ಆದಿತ್ಯ – ಎಲ್ – 1

ಆದಿತ್ಯ – ಎಲ್ – 1

ಹೇ! ಸೂರ್ಯದೇವಾ ನಿನಗೆ ವಂದನೆ!!
ನಿನ್ನ ನೋಡಲೆಂದೇ ಬಳಿ ಬಂದೆನೇ|
ನಿನ್ನ ತಾಪ ಎನ್ನ ಮೇಲೇ ಬರುವುದ ಕಂಡೆನೆ
ನಿನ್ನ ಕೋಪ ಎನ್ನ ಮೇಲೆ ಇರುವುದ ಅರಿತೆನೆ||

ನಿನ್ನ ಬಗ್ಗೆ ತಿಳಿಯಲೆಂದೇ ಬಂದೆ
ನನ್ನ ಹೆಸರೂ ಆದಿತ್ಯ ಎಲ್೧ ಎಂದೇ|
ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಬಂದೇ
ಧೃವೀಯ ಉಡ್ಡಣ ವಾಹಕದಿಂದ ಬಂದೇ||

ನಾನು ಹುಟ್ಟಿದ್ದು ಕರ್ನಾಟಕ ಬೆಂಗಳೂರಲ್ಲಿ
ಉ.ರಾ.ಉಪಗ್ರಹ ಕೇಂದ್ರದಲ್ಲಿ|
ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ
ಧೃವೀಯ ಉಡ್ಡಣ ವಾಹಕದಲ್ಲಿ||

ಸೆಪ್ಟೆಂಬರ್ ತಿಂಗಳ ಎರಡನೇ ದಿವಸ
ಬೆಳಿಗ್ಗೆ ಹನ್ನೊಂದು ಗಂಟೆ ಐವತ್ತು ನಿಮಿಷ|
ಎರಡು ಸಾವಿರದ ಇಪ್ಪತ್ಮೂರನೇ ಇಸವಿಯಲ್ಲಿ
ಹದಿನೈದು ಲಕ್ಷ ಕಿ.ಮೀ. ದೂರದಲ್ಲಿ||

ನಿನ್ನ ಲಗ್ರೇಂಜ್ ದೂರದ ಬಿಂದುವಿಗೆ
ಬಂದು ನೆಲೆಸುವೆ ನಾಲ್ಕು ತಿಂಗಳ ಅವಧಿಗೆ|
ಸೌರ ಕಿರಣ, ಶಕ್ತಿ ಕಣ, ನಿನ್ನಯ ಕಾಂತಿಗೆ
ನಮ್ಮ ನಾಗಶಯನನ ಪ್ರೀತಿಗೆ||

ನಾಗರಾಜು.ಹ.
ಬೆಂಗಳೂರು

Related post