ಅರಳಿ ಸೆಳೆದ ಗುಲಾಬಿ

ಓ ಕಲ್ಪನೆಯ ಹೆಣ್ಣೆ
ಕನಸಲ್ಲಿ ಕಾಣುತಿರುವೆ ನಾ
ನಿನ್ನೊಂದಿಗಿನ ಆ ಸುಂದರ ಸೆಣೆಸಾಟ.
ಅದಕ್ಕೆ ನಿತ್ಯವು ನಿನ್ನ ಹೊಕ್ಕಳ ಮೇಲೆ
ಹೊರಳಾಟದ ಬಯಕೆ ನನಗೆ..
ನೀನೆ ತೆರೆದಿಟ್ಟು ಕರೆದ ಮೇಲೆ
ನಾನೇನನ್ನೂ ಮುಚ್ಚಿಡುವುದಿಲ್ಲ..
ಸನಿಹ ಬಾ ಇಬ್ಬರ ಬಯಕೆಗೆ ನಾಚಿ ಸುರಿಸೋ
ಆ ಮುಗಿಲ ಮಳೆಯಷ್ಟೇ ಸಾಕು..

ಬೇಕಂತಲೇ ಗಟ್ಟಿಯಾಗಿ ಉಡದ ಸೀರೆಯನು
ನೀ ಎಷ್ಟಂತ ಹಿಡಿದುಕೊಳ್ಳುವೆ,
ನನ್ನನು ಕೆರಳಿಸಿ ಕರೆಯುವ ನಿನ್ನ ಈ
ಚಾಲಾಕಿತನವನ್ನ ನಾನೆಂದೋ ಅರಿತಿರುವೆ.
ತಿಳಿದಿಕೋ ಅರಳಿದ ಗುಲಾಬಿ ಸೆಳೆಯದೆ ಇರಲಾರದು
ಬಳಿಗೆ ಕರೆದು ಸ್ಪರ್ಶಿಸಿಕೊಳ್ಳದೆ ಬಿಡಲಾರದು..

ಇಂದಿಗೂ ಮುದುಡಿಕೊಂಡೆ ಇದ್ದವು
ನನ್ನ ಕೈ ಬೆರಳುಗಳೆಲ್ಲ.ನಿನ್ನ ಹೊಕ್ಕಳ
ಮೇಲೆಲ್ಲ ಕೈಯಾಡಿಸುವ ಕೆಲಸ ಕೊಟ್ಟ ಮೇಲೆ
ನಾನು ಹೇಗೆ ಸುಮ್ಮನಿರಲಿ ಹೇಳು?
ಅದಕ್ಕೆ ದಿನವೂ ಕವಿತೆಯನ್ನು ಗೀಚುತಿರುವೆ.
ಆ ಸುಖದ ಸ್ಪರ್ಶ ನೆನೆದು,
ನೀನೆ ತೆರೆದು ತೋರಿದ ಆ ಜಾಗದ ತುಂಬೆಲ್ಲ..

ನನ್ನ ನಿನ್ನ ನಡುವೆ ಮಾತಿಲ್ಲ ನಿಜ
ಆದರೆ ನಡುಗದ್ದೆಯಲ್ಲಿ ಬೆಳೆಯುತಿರುವ
ಬತ್ತದ ಬಯಕೆಯ ನಾಟಿ ಬದುಕಬೇಕಲ್ಲವೇ?
ಬಾ ನನ್ನ ನಿನ್ನ ಉಸೀರ ಸ್ಪರ್ಶದೊಂದಿಗೆ
ಈ ಮಿಲನದಲ್ಲಿ ಭಾಗಿಯಾಗಿ
ಕೆಲಕಾಲ ಶೆಖೆಯನ್ನ ಸೃಷ್ಟಿಸಿ ಒಂದಿಷ್ಟು
ಮುಂಗಾರು ಮಳೆಯನು ಸುರಿಸಿ ಬಿಡೋಣ..

ನನ್ನದು ಕನಸಿನ ಜಾತ್ರೆ,ನೀನು ಆ ಕನಸಿನ ಮಾತ್ರೆ
ಕನಸು ನನಸಾಗುವಂತೆ,ಗುಲಾಬಿ ಅರಳುವಂತೆ,
ಮತ್ತೆ ಮತ್ತೆ ಅರಳುತ್ತಾ ನನ್ನನು ಕೆರಳಿಸುತ್ತಾ
ಹಾಗೆ ತೆರೆದುಕೊಂಡೆ ಕನಸಲ್ಲಿ ಬರುತ್ತೀರು ಚೆಲುವೆ,
ಅಲ್ಲಿ ನನ್ನ ಮುತ್ತಿಂದ ನಿನ್ನದೇ ಮತ್ತೊಂದು
ಚಿತ್ರ ಬಿಡಸಿ ಕಂಡ ಕನಸು ನಾ ಸಾರ್ಥಕಗೊಳಿಸಿ
ಬಿಡುವೆ..

ಶಿವೂ ಅಣ್ಣಿಗೇರಿ..

ಶಿಗ್ಗಾವಿ

Related post