ಅಳಲು
ಗಿಡವಾದೆ, ಮರವಾದೆ
ಬಯಲಿನಲಿ ಬೆತ್ತಲಾದೆ
ಮಾನವನ ದಾಹಕೆ ಬಲಿಯಾದೆ
ಹೆಚ್ಚಿಸಿಕೊಳ್ಳುತಿಹ ಮಾನವ ತನ್ನ ಸಂಕುಲವಾ
ಕಡಿದು ಬುಡಮೇಲು ಮಾಡುತಿಹ ಸಸ್ಯರಾಶಿಯಾ
ತನ್ನ ಹೊಟ್ಟೆ ಹೊರೆಯಲು ಕತ್ತರಿಸುತಿಹ ಮರಗಳಾ
ಉರುವಲಿಗೆ ಮರಗಳೇ ಬೇಕೇನಿವನಿಗೆ
ನಿಗಿ ನಿಗಿ ಹೊಳೆಯುತಿಹ ರವಿ ಕಾಣನಿವನಿಗೆ
ಕಾದಿದೆ ತಕ್ಕ ಶಾಸ್ತಿ ಮುಂದೊಂದುದಿನ ಅವನಿಗೆ
ಮುಂದೊಂದು ದಿನ ಹಸಿರಿಲ್ಲದೇ ನೆರಳಿಲ್ಲದೇ
ನೀರಿಲ್ಲದೇ ಅವ ಒಣಗುವುದಿಲ್ಲವೇ
ಎಂದೂ ಮರೆಯಾಗದ ಸೂರ್ಯ ನೋಡುವುದಿಲ್ಲವೇ
ಕಾಡು ಕಡಿದರೆ ನಾಡಿಲ್ಲ
ನಾಡಿಲ್ಲದಿರೆ ನಾವಿಲ್ಲ
ಸಿ. ಎನ್. ಮಹೇಶ್