ರಂಗಭೂಮಿ ಒಂದು ಮಹಾ ಸಾಗರ. ಅಲ್ಲಿ ಅಭಿನಯಿಸುತ್ತ, ಕಲಿಯುತ್ತ ಮಾಗಿದ ಕಲಾವಿದರು ತಮ್ಮ ಅಭಿನಯ ವಿದ್ಯೆಯನ್ನು ಮುಷ್ಟಿಯಲ್ಲಿ ಎಂದು ಇಟ್ಟುಕೊಂಡಿಲ್ಲ. ಅದೇನಿದ್ದರೂ ತೆರೆದ ಕೈ. ಅಂತಹ ತಂಡಗಳಲ್ಲಿ “ರಂಗಚಕ್ರ ತಂಡ“ವು ಒಂದು.
“ರಂಗಚಕ್ರ ತಂಡ”ವು ಅಭಿನಯ ಕಾರ್ಯಾಗಾರದ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸುತ್ತಾ ಹಲವಾರು ನಾಟಕಗಳನ್ನು ಪ್ರಸ್ತುತ ಪಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಂಗಚಕ್ರ ರಂಗತಂಡವು ಡಿಸೆಂಬರ್ 11 2021 ರಿಂದ (7 ದಿನಗಳ ಕಾಲ ಅಭಿನಯ ಕಾರ್ಯಾಗಾರ, 25 ದಿನಗಳ ಕಾಲ ನಾಟಕ ತಾಲೀಮು ಮತ್ತು ಪ್ರದರ್ಶನ) ನೀನಾಸಂ ಪದವೀಧರರಾದ ನವೀನ್ ಸಾಣೇಹಳ್ಳಿ ರವರಿಂದ “ಅಭಿನಯ ಕಾರ್ಯಾಗಾರ”ವನ್ನು ಹಮ್ಮಿಕೊಳ್ಳಲಾಗಿದೆ. ವಯೋಮಿತಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶವಿರುತ್ತದೆ.
ಆಸಕ್ತರು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷರು
ಶ್ರೀ. ಮಹೇಶ್ ರವರು ಪ್ರಕಟಿಸಿದ್ದಾರೆ.
ಮಹೇಶ್ ಕುಮಾರ್- ಮೊ: ಸಂಖ್ಯೆ: 8971600558
ಈ ಕಾರ್ಯಾಗಾರವನ್ನು ನಾಟಕಕಾರರೂ, ನಿರ್ದೇಶಕರೂ ಹಾಗೂ ಪತ್ರಕರ್ತರೂ ಆದ ಶ್ರೀಯುತ ಪ್ರಕಾಶ್ ಬೆಳವಾಡಿ ರವರು ಉದ್ಘಾಟಿಸಲಿದ್ದಾರೆ.
ಸ್ಥಳ :- ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ,
ನಂ.151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ,
ದಯಾನಂದಸಾಗರ್ ಕಾಲೇಜ್ ಹತ್ತಿರ,
ವಸುಧಾ ಭವನದ ಎದುರು,
ಬೆಂಗಳೂರು – 560 078.
ಈ ಕಾರ್ಯಾಗಾರವನ್ನು ನಾಟಕಕಾರರೂ, ನಿರ್ದೇಶಕರೂ ಹಾಗೂ ಪತ್ರಕರ್ತರೂ ಆದ ಶ್ರೀ. ಪ್ರಕಾಶ್ ಬೆಳವಾಡಿ ರವರು ಉದ್ಘಾಟಿಸಲಿದ್ದಾರೆ.
ವಿ.ಸೂ. :- ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರೆಲ್ಲರೂ ಸರ್ಕಾರದ ವಿಧಿಸಿರುವ ಕೋವಿಡ್-19 ರ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸತಕ್ಕದ್ದು.
ಸಾಹಿತ್ಯಮೈತ್ರಿ ತಂಡ