ಅರಿವಿನ ಗುರುವಿಗೆ ನಮನ

ಅರಿವಿನ ಗುರುವಿಗೆ ನಮನ

ಕತ್ತಲಿನಲ್ಲಿ ನೊಂದ
ಮನದಲ್ಲೊಂದು
ಕಿರುದೀಪ ಬೆಳಗಿದಾ
ನಿನಗಿಂದು ಶರಣು !

ನಿಶೆಗೆ ಅಂಜಿದವಳಿಗೆ
ಚುಕ್ಕಿಗಳ ತೋರಿಸಿ
ಬಿಕ್ಕುಗಳ ಮರೆಸಿದಾ
ನಿನಗಿಂದು ಶರಣು !

ಮೌನದರಮನೆಯರಸಿಗೆ
ಕೋಗಿಲೆಯ ಸ್ವರದೊಡನೆ
ಗಿಳಿಮಾತ ಕಲಿಸಿದಾ
ನಿನಗಿಂದು ಶರಣು !

ನಡೆಯುವುದ ಮರೆತು
ಎಡವುತಿದ್ದವಳ ಕಾಲಿಗೆ
ನವಿಲ ನಡಿಗೆ ತುಂಬಿದಾ
ನಿನಗಿಂದು ಶರಣು !

ಈ ಬರಡು ಬಾಳಿನಲಿ
ಹಸಿರನ್ನು ಚಿಗುರಿಸಿ,
ಹೂವರಳಿಸಿ ನಗಿಸಿದ
ನಿನಗಿಂದು ಶರಣು !

ಗುರಿಯಿರದ ಬಾಳಿಗೆ
ಗುರುವಾಗಿ, ಗುರಿಯೆಡೆಗೆ
ನಡೆಸಿದ ಅರಿವಿನಾ ಗುರುವೆ
ನಿನಗಿಂದು ಶರಣು !!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *