ಅಮ್ಮ
ಅಮ್ಮನ ಮಡಿಲು ಅಘಾದ ಪ್ರೇಮದ ಕಡಲು
ಮಮತೆ ಪ್ರೀತಿ ಎಂದೆಂದೂ ಬರಿದಾಗದ ಒಡಲು
ಅಮ್ಮ ಎನ್ನುವ ಮೊದಲನೆ ಪದವು
ಅದರೊಳು ಅಡಗಿದೆ ಮಮತೆ ಮಾಧುರ್ಯವು
ನೋವು ನಲಿವು ಯಾವುದೇ ಇರಲು
ನೆನಪಲಿ ಬರುವುದು ಅಮ್ಮನ ಒಲವು
ಅತ್ತಾಗ ಸಂತೈಸುವಳು, ನಕ್ಕಾಗ ಸುಖಿಸುವಳು
ಕಂದನ ಹೊನ್ನುಡಿಯನು ಕಂಡು ಮುದ್ದಾಡಿದವಳು
ಮಕ್ಕಳ ಪಾಲಿನ ಕಲ್ಪವೃಕ್ಷವೇ ಇವಳು
ಉತ್ತಮ ದಾರಿ ತೋರಲು ದೇವ ನೀಡಿದ ಗುರು ಇವಳು
ಸುಖದಲ್ಲಿ ನಗುವವಳು, ದುಃಖದಲ್ಲಿ ಹೆಗಲಾಗುವಳು
ನೋವಿನಲಿ ಕಣ್ಣೀರೋರೆಸುವ ನಿಸ್ವಾರ್ಥ ಪ್ರೀತಿಯ ತವರವಳು
ನಮ್ಮನ್ನು ಪೊರೆವ ಕ್ಷಮಯಾ ಧರಿತ್ರಿ
ನಮ್ಮನ್ನು ಸಲಹುವ ಅಪರೂಪದ ಗುಣಧಾತ್ರಿ
ಅಮ್ಮ ಎಂದರೆ ತಂಪೆರೆಯುವ ನೆರಳು
ಅವಳಿಲ್ಲದೆ ಬಾಳೆಲ್ಲವು ಬರಡು
ಡಾ. ಪ್ರಕಾಶ್ ಕೆ.ನಾಡಿಗ್