ಅಪ್ಪು
ಅಪ್ಪು ಎಂದರೆ
ಅದು ಅಪ್ಪನ ನೆನಪು
ಅಪ್ಪನ ಹಾಗೆ
ಕಾಡುವ ನೆನಪು
ಅವನಿಲ್ಲ!
ಎಂದು ಎಲ್ಲರು ಹೇಳುವುದೇ ಸುಳ್ಳು
ನನ್ನೆದೆಯ ಉಸಿರಿಗಿಂತ ಸಾಕ್ಷಿ ಬೇಕೇ?
ಪ್ರತೀ ಉಸಿರೂ ಅವನ ಹೆಸರು
ಹೆಸರಿಗಾಗಿ ದುಡಿದವನಲ್ಲ
ಜನರಿಗಾಗಿ ದುಡಿದವನು
ನುಡಿದಂತೆ ಬದುಕಿದವನು
ನಮ್ಮ ಮನೆ ಮಗನು
ಸರಿಯುವ ಮೋಡಗಳು ಹೇಳುತ್ತವೆ
ಆಕಾಶದಗಲ ಅವನದೇ ಚಿತ್ರ
ಗೋಡೆ ಗೋಡೆಯಲ್ಲೂ ಭಿತ್ತಿ ಪತ್ರ
ಊರಿಗೊಬ್ಬನೆ ರಾಜಕುಮಾರ
ನಮ್ಮೆಲ್ಲರ ಯುವರತ್ನ
ಅಕ್ಕಪಕ್ಕವೇ ಸುಳಿದಾಡುವ ಜೀವ
ಮನದೊಳಗೆ ನೆಲೆಸಿರುವ ಭಾವ
ಜೈಕಾರ ಹ್ಮೂಂಕಾರಗಳೆಲ್ಲ ನಕಾರ
ಯಾವುದಕ್ಕೂ ಜಗ್ಗದವನು
ಕುಗ್ಗಿದವರಿಗೆ ಧೈರ್ಯ ಕೊಟ್ಟವನು
ಕತ್ತಲ ಜನಕ್ಕೆ ಬೆಳಕಾದವನು
ಜೀವ ಜೀವಗಳಲ್ಲೂ ಉಸಿರಾಡುತಿಹನು
ಎಲ್ಲರ ನಗುವಿನಲ್ಲಿ ಮೆರೆಯದೆ
ಮರೆಯದಂತೆ ಬೆರೆತುಹೋದವನು
ಜೊತೆಗಿರದ ಜೀವ ಎಂದಿಗಿಂತ ಜೀವಂತ
ಅನಂತ ಕುಣಿಗಲ್
2 Comments
Super ✍️
ಚಂದದ ಕವನ