ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ – 2023

“ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ – 2023”

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ಇವರ ವತಿಯಿಂದ ಪ್ರತೀ ವರ್ಷದಂತೆ “ಶ್ರೀಮಾನ್ ಲೇ. ನರಸಯ್ಯ” ಅವರ ಸ್ಮರಣಾರ್ಥ ಕೊಡಮಾಡುವ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ 2022 ಮತ್ತು 2023 ರಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.

ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ. * 2023 ರ ಆಗಸ್ಟ್ 31 ರ ಒಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು, ಪ್ರತ್ಯೇಕ ಹಾಳೆಯಲ್ಲಿ ಬರೆದ ಸ್ವಪರಿಚಯ, ಸಂಪೂರ್ಣ ಅಂಚೆ ವಿಳಾಸ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕವೇ (ರಿಜಿಸ್ಟರ್ ಪೋಸ್ಟ್) ತಮ್ಮ ಕೃತಿಗಳನ್ನು ಕಳಿಸಬಹುದಾಗಿದೆ. ಒಬ್ಬ ಲೇಖಕ ತನ್ನ ಎರಡು ಕೃತಿಗಳ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. * ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಆತ್ಮಕತೆ, ವಿಮರ್ಶಾ ಸಂಕಲನ, ಪಿ.ಹೆಚ್.ಡಿ ಪ್ರಬಂಧಗಳು, ಅನುವಾದ ಹಾಗೂ ಸಂಶೋಧನಾ ಕೃತಿಗಳನ್ನು ಹೊರತುಪಡಿಸಿ ಸಾಹಿತ್ಯದ ಯಾವುದೇ ಪ್ರಕಾರದ (ಕತೆ, ಕಾದಂಬರಿ, ಕವಿತೆ, ಹನಿಗವನ, ನಾಟಕ, ಲೇಖನ, ಲಲಿತ ಪ್ರಬಂಧ, ಪ್ರವಾಸ ಕಥನ) ಕೃತಿಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. * ನವೆಂಬರ್ ತಿಂಗಳಲ್ಲಿ ಕಿರುಪಟ್ಟಿ ಬಿಡುಗಡೆ ಮಾಡಲಾಗುವುದು. ಅವ್ವ ಪುಸ್ತಕಾಲಯ ನಡೆಸುವ ಅವ್ವ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಬಹುಮಾನಿತರನ್ನು ಅಭಿನಂದಿಸಲಾಗುವುದು.

ಬಹುಮಾನಗಳ ವಿವರ:

1). ಮೊದಲ ಸ್ಥಾನ ಪಡೆದ ಸೃಜನಶೀಲ ಕೃತಿಗೆ ಈ ವರ್ಷದ ಪ್ರಶಸ್ತಿಯ ಜೊತೆಗೆ 2500/- ರೂಗಳ ನಗದು ಬಹುಮಾನ ಮತ್ತು 2500/- ರೂ ಮೌಲ್ಯದ ಪುಸ್ತಕ ಬಹುಮಾನ.

2). ಮೆಚ್ಚುಗೆ ಪಡೆದ ಐದು ಕೃತಿಗಳಿಗೆ ಪ್ರಶಸ್ತಿ ಪತ್ರದ ಜೊತೆಗೆ ತಲಾ 500/- ರೂಗಳ ನಗದು ಬಹುಮಾನ ಮತ್ತು 500/- ರೂ ಮೌಲ್ಯದ ಪುಸ್ತಕ ಬಹುಮಾನ. ಹೆಚ್ಚಿನ ಮಾಹಿತಿಗಾಗಿ ಅವ್ವ ಪುಸ್ತಕಾಲಯಕ್ಕೆ ಬರೆಯಬಹುದು.

ಮೇಲ್ : avvapustakaalaya@gmail.com

ತಮ್ಮ ಕೃತಿಗಳನ್ನು ಕಳಿಸಬೇಕಾದ ಅಂಚೆ ವಿಳಾಸ :

ಅವ್ವ ಪುಸ್ತಕಾಲಯ#189, ನಾಗರೀಕ ಸೇವಾಕೇಂದ್ರಕೆಂಚನಹಳ್ಳಿ ಅಂಚೆ, ಹುಲಿಯೂರುದುರ್ಗ ಹೋಬಳಿಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ – 572123

ಮೊ : 8548948660

ಪ್ರಕಟಣೆ : ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *