ಅಪ್ಪನ ವಾತ್ಸಲ್ಯದೊಲುಮೆ

ಅಪ್ಪನ ವಾತ್ಸಲ್ಯದೊಲುಮೆ

ಅಮ್ಮನಂತೆ ಅಪ್ಪನ ಪ್ರೀತಿ
ಎಂದೂ ಭೋರ್ಗರೆಯದಲ್ಲ…!
ಆದರೂ ಅವನೊಲುಮೆಯಲಿ
ಅದರ ರೀತಿಯಲಿ ಎರಡು ಮಾತಿಲ್ಲ..!

ಕಟ್ಟಿದ ಹಗ್ಗ ಬಿಟ್ಟೊಡನೆ ಕರು
ಜಿಗಿಯುವುದು ಹೆತ್ತ ಹಸುವಿನೆಡೆಗೆ..!
ಅಂತೆಯೇ ಪುಟ್ಟ ಸಲಹೆಗೂ…
ಮಕ್ಕಳೋಡುವರು ತಂದೆಯೆಡೆಗೆ!!

ಜಾರಿ ಬಿದ್ದಾಗ ಕೈಹಿಡಿದೆಬ್ಬಿಸಿ
ಬೆನ್ನುತಟ್ಟಿ ನಾನಿದ್ದೇನೆನುವಾ ಅಪ್ಪ..!
ಮುಗ್ಗರಿಸಿದಾಗ ತಲೆನೇವರಿಸಿ..
ಸಾಧನೆಯೆಡೆಗೆ ದಾರಿ ತೋರುವನು ಅಪ್ಪ!!

ಆಗಸದಷ್ಟು ಅಳೆಯಲಾರದ
ಮಮತೆ ತುಂಬಿದೆ ತಂದೆಯ ಹೃದಯದಲಿ!
ಯಾವ ಕಾರಣಕೂ ನಮ್ಮಿಂದಿನಿತೂ..
ನೋವಾಗದಿರಲಿ ಆ ಮನದಲಿ!!

ಸುಮನಾ ರಮಾನಂದ

Related post