ್ಕಳಿಗೆ ಹಣವಿತ್ತೂ;
ಸಂಪಾದನೆಯ,
ಉಳಿತಾಯದ ಅರಿವ
ಮಾಡಿಸುವಾತ!
ತನ್ನ ಸುಖ ಬದಿಗೊತ್ತಿ
ತನ್ನವರಿಗಾಗಿಯೇ
ಹಗಲಿರುಲೆನ್ನದೆ
ದುಡಿವ ಶ್ರಮಜೀವಿ!!
ಮಮತೆಯ ಮಡಿಲು,
ಸ್ನೇಹದ ಒಲವಿನೊಡಲು,
ಶಿಸ್ತಿನ ಸಿಪಾಯಿ,
ಭರವಸೆಯ ಬಿಗಿಹಸ್ತ!
ಬೆರಗು, ಭರವಸೆ,
ಕನಸು, ಒಂದಿಷ್ಟು
ಬಿಗಿ, ಒಮ್ಮೊಮ್ಮೆ
ನನ್ನ ಕನ್ನಡಿಯೀತ!
ಶ್ರೀವಲ್ಲಿ ಮಂಜುನಾಥ