ಅಮರ ಸುಭಾಷ್!
ಜೈ ಹಿಂದ್’ ಎಂದಿರಿ
ಸ್ವಾತಂತ್ರ್ಯಕ್ಕಾಗಿ ಹೋರಾಡಿದಿರಿ
ಜೈಲುವಾಸಕ್ಕೂ ‘ಸೈ’ ಎಂದಿರಿ
ಬ್ರಿಟಿಷಗರಿಗೆ ಸಿಂಹ ಸ್ವಪ್ನ ವಾದಿರಿ
ವಿವೇಕರ ವಾಣಿಯ ಆಲಿಸಿದಿರಿ
ಅರವಿಂದರ ಅನುಸರಿಸಿದಿರಿ
ಬಾಪುಗೆ ‘ರಾಷ್ಟ್ರಪಿತ’ ಎಂದಿರಿ
‘ನೇತಾಜಿ’ ಎಂದೆನಿಸಿದಿರಿ
ಗಾಂಧೀಜಿಗೆ ಪ್ರಿಯವಾದಿರಿ
ಬಿಸಿರಕ್ತದವರಿಗೆ ಪ್ರೇರಣೆಯಾದಿರಿ
‘ರಕ್ತ ಕೊಡಿ-ಸ್ವಾತಂತ್ರ್ಯ ಕೊಡುವೆ’ ಎಂದಿರಿ
ಸ್ವಾತಂತ್ರ್ಯಕ್ಕಾಗಿ ಮಹಾನ್ ತ್ಯಾಗಿಗಳಾದಿರಿ
ಗಾಂಧೀಜಿ ಒಂದೆಡೆ ಎಂದಾದರೆ
ಸುಭಾಷ್‍ಜಿ ಮತ್ತೊಂದೆಡೆ ಎಂದಾಯ್ತು
ನೀವಿಬ್ಬರು ನಾಣ್ಯದ ಮುಖಗಳಾದಿರಿ
ಎರಡರ ಉದ್ಧೇಶವೂ ‘ಆಜಾದ್’ ಆಗಿತ್ತು!
ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದಿರಿ
ದೇಶದುದ್ದಗಲ ಓಡಾಡಿದಿರಿ
ಬ್ರಿಟಿಷರ ವಿರುದ್ಧ ಹೋರಾಡಿದಿರಿ
ವಿದೇಶಗಳಲ್ಲೂ ಖ್ಯಾತರಾದಿರಿ
ಜೀವದ ಹಂಗಿಲ್ಲದೇ ಮುನ್ನುಗ್ಗಿದಿರಿ!
ಮರಣವೆಂಬುದೇ ತಮಗಿಲ್ಲ!
ಎನ್ನುತ್ತಿಹರು ಅಭಿಮಾನಿಗಳೆಲ್ಲ
ಎಂದೆಂದಿಗೂ ತಾವು ಅಮರ!
ತುಂಕೂರು ಸಂಕೇತ್
ಕಲಾಕೃತಿ ಕೃಪೆ: ರವಿ ಪೂಜಾರಿ
1 Comment
ಉತ್ತಮ ಕವಿತೆ