ಅವಳಿಲ್ಲದೆ,,,,
ಈ ಬದುಕು ಇನ್ನೇಕೆ ಅವಳಿಲ್ಲದೆ
ಅವಳಿಲ್ಲದೆ ಮನಸು ಇರವಲ್ಲದೆ.
ಅವಳೆನ್ನ ಪ್ರೀತಿ,,ನನ ಬಾಳ ಜ್ಯೋತಿ
ಹೇಳದೆ ಹೋದಳೊ,,ನನ್ನನ್ನ ಮರೆತಿ
ಇದು ನ್ಯಾಯವೇ,,, ಇದು ಪ್ರೀತಿಯೇ .?!!೧!!
ಒಂದು ಕ್ಷಣ ಇರಲಾರೆ ಅವಳಿಲ್ಲದೆ ,,
ಅವಳಂಥ ಮನವು ಸಿಗವಲ್ಲದೆ.
ಅವಳೇನೆ ಬದುಕು,,ಅವಳಿಂದ ಹುರುಪು
ಹೋಗುವಾಗ ನಾನು,, ಬರಲಿಲ್ಲ ನೆನಪು
ಇದು ನ್ಯಾಯವೇ,,, ಇದು ಪ್ರೀತಿಯೇ.?!!೨!!
ಕಷ್ಟದಲಿ ಕೈ ಹಿಡಿದು ಮೇಲೆತ್ತಲು,,
ಮರೆಯಾಯ್ತು ಆ ನನ್ನ ಕಾರ್ಗತ್ತಲು
ಅವಳೆನ್ನ ಉಸಿರು,,,ಅವಳಿಂದ ಹಸಿರು
ಹೋಗುವಾಗ ಕೂಗದೆ ನನ್ನ ಹೆಸರು
ಇದು ನ್ಯಾಯವೇ,,, ಇದು ಪ್ರೀತಿಯೇ.?!!೩!!
ಈ ಬಡವ ಬದುಕೋಕೆ ಅವಳಾ ಜೊತೆ
ಭಗವಂತ ಬರೆದಿದ್ದ ಇಂಥಾ ಕಥೆ
ಬದುಕಿದ್ದು ಸತ್ಯಾ,,,ಬದುಕಿದಳು ನಿತ್ಯಾ,,
ನನ್ನಿಂದ ದೂರಕ್ಕೆ ನೀ ಯಾಕ ಹೊದ್ಯಾ.?
ಇದು ನ್ಯಾಯವೇ,,, ಇದು ಪ್ರೀತಿಯೇ,,.?!!೪!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ