ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರ
ಸ್ವತಂತ್ರ ಭಾರತದಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ವಾಕ್ ಸ್ವಾತಂತ್ರ್ಯ… ತನ್ನ ಭಾವನೆಗಳು ಹಾಗೂ ಅಭಿಪ್ರಾಯಗಳನ್ನು ಇತರರ ಜತೆ ಹಂಚಿಕೊಳ್ಳುವ ಅಥವಾ ವ್ಯಕ್ತಪಡಿಸುವ ಮುಕ್ತವಾದ ಅವಕಾಶವಿದ್ದು ಇದು ಆತನ ಸಾಂವಿಧಾನಿಕ ಹಕ್ಕೂ ಆಗಿರುತ್ತದೆ. ಇದು ಮುಖ್ಯವಾಗಿ ವಿವಿಧ ರೀತಿಯ ಪ್ರತಿಭಟನೆಗಳು, ಮನವಿಗಳು ಅಥವಾ ವ್ಯವಸ್ಥೆಯನ್ನು ವಿರೋಧಿಸುವುದರ ಮೂಲಕವೂ ಅಗಿರಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳಿಗಿಂತ ಹೆಚ್ಚಿನ ಪ್ರಾಧಾನ್ಯತೆ ಅಥವಾ ಪ್ರಾತಿನಿಧ್ಯವನ್ನು ಪಡೆಯುತ್ತಿರುವುದು ಮಾಧ್ಯಮಗಳು. ಅವುಗಳಲ್ಲಿ ಪ್ರಮುಖವಾಗಿ ಟೀವಿ ಮಾಧ್ಯಮಗಳು ಹಾಗೂ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಒಂದು ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಹಾಗೂ ಅದೇ ವ್ಯವಸ್ಥೆಯನ್ನು ಧಾರಾಶಾಯಿಯನ್ನಾಗಿಸುವಲ್ಲಿಯೂ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿವೆ. ಆದರೆ ಅವುಗಳ ಬಳಕೆಯ ರೀತಿ ಮಾತ್ರ ಧನಾತ್ಮಕವಾಗಿರಬೇಕಷ್ಟೇ.
ಅದೇ ರೀತಿಯಲ್ಲಿ ಜಗತ್ತಿನಲ್ಲಿ ತಂತ್ರಜ್ಞಾನಗಳು ಬೆಳೆಯುತ್ತಾ ಹೋದಂತೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಲ್ಲಿಯೂ ಯುವ ಜನಾಂಗ ಹಾಗೂ ಜನತೆ ಮುಗಿ ಬೀಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇವುಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಅತೀ ಹೆಚ್ಚಾಗಿ ಬಳಕೆಯಲ್ಲಿರುವವುಗಳಲ್ಲಿ ಫೇಸ್‌ಬುಕ್, ಟ್ವಿಟರ್, ವಾಟ್ಸ್ಆಪ್, ವೀ-ಚಾಟ್, ಹ್ಯಾಂಗೌಟ್, ವೈಬರ್, ಮೆಸೇಂಜರ್, ಕ್ವಿಕರ್, ಹಾಗೂ ಓ.ಎಲ್.ಎಕ್ಸ್ ಪ್ರಮುಖವಾದವುಗಳು.
ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಈ ಎಲ್ಲ ಜಾಲತಾಣಗಳನ್ನು ಜನತೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ತಿಳಿಸಲು ಬಳಸುವುದರ ಬದಲಾಗಿ ದೇಶ ವಿರೋಧಿ ಚಟುವಟಿಕೆ, ಘೋರ ಅಪರಾಧ ಕೃತ್ಯ ಅಥವಾ ಸಮಾಜ ದ್ರೋಹಿ ಚಟುವಟಿಕೆಗಳಿಗೇ ಹೆಚ್ಚಾಗಿ ಬಳಸಲಾಗುತ್ತಿರುವುದು ವಿಪರ್ಯಾಸ. ಇತ್ತೀಚೆಗಂತೂ ಮುಖ್ಯವಾಗಿ ಈ ಜಾಲತಾಣಗಳು ತಮ್ಮ ಮೂಲ ಉದ್ದೇಶವನ್ನೇ ಮರೆತು ಕೇವಲ ಹಣದಾಸೆಗೆ ಬಿದ್ದು ಯುವ ಜನಾಂಗವನ್ನು ಸೆಳೆಯಲು ನಾನಾ ತಂತ್ರಗಳನ್ನು ಮಾಡುತ್ತಿವೆ. ಇನ್ನು ಪುಟ್ಟ ಮಕ್ಕಳು, ಶಾಲಾ ಮಕ್ಕಳು, ಹದಿ ಹರೆಯದ ಯುವಕ ಯುವತಿಯರು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದವರಂತೆ ಈ ಜಾಲತಾಣಗಳ ಮೂಲಕ ಘೋರ ಕೃತ್ಯಗಳಲ್ಲಿ ತಮಗರಿವಿಲ್ಲದಂತೆಯೇ ತಾವೂ ಪಾಲುದಾರರಾಗುತ್ತಿರುವುದು ವಿಷಾದನೀಯವಾಗಿದೆ. ಇಂತಹ ಅಪರಾಧ ಯುಕ್ತ ಹಾಗೂ ಇತರರ ಭಾವನೆಗಳನ್ನು ಕೆರಳಿಸುವಂತಹ ಬರಹಗಳು ಹಾಗೂ ಚಿತ್ರಗಳನ್ನು ಸಮಾಜಿಕ ಜಲತಾಣಗಳಲ್ಲಿ ಪ್ರಕಟಿಸುವುದನ್ನು ನಿರ್ಭಂದಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕಾನೂನು ಜಾರಿಗೊಳಿಸುವುದು ಉತ್ತಮ.
ವಿಶೇಷವಾಗಿ ಈ ಸಾಮಾಜಿಕ ಜಾಲ ತಾಣಗಳು ಕುಸಿದಿರುವ ಸಮಾಜದ ಸ್ವಾಸ್ಥö್ಯವನ್ನು ಉತ್ತಮಪಡಿಸುವ, ಕುಸಿದಿರುವ ಜೀವನ ಮೌಲ್ಯಗಳನ್ನು ಮತ್ತೆ ಬೆಳೆಸುವ ಹಾಗೂ ಸಮಾಜದ ಆರೋಗ್ಯಕರ ಅಭಿವೃದ್ಧಿಯ ಉದ್ದೇಶಗಳಿಗೆ ಬಳಕೆಯಾಗಬೇಕಾಗಿದೆಯೇ ವಿನಹ ವ್ಯವಸ್ಥೆಯ ಹಾಗೂ ವ್ಯಕ್ತಿಯ ಅದ:ಪತನಕ್ಕೆ ಹಾಗೂ ಆತನ ಆತ್ಮಸ್ಥೈರ್ಯವನ್ನು ಕುಗ್ಗಿಸುವಲ್ಲಿ ಕಾರಣವಾಗುವ ರೀತಿಯಲ್ಲಿ ಅಲ್ಲ. ಇಲ್ಲಿ ವಿಶೇಷವಾಗಿ ಗಮನಿಬೇಕಾದ ಅಂಶವೆಂದರೆ ಈಗಿನ ಯುವ ಜನಾಂಗಕ್ಕೆ ಈ ಸಾಮಾಜಿಕ ಜಾಲ ತಾಣಗಳನ್ನು ಹೊಂದುವುದೇ ಒಂದು ಪ್ರತಿಷ್ಟೆ ಎಂಬಂತಾಗಿದೆ. ಹಾಗೂ ತಾನು ಪ್ರಕಟಿಸಿದ ನಿರ್ದಿಷ್ಟ ಪೋಸ್ಟ್ನ್ ಅತೀ ಹೆಚ್ಚು ಮಂದಿ ಲೈಕ್, ಅತೀ ಹೆಚ್ಚು ಕಮೆಂಟ್‌ಗಳು, ಅತಿ ಹೆಚ್ಚಿನ ಶೇರ್ ಗಳಾದಲ್ಲಿ ಅದು ತಮ್ಮ ಪ್ರತಿಷ್ಟೆ ಹಾಗೂ ಘನತೆಯನ್ನು ಇಮ್ಮಡಿಗೊಳಿಸುತ್ತದೆ ಎಂದು ಭಾವಿಸುವಂತಾಗಿದೆ ಇಂದಿನ ಯುವ ಜನಾಂಗದ ಚಿಂತನೆ. ತಮ್ಮ ಘನತೆಯನ್ನು ಇಮ್ಮಡಿಗೊಳಿಸಿಕೊಳ್ಳುವ ಭರಾಟೆಯಲ್ಲಿ ಇತರರ ವರ್ಚಸ್ಸಿಗೆ ಮತ್ತು ಮನಸ್ಸಿಗೆ ಘಾಸಿಯಾಗುವ ಹಾಗೂ ಇತರರಿಗೆ ಇರಿಸು ಮುರುಸಾಗುವಂತಹ ಬರಹ ಹಾಗೂ ಚಿತ್ರಗಳನ್ನು ವಿವೇಚನೆಯಿಲ್ಲದೆ ಪ್ರಕಟಿಸುವಲ್ಲಿಯೂ ಹಿಂದೆ ಮುಂದೆ ನೋಡುವುದಿಲ್ಲ.ಇತ್ತೀಚಿನ ದಿನಗಳಲ್ಲಿ ಸಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಇತರರನ್ನು ಆಕರ್ಷಿಸುವ, ಪ್ರೇರೇಪಿಸುವ ಹಾಗೂ ಉದ್ರಿಕ್ತಗೊಳಿಸುವ ಕೋಮು ಸೌಹಾರ್ದತೆಯನ್ನು ಕದಡುವಂತಹ ಬರಹ ಹಾಗೂ ಚಿತ್ರಗಳು ಪ್ರಕಟವಾಗುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಇಂತಹ ಬರಹಗಳಿಂದ ಪ್ರೇರಿತವಾದ ಅದೆಷ್ಟೊ ಕೋಮು ಗಲಭೆಗಳು, ಅದೆಷ್ಟೋ ಆತ್ಮಹತ್ಯೆ ಪ್ರಕರಣಗಳು ಅದೆಷ್ಟೋ ಸಮಾಜ ವಿರೋದಿ ಘಟನೆಗಳು ನಮ್ಮ ಕಣ್ಣಂಚಲ್ಲಿ ಹಾದು ಹೋಗುತ್ತವೆ. ಇತ್ತೀಚಿನ ದಿನಗಳಲ್ಲಿ ದೇಶ ವಿರೋದಿ ಸಂಘಟನೆಗಳು ಹಾಗೂ ಅಂತರಾರಾಷ್ಟ್ರೀಯ ಉಗ್ರ ಸಂಘಟನೆಗಳು ತಮ್ಮ ಗುಂಪುಗಳನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ, ತಮ್ಮ ಕಾರ್ಯ ಸಾಧನೆಗೆ ಹಾಗೂ ತಮ್ಮ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಈಡೇರಿಸಿಕೊಳ್ಳುವಲ್ಲಿ ಬಳಸಿಕೊಳ್ಳುತ್ತಿರುವುದು ಆಘಾತಕಾರಿ ವಿಚಾರವಾಗಿದೆ.ಸಾಮಾಜಿಕ ಜಾಲತಾಣಗಳಿಂದಾಗುವ ಉಪಯೋಗಗಳು:ಸಾಮಾಜಿಕ ಜಾಲತಾಣಗಳಿದ ಹಲವಾರು ಉಪಯೋಗಗಳು ಇವೆ, ಅವುಗಳೆಂದರೆ:
ಸಾಮಾಜಿಕ ಜಾಲತಾಣಗಳನ್ನು ಉದ್ಯೋಗಿಗಳು ಉತ್ತಮವಾದ ಔದ್ಯೋಗಿಕ ಅವಕಾಶಗಳನ್ನು, ಹಾಗೂ ವ್ಯವಹಾರಸ್ಥರು ಉತ್ತಮವಾದ ಮಾರುಕಟ್ಟೆ ಅವಕಾಶಗಳನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಉತ್ಯುತ್ತಮವಾಗಿ ಬಳಸಿಕೊಳ್ಳಬಹುದಾಗಿದೆ.
• ಔದ್ಯೋಗಿಕವಾಗಿ ಹಾಗೂ ವ್ಯಾವಹಾರಿಕವಾಗಿ ಇಂದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಮೂಲಕ ಇದು ಇತರರಿಗೂ ಸಹಾಯ ಹಸ್ತವನ್ನು ಚಾಚುವ ಕೆಲಸವನ್ನು ಮಾಡುತ್ತದೆ. ಅಂದರೆ ಒಂದು ಸೇವೆಯನ್ನು ನೀಡುವಲ್ಲಿ ಅಥವಾ ಪಡೆದುಕೊಳ್ಳುವಲ್ಲಿ ಒಬ್ಬ ಯೋಗ್ಯ ವ್ಯಕ್ತಿ, ಯೋಗ್ಯ ಸಂಸ್ಥೆ ಅಥವಾ ಯೋಗ್ಯ ಉತ್ಪನ್ನಗಳನ್ನು ಪಡೆಯುವಲ್ಲಿ ಸಹಕಾರಿಯಾಗಬೇಕು.
- ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತಮಗೆ ಯೋಗ್ಯವಾದ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡುವಲ್ಲಿ ಹಾಗೂ ತಮ್ಮ ವಿದ್ಯಾಭ್ಯಾಸಕ್ಕೆ ಬೇಕಾದ ಅಧ್ಯಯನ ಸಾಮಾಗ್ರಿಗಳನ್ನು ಆಯ್ದುಕೊಳ್ಳುವಲ್ಲಿಯೂ ಸಹಕಾರಿಯಾಗಬಲ್ಲದು.
- ಬಹಳಷ್ಟು ವಿಚಾರಗಳನ್ನು ಎಲ್ಲೋ ಇರುವ ಬಳಕೆದರರು ಏಕ ಕಾಲದಲ್ಲಿ ಒಂದು ವಿಚಾರಗಳನ್ನು ಬಹಳಷ್ಟು ಮಂದಿಯೊAದಿಗೆ ಹಂಚಿಕೊಳ್ಳಬಹುದು ಹಾಗೂ ನಿರಂತರವಾದ ಸಂಪರ್ಕದಲ್ಲಿರಬಹುದು.
- ಸ್ಕೆöಪ್ ಅಂತೂ ಪ್ರಪಂಚವನ್ನು ಬಹಳ ಕಿರಿದು ಮಾಡಿದೆ ಅಂದರೆ ದೇಶ ವಿದೇಶಗಳಲ್ಲಿರುವ ಬಹಳಷ್ಟು ಮಂದಿ ಗೆಳೆಯರನ್ನು ಹಾಗೂ ಬಂಧುಗಳನ್ನು ಅಂತರ್ಜಾಲದ ಮೂಲಕ ಅತ್ಯಂತ ಸಮಿಪದಲ್ಲಿರುವಂತೆ ಮಾಡಿದೆ.
- ಕೆಲವು ಯುವಕ ಯುವತಿಯರಂತೂ ಇವುಗಳೇ ತಮ್ಮ ಜೀವನಾಡಿ ಎಂಬAತೆ ಹಗಲು ರಾತ್ರಿ ಎನ್ನದೆ ದಿನದ 24 ಗಂಟೆಯೂ ಅವುಗಳ ಬಳಕೆಯೊಂದಿಗೆ ಅಪರಿಚಿತರೊಂದಿಗೆ ನಿರಂತರವಾದ ಸಂಪರ್ಕದಲ್ಲಿರುತ್ತಾರೆ ಹಾಗೂ ಕೊನೆಗೆ ಇದು ಯಾವುದಾದರೊಂದು ರೀತಿಯ ಅಪರಾಧ ಕೃತ್ಯದೊಂದಿಗೆ ಪರ್ಯಾವಸಾನಗೊಳ್ಳುತ್ತದೆ.
- ಹೆಚ್ಚಿನ ಈ ಜಾಲತಾಣಗಳು ಯುವ ಪೀಳಿಗೆಯ ಜೀವನದ ಒಂದು ಭಾಗವಾಗಿರುವ ಬದಲು ಮರವನ್ನು ಆವರಿಸಿದ ಬಳ್ಳಿಯ ರೀತಿ ಇಂದಿನ ಯುವ ಪೀಳಿಗೆಯ ಜೀವನವನ್ನು ಇವುಗಳು ಆವರಿಸಿಕೊಂಡು ಅವುಗಳೇ ಜೀವನದ ಪ್ರಮುಖ ಭಾಗವಾಗಿ ಬಿಟ್ಟಿವೆ.
- ಒಂದು ದಿನ ಅಥವಾ ಕೆಲವೇ ಗಂಟೆಗಳ ಕಾಲ ಈ ಜಾಲತಾಣಗಳು ತಮ್ಮ ಕಾರ್ಯ ಚಟುವಟಿಕೆಯನ್ನು ತಾಂತ್ರಿಕ ಸಮಸ್ಯೆಗಳಿಂದ ನಿಲ್ಲಿಸಿ ಬಿಟ್ಟರೆ ಇಂದಿನ ಯುವ ಪೀಳಿಗೆ ನೀರಿನಿಂದ ಮೇಲೆತ್ತಿದ ಮೀನಿನಂತೆ ವಿಲವಿಲ ಒದ್ದಾಡುವುದನ್ನು ಗಮನಿಸಬಹುದಾಗಿದೆ.
- ಅಪ್ರಾಪ್ತ ಮಕ್ಕಳು ತಮ್ಮ ವಯಸ್ಸ್ಸಿಗೂ ಮೀರಿದ ಕೆಲವೊಂದು ಅಶ್ಲೀಲ ವಿಚಾರಗಳೆಡೆಗೆ ಅತ್ಯಂತ ಎಳೆ ವಯಸ್ಸಿನಲ್ಲೇ ಆಸಕ್ತರಾಗಿ ಬಾಲಾಪರಾಧಗಳಲ್ಲಿ ತಮಗರಿವಿಲ್ಲದಂತೆಯೇ ತೊಡಗುವ ಸಾಧ್ಯತೆಗಳು ಅಧಿಕವಾಗಿದೆ.
- ಅಂಕಿ ಅಂಶಗಳ ಪ್ರಕಾರ ಹೆಚ್ಚಿನ ಬಾಲಾಪರಾಧಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿಯೇ ನಡೆದಿರುತ್ತವೆ ಎಂಬುವುದು ಅತ್ಯಂತ ಖೇದಕರ ವಿಚಾರವಾಗಿದೆ.
- ಇತರರನ್ನು ಆಕರ್ಷಿಸುವಂತಹ, ಅನಾಮಿಕ ಖಾತೆ ಹಾಗೂ ಬೇನಾಮಿ ಖಾತೆಗಳನ್ನು ಜಾಲತಾಣಗಳಲ್ಲಿ ತೆರೆಯುವ ಮೂಲಕ ಇತರರ ಮಾನ ಹಾಗೂ ಪ್ರಾಣ ಹಾನಿ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ.
ಅಂಕಿ ಅಂಶಗಳ ಪ್ರಕಾರ ಹೆಚ್ಚಿನ ಬಾಲಾಪರಾಧಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿಯೇ ನಡೆದಿರುತ್ತವೆ ಎಂಬುವುದು ಅತ್ಯಂತ ಖೇದಕರ ವಿಚಾರವಾಗಿದೆ.
- ಇತರರನ್ನು ಆಕರ್ಷಿಸುವಂತಹ, ಅನಾಮಿಕ ಖಾತೆ ಹಾಗೂ ಬೇನಾಮಿ ಖಾತೆಗಳನ್ನು ಜಾಲತಾಣಗಳಲ್ಲಿ ತೆರೆಯುವ ಮೂಲಕ ಇತರರ ಮಾನ ಹಾಗೂ ಪ್ರಾಣ ಹಾನಿ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ.
- ಇತ್ತೀಚೆಗೆ ನಡೆದ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಗಲಭೆಗಳು ಹೆಚ್ಚು ತೀವ್ರ ಸ್ವರೂಪವನ್ನು ಪಡೆದುಕೊಂಡು ಅವುಗಳು ಕೋಮು ಸಂಗರ್ಷಕ್ಕೆ ತಿರುಗುವಲ್ಲಿಯೂ ಸಾಮಾಜಿಕ ಜಾಲತಾಣಗಳ ಪಾತ್ರವನ್ನು ನಾವು ಗಮನಿಸಬಹುದಾಗಿದೆ.
ಸಾಮಾಜಿಕ ಜಾಲತಾಣಗಳ ಸದ್ಭಳಕೆ ಹೇಗೆ?
ಸಾಮಾಜಿಕ ಜಾಲತಾಣಗಳಿಂದಾಗುವ ಒಳಿತು ಹಾಗೂ ಕೆಡುಕುಗಳನ್ನು ಗಮನಿಸಿದಾಗ ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಬಹುದು:
ಜಾಲತಾಣಗಳ ಬಳಕೆಯನ್ನು ಕೇವಲ ಉತ್ಪಾದಕ ಹಾಗೂ ಸದುದ್ದೇಶಗಳಿಗೆ ಮಾತ್ರ ಬಳಕೆಯನ್ನು ಮಾಡುವುದು.
ಜಾಲತಾಣಗಳ ಬಳಕೆಯ ಪೂರ್ವದಲ್ಲಿ ಇವುಗಳ ಬಳಕೆದಾರರು ಖಾಸಗಿತನದ ನಿಯಮಾವಳಿಗಳನ್ನು ಸಂಪೂರ್ಣವಾಗಿ ಓದಿ ಅಥೈಸಿಕೊಂಡು ಇವುಗಳು ನಮ್ಮ ಖಾಸಗಿತನವನ್ನು ಎಷ್ಟು ಸುಭದ್ರವಾಗಿ ಕಾಪಾಡುತ್ತವೆ ಎಂಬುವುದನ್ನು ಮನಗಂಡ ನಂತರವಷ್ಟೇ ಬಳಕೆ ಮಾಡುವ ಯೋಚನೆಯನ್ನು ಮಾಡಬಹುದಾಗಿದೆ.
ಅಪರಿಚಿತ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಪ್ಪಿಸುವ ಎಲ್ಲಾ ಸುರಕ್ಷಾ ಮಾರ್ಗಗಳನ್ನು ಅನುಸರಿಸಬೇಕು.
ಯಾವುದೇ ಕಾರಣಕ್ಕೂ ವೈಯುಕ್ತಿಕ ವಿಚಾರಗಳಾದ ದೂರವಾಣಿ ಸಂಖ್ಯೆ, ಮೈಲ್ ಐಡಿ ಹಾಗೂ ವಿಳಾಸ ಮತ್ತು ನಮ್ಮ ಭಾವಚಿತ್ರಗಳನ್ನು ಜಾಲತಾಣಗಳಲ್ಲ್ಲಿ ಪ್ರದರ್ಶಿಸಲೇಬಾರದು.
ಜಾಲತಾಣಗಳು ವ್ಯಕ್ತಿತ್ವದ ಬೆಳವಣಿಗೆ ಹಾಗೂ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ಅವಕಾಶಗಳ ಆಯ್ಕೆಗಾಗಿ ಬಳಕೆಯಾಗಬೇಕಿದೆ.
ಗೆಳೆಯರೊಂದಿಗೆ ಹಾಗೂ ಸಂಬಂಧಿಗಳೊಂದಿಗೆ ಶೀಘ್ರ ಸಂಪರ್ಕ ಸಾಧಿಸುವ ಹಾಗೂ ಸದಾ ಅವರೊಂದಿಗೆ ನಿಕಟ ಸಂಪರ್ಕದೊಂದಿಗೆ ಇರುವ ಉದ್ದೇಶದೊಂದಿಗೆ ಪ್ರಾರಂಭವಾದ ಜಾಲತಾಣಗಳು ನಿಧಾನವಾಗಿ ಅವುಗಳ ಉದ್ದೇಶವೇ ಮರೆತು ಹೆಚ್ಚು ಹೆಚ್ಚು ಸದಸ್ಯರನ್ನು ಸೆಳೆಯುವ ಉದ್ದೇಶದೊಂದಿಗೆ ಹೊಸ ಸೌಲಭ್ಯಗಳನ್ನು ಒದಗಿಸುವ ಧಾವಂತದಲ್ಲಿ ಅಪಾಯಗಳನ್ನು ತಂದೊಡ್ಡುತ್ತಿರುವ ಬಗ್ಗೆ ವಿಶೇಷ ಗಮನವನ್ನು ಹರಿಸಬೇಕಾಗಿದೆ.
ಗ್ರಾಹಕರು ಇವುಗಳನ್ನು ಆಯ್ಕೆ ಮಾಡುವಲ್ಲಿಯೂ ವಿಶೇಷ ಕಾಳಜಿಯನ್ನು ವಹಿಸುವುದು ಸೂಕ್ತ.
ತಮ್ಮ ಹದಿಹರೆಯದ ಮಕ್ಕಳು ಈ ಜಾಲತಾಣಗಳ ಗೀಳಿಗೆ ಬೀಳುವ ಸಂದರ್ಭಗಳನ್ನು ಸೂಕ್ಷö್ಮವಾಗಿ ಗಮನಿಸುತ್ತಿರಬೇಕು ಹಾಗೂ ಅವುಗಳಿಂದಾಗುವ ಒಳಿತು ಹಾಗೂ ಕೆಡುಕುಗಳ ಕುರಿತಾಗಿ ವಿಸ್ತಾರವಾಗಿ ತಿಳಿಹೇಳಬೇಕು.
ಜಾತಿ, ಧರ್ಮ ಹಾಗೂ ಇತರರನ್ನು ಅವಹೇಳನ ಮಾಡುವಂತಹ ಯಾವುದೇ ಬರಹಗಳನ್ನು ಬೆಂಬಲಿಸುವುದು ಹಾಗೂ ಹಂಚಿಕೊಳ್ಳುವ ಮುನ್ನ ದೀರ್ಘವಾಗಿ ಯೋಚಿಸುವುದು ಉತ್ತಮ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಪ್ರಪಂಚದಲ್ಲಿ ಚಾಲ್ತಿಯಲ್ಲಿರುವ ಒಟ್ಟು ಫೇಸ್‌ಬುಕ್ ಖಾತೆಗಳಲ್ಲಿ ಸುಮಾರು 83 ಮಿಲಿಯನ್ ಫೇಸ್‌ಬುಕ್ ಖಾತೆಗಳು ನಕಲಿ ಹಾಗೂ ಬೇನಾಮಿ ಖಾತೆಗಳಾಗಿವೆ ಎಂಬುವುದನ್ನು ನಾವೆಲ್ಲಾ ಮರೆತೇ ಬಿಟ್ಟಿದ್ದೇವೆ. ಇವುಗಳ ಸಂಪರ್ಕ ಕಡಿತಗೊಳಿಸುವ ನಿಟ್ಟಿನಲ್ಲಿ ಕಠಿಣ ಕಾನೂನಿನ ಜಾರಿ ವಿಶ್ವ ಮಟ್ಟದಲ್ಲೇ ಆಗಬೇಕಾಗಿದೆ. ಹಾಗೂ ಇವುಗಳ ಕುರಿತು ಎಚ್ಚರ ವಹಿಸುವುದು ಅತೀ ಅಗತ್ಯ. ಅದ್ದರಿಂದ ಸಮಾಜದ ಸ್ವಾಸ್ತ್ಯ ಕಾಪಾಡುವ ಹಾಗೂ ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟುಕೊಂಡು ಪ್ರಾರಂಭವಾದ ಸಾಮಾಜಿಕ ಜಾಲತಾಣಗಳನ್ನು ಸದುದ್ದೇಶಗಳಿಗೆ, ದೇಶದ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶಗಳಿಗೆ ಬಳಕೆಯಾಗುವ ನಿಟ್ಟಿನಲ್ಲಿ ಬಳಸುವುದನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು. ಅದು ಬಿಟ್ಟು ಲಂಗು ಲಗಾಮಿಲ್ಲದೆ ಬರೆಯಲಾಗುವ ಸ್ವೇಚ್ಛಾಚಾರದ ಬರಹಗಳಿಗೆ ಹಾಗೂ ಉತ್ತಮ ವ್ಯವಸ್ಥೆಯನ್ನು ಹಾಳುಗೆಡುವುವ ಹಾಗೂ ಇತರರ ತೇಜೋವಧೆ ಮಾಡುವಂತಹ ಉದ್ದೇಶಗಳಿಗೆ ಅವುಗಳ ಬಳಕೆಯಾಗುವುದಾದರೆ ಅಲ್ಲಿನ ಅಭಿವ್ಯಕ್ತಿ ಸ್ವಾತಂತ್ರö್ಯಕ್ಕೆ ಖಂಡಿತವಾಗಿಯೂ ಜಾಲತಾಣಗಳು ಹಾಗೂ ಸರಕಾರ ಸಾಮಾಜಿಕ ಕಳಕಳಿಯ ಆದ್ಯತೆಯ ಮೇರೆಗೆ ಕಡಿವಾಣ ಹಾಗೂ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಲೇಬೇಕು. ಇದಕ್ಕಾಗಿ ಕಠಿಣ ಶಿಕ್ಷೆಯನ್ನು ನೀಡುವ ಗಂಭೀರವಾದ ಕಾನೂನನ್ನೂ ಜಾರಿಗೆ ತರಬೇಕು. ಇಲ್ಲವಾದಲ್ಲಿ ಸಮುದಾಯದ ಯುವ ಜನಾಂಗದ ಧನಾತ್ಮಕ ಹಾಗೂ ಉಜ್ವಲ ಭವಿಷ್ಯದೆಡೆಗಿನ ಚಿಂತನೆಗಳನ್ನು ದೂರ ಮಾಡಿ, ಯುವ ಜನಾಂಗವನ್ನು ತಪ್ಪು ದಾರಿಗೆಳೆದು ಅಪರಾಧಿಗಳನ್ನು ಹುಟ್ಟು ಹಾಕುವ ತಾಣಗಳಾಗಿ ಇಡೀ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುವ ದಿನಗಳು ದೂರವಿಲ್ಲ. ಈ ದಿಸೆಯಲ್ಲಿ ಯುವ ಜನಾಂಗ ಮಾತ್ರ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿರುವುದು ಅತೀ ಅವಶ್ಯಕ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160