ಅವತಾರಗಳು

ಲೇಖಕರು: ಡಾ. ಸಿದ್ದಲಿಂಗಯ್ಯ
ಪ್ರಕಾಶಕರು: ಅಂಕಿತ ಪುಸ್ತಕ
ಬೆಲೆ : 95 /-

“ಅವತಾರಗಳು” ಡಾ ಸಿದ್ದಲಿಂಗಯ್ಯನವರ ವಿಶಿಷ್ಟ ಕೃತಿ. ಇಲ್ಲಿ ಅವತಾರಗಳೆಂದರೆ ದಶಾವತಾರವಲ್ಲ. ಇವು ಜಾನಪದ ದೇವರುಗಳ ಅವತಾರಗಳು.

ಗ್ರಾಮೀಣ ಬದುಕಿನಲ್ಲಿ ಕಾಣಿಸುವ ದೇವರುಗಳು ಹಾಗು ಅದರ ಭಕ್ತರುಗಳು, ಮುಗ್ದ ಜನರ ಅಜ್ಞಾನಗಳು ಮತ್ತು ಮೌಢ್ಯಗಳು ಇವುಗಳನ್ನು ಲಾಭಕ್ಕಾಗಿ ಬಳಸುವ ಕಿಲಾಡಿತನಗಳು ಇದರಲ್ಲಿ ವಿಡಂಬನಾತ್ಮಕ ರೂಪದಲ್ಲಿ ಬರೆಯಲ್ಪಟ್ಟಿವೆ.
ತಾವು ಕೇಳಿದ ಹಾಗು ಖುದ್ದಾಗಿ ನೋಡಿದ ಪ್ರಸಂಗಗಳು, ಮೈಮೇಲೆ ಬರುವ ದೇವರುಗಳು ಅವುಗಳ ಅವತಾರಗಳನ್ನು ಸಿದ್ದಲಿಂಗಯ್ಯನವರು ತಮ್ಮ ನವಿರಾದ ಹಾಸ್ಯ ವಿಡಂಬನೆಯ ಶೈಲಿಯಲ್ಲಿ ವಿವರಿಸುತ್ತಾ ಹೋಗುತ್ತಾರೆ. ಆಂಜನೇಯನನ್ನೇ ಮೈಮೇಲೆ ಬರಿಸಿಕೊಳ್ಳುವ ಒಬ್ಬ, ಮತ್ತೊಬ್ಬಳ ಮೈಮೇಲೆ ಬಿಸಿಲಮ್ಮ, ಇವರಿಬ್ಬರ ನಡುವಿನ ತಿಕ್ಕಾಟ, ನಡುವೆ ಅಮಾಯಕ ಭಕ್ತರು ಹೀಗೆ ಹಲವು ಪ್ರಸಂಗಗಳು ಗಡಸು ಮೋರೆಯ ಮೇಲು ಸಹ ನಗು ತರಸುತ್ತದೆ

ದೇವರು ಎಂಬ ಭಾವನೆ ತಾರಕದ ಉನ್ಮಾದಕ್ಕೇರಿದಾಗ ಆಗುವ ಅನಾಹುತಗಳು ಮಾಡುವ ನ್ಯಾಯ, ಭಕ್ತರ ನಡುವಿನ ವಿರಸಗಳು, ನಂಬಿಕೆಗಳು, ಪೂಜೆಗೊಳ್ಳುವ ವಿಶಿಷ್ಟ ವಿಧಾನಗಳು, ಈ ದೇವರುಗಳ ವಿಚಿತ್ರ ಸ್ವಭಾವಗಳನ್ನು ಈ ಕೃತಿಯಲ್ಲಿ ಕಾಣಬಹುದು.

ಈ ಪುಸ್ತಕದಲ್ಲಿ ಶ್ರೀ ಸಿದ್ದಲಿಂಗಯ್ಯನವರು, ಅಮಾಯಕ ಭಕ್ತರ ಅಜ್ಞಾನವನ್ನು ದೇವರ ಹೆಸರಿನಲ್ಲಿ ತಮ್ಮ ಸ್ವಾರ್ಥತಕ್ಕಾಗಿ ಬಳಸಿಕೊಳ್ಳುವ ಕೆಲವರ ಕಿಲಾಡಿತನವನ್ನು ತೆಳು ಹಾಸ್ಯ ರೂಪದಲ್ಲಿ ಕೊಟ್ಟರು ಸಹ ಗಾಢವಾದ ಚಿಂತನೆಗೆ ಹಚ್ಚುವಂತಹ ಹಲವು ವಿಚಾರಗಳು ಈ ಕೃತಿಯಲ್ಲಿವೆ.

ಒಮ್ಮೆ ತರಿಸಿ ಓದಿ

ಕುಮಾರ್ ಕೆ ಪಿ

Related post

Leave a Reply

Your email address will not be published. Required fields are marked *