ಅಹಮ್ಮಿನ ಕೋಟೆಯಲಿ

ಅಹಮ್ಮಿನ ಕೋಟೆಯಲಿ

ಇರಲು ಅಳತೆ ಮೀರಿದ ಬೇಗುದಿ
ಆಗಲಿ ತಾನು,ತನ್ನಿಂದಲೆಂಬ ಭಾವದ ಶಮನ!
ಬೇಕಿರಲು ಸಂಸಾರನೌಕೆಯಲಿ ನೆಮ್ಮದಿ..
ಕ್ಷಣಕೊಮ್ಮೆ ಆಗುತಿರಲಿ ಅಹಂಕಾರದ ದಮನ!!

ತನ್ನ ಬಿಟ್ಟು ಯಾರಿಲ್ಲ ಲೋಕದಿ
ಅನ್ನುವ ಭಾವ ಮೊದಲು ಅಳಿಯಲಿ!
ಕಾಯಲು ದೇವರಿದ್ದಾನೆನ್ನುವ ಭಕ್ತಿಯು..
ಪ್ರೇಮದಿ ಪ್ರತೀ ಮನದಲೂ ಉಳಿಯಲಿ!!

ಆ ಸೂರ್ಯಚಂದ್ರರಿಗಿರದ ಅಹಂಕಾರವು
ಮನುಜನಲಿ ಉದಿಸಿದದೇತಕೊ ಕಾಣೆ!
ಭವಬಂಧನವ ತೊರೆದು ಹೋಗುವ ತನಕ..
ಅಹಮ್ಮಿರುವ ಮನಕೆ ಹಿಡಿಯಿರಿ ಸಾಣೆ!!

ತಲೆಗೆ ಏರಿರಲು ಅಹಂಕಾರದ ಭಾವ
ತುಂಬೀತು ಅದರಲಿಯೇ ಬಾಳ ಕೊಪ್ಪರಿಗೆ,ಜೋಕೆ !
ನಿತ್ಯ ಕೃತಕ ಹೊಗಳುಭಟರ ಕೈಗೆ ತನ್ನನಿರಸಿ…
ಏರಿಸುವಿರಿ ಮನವನು ಉಪ್ಪರಿಗೆಗೆ,ಯಾಕೆ!!

ಸುಮನಾ ರಮಾನಂದ

Related post