ಅಪ್ಪು ಅಜರಾಮರ…
ಹೆಮ್ಮೆಯ ಕರುನಾಡು ಮರೆಯದ ರಾಜರತ್ನನು
ಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದನು
ಸನಾದಿ ಅಪ್ಪಣ್ಣನಲಿ ನಟನಾ ಚತುರನಾದನು
ತಾಯಿಗೆ ತಕ್ಕ ಮಗನಾಗಿ ಮನೆತನ ಬೆಳಗಿದನು
ಕನ್ನಡ ಚಿತ್ರರಂಗದ ಹೊಸ ಬೆಳಕು ನೀನು
ವಸಂತ ಗೀತೆಯ ಹಾಡಿದ ಮೌರ್ಯನು
ಪಡೆದಿರಿ ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿಯನು
ಯಾರಿವನು ಅಂದವರಿಗೆ ದೊಡ್ಮನೆ ಮಗನಾದವನು
ನಗುನಗುತಾ ಬಾಳಿದ ಪರಶುರಾಮನು
ಅಪ್ಪಿ ಮುದ್ದಾಡಿತು ಕರುನಾಡು ಅಪ್ಪುವನು
ಅರ್ಪಿಸಿದರು ವೀರ ಕನ್ನಡಿಗನಿಗೆ ಹಾಲಿನ ಅಭಿಷೇಕವನು
ಆಕಾಶದೆತ್ತರಕ್ಕೆ ಏರಿದ ನಮ್ಮ ಬಸವನು
ಪ್ರತಿ ಸಿನಿಮಾದಲಿ ಅಜಯ್ ಬಾರಿಸಿದವನು
ಅಭಿಮಾನಿಗಳ ಪಾಲಿಗೆ ಅರಸನಾದವನು
ಪರಮಾತ್ಮನಾಗಿ ಭೂಮಿಗೆ ಬಂದ ರಾಜ್ ನು
ಪೃಥ್ವಿಯೇ ಹಾಡಿ ಹೊಗಳಿದ ಮೈತ್ರಿಯ ರಾಮ್ ನು
ನಟನೆಗೆ ನಟಸಾರ್ವಭೌಮನಾದ ಲಕ್ಕಿಮ್ಯಾನ್ ನು
ಯುವಕರ ಪಾಲಿನ ಮರೆಯದ ಯುವರತ್ನನು
ಗಂಧದಗುಡಿಗೆ ದೇವರಾಗಿ ಬಂದ ರಾಜಕುಮಾರನು
ಭೂಮಿಯ ಮೇಲಿನ ನಕ್ಷತ್ರ ಅಂಜನಿಪುತ್ರನು.
ಜನ್ಮ ದಿನದ ಶುಭಾಶಯಗಳು ಅಪ್ಪು
ಶ್ರೀ ಮುತ್ತು.ಯ.ವಡ್ಡರ
ಶಿಕ್ಷಕರು
ಬಾಗಲಕೋಟ
ಮೊಬೈಲ್ : 9845568484