ಅಷ್ಟದಿಗ್ಗಜನೇ ?

ಹಠ ಹಠ ಕೇಳೋದಿಲ್ಲ ಇವನು
ನಿಮ್ಮಲ್ಯಾರೋ ಹೇಳಿ ಸ್ವಾಮಿ
ಭೂಮಿ ಇವನ ಕೈಲಿ ಇದಯಂತೆ!
ಏನಾಶ್ಚರ್ಯ ಆ ವರಾಹ ಸ್ವಾಮಿ ಕೈಲಿರೋದು
ರಬ್ಬರ್ ಚೆಂಡೆ?

ಮತ್ತೆ ನನ್ನ ಕೈಲಿರೋದು
ಏನೂ ಅಂತಾನೆ ಮರುಳ
ಬಿಟ್ಟೆ ಬಿಟ್ಟೆ ಕೈ ಬಿಟ್ಟೆ
ಮರುಳ ನೋಡಿದ ವರಾಹ ಕಣ್ತುಂಬಿ….
ಒದ್ದೆ ಕಣ್ಣು ಮಂಜು ಮಂಜು

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *