ಅರಿಯಲಾಗದ ಅಂತರಾಳ
ಒಡಲಾಳವ ಬಗೆದಷ್ಟೂ
ಬಗೆಬಗೆಯ ರಂಗಿನ
ಚಿತ್ತಾರ ಮೂಡುತ್ತಲಿವೆ;
ಹಸಿಬಿಸಿಯ ನೆನಪಿನ
ಬುಗ್ಗೆಯುಕ್ಕಿ ಮನವ
ರಾಡಿಗೊಳಿಸುತ್ತಲಿವೆ;
ಅರಿವಾಗದ ನೋವಿನ
ತಳಮಳದಲಿ ಮನ
ಕಳವಳಿಸುತ್ತಲಿದೆ ;
ಮರದ ಕೊಂಬೆಯ
ಯಾರೂ ಜಗ್ಗಿ ಬಿಟ್ಟಂತೆ
ಮನ ತುಯ್ದಾಡುತ್ತಲಿದೆ;
ಬಚ್ಚಿಡಲು ಹೆಣಗಿ
ಸೋತು, ಮುಚ್ಚಿಡಲಾಗದ
ಮನ ಮರುಗುತ್ತಲಿದೆ ;
ಹೇಳಲಾಗದ, ಹೇಳದೇ
ಇರಲಾಗದ ಭಾವವೊಂದು
ಮನವ ಕಾಡುತ್ತಲಿದೆ,!
ಶ್ರೀವಲ್ಲಿ ಮಂಜುನಾಥ್