ಅವ ಬರುವ
ಓ ಮುಗಿಲೆ
ಅವ ಬರುವ
ಮಳೆಯಂತೆ
ನನ್ನನಾವರಿಸಲು;
ಮಳೆಬಿಲ್ಲೆ
ಅವ ಬರುವ
ಕಂಗಳಲಿ ರಂಗಿನಾ
ಕಾಂತಿ ತುಂಬಲು;
ಕೋಗಿಲೆಯೆ
ಅವ ಬರುವ
ಇನಿದನಿಯಲಿ
ನುಡಿ ಕಲಿಸಲು;
ಓ ನವಿಲೆ
ಅವ ಬರುವ
ನನ್ನಯಾ ನಡಿಗೆಗೆ
ನಾಟ್ಯ ಕಲಿಸಲು;
ಓ ವೀಣೆ
ಅವ ಬರುವ
ಮನದ ತಂತಿಯ
ತಾ ಮೀಟಲು;
ನೋವ ನೀಗಲು
ಅವ ಬರುವ
ಸುಖದ ಸೆಲೆ
ತಾನಾಗಿ ಬರುವ!!
ಶ್ರೀವಲ್ಲಿ ಮಂಜುನಾಥ