ಅಳಲೇಕೆ ಅಳುಕು

ಅಳಲೇಕೆ ಅಳುಕು

ಮನದಲವಿತಿಹ ಭಾವನೆಯ
ಅಭಿವ್ಯಕ್ತಿಯಲ್ಲಳುವೂ
ಒಂದೆಂಬುದು ಸುಳ್ಳಲ್ಲ ;

ಕಹಿ ನೆನಪುಗಳೆಮ್ಮ
ಮನದಲಡಿಗಡಿಗೂ
ಅಡಿಯನಿಡುತಿರಲು,
ಅಳಲು ಅಳುಕೇಕೆ ;

ಕಂಗಳ ಕೊಳೆಯೊಡನೆ
ಮನದ ಮೂಲೆಯಲಿ
ಹರಳುಗಟ್ಟಿದ ನೋವು
ಮುತ್ತಾಗಿ ಹರಿದು ಬರಲಿ!

ಆಪ್ತರನ್ನಪ್ಪಿ, ಭೋರೆಂದು
ಅತ್ತ ಮನ ಹಗುರಾಗಿ
ನಗಲಿ, ನಗುನಗುತಲಿರಲಿ!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *