ಆದಿ ಕವಿ ವಾಲ್ಮೀಕಿ ಮುನಿ

ಆದಿ ಕವಿ ವಾಲ್ಮೀಕಿ ಮುನಿ

ವಾಲ್ಮೀಕಿ ಎಂಬ ಕೋಗಿಲೇ,
ಕವಿತೆಯಾ ಮರದ ಮೇಲೆ|
ಮಧುರ ಮಧುರಾಕ್ಷರದಿಂದಲೇ
ರಾಮ ರಾಮ ಎಂದು ಹಾಡಿತಾಗಲೇ!!

ಆದಿ ಕವಿ ವಾಲ್ಮೀಕಿಯೇ
ನಿಮಗೆ ವಂದನೇ|
ಮಹಾಗ್ರಂಥ ರಾಮಾಯಣವೇ
ನಿಮ್ಮ ಸಾಧನೇ|

ಪೂರ್ವದಲ್ಲಿ ನೀವು
ಪ್ರಾಚೇತಸ ಮುನಿಯು|
ಶಾಪದಿಂದ ಬೇಡರಾಗೀ
ಬೆಳೆದು ಬಂದಿರೀ||

ದಾರಿಹೋಕರ ವಸ್ತುಗಳಾ
ಕಸಿದು ಕೊಂಡಿರೀ!
ಅದರಿಂದ ಬರೋ ಪಾಪಗಳ
ಕಟ್ಟಿಕೊಂಡಿರೀ||

ಅಗಸ್ತ್ಯರೆಂಬ ಮುನಿಗಳಾ ಕೃಪೆಯು ನಿಮಗೆ ಆಯಿತು|
ಅಂದಿನಿಂದ ನಿಮ್ಮ ಪಾಪಗಳು ಭಸ್ಮವಾಯಿತು||

ಅವರೇಳಿದ ಮರದ ಮಂತ್ರ
ತಾರಕ ಮಂತ್ರವಾಯಿತು|
ಜಪಿಸುತಲೀ ಆ ಮಂತ್ರ
ಹುತ್ತ ಬೆಳೆಯಿತು||

ಆ ಹುತ್ತದ ಪರಿಣಾಮದಿ
“ವಾಲ್ಮೀಕಿ”ಎಂಬಾ ಹೆಸರಾಯಿತು!
ಕ್ರೌಂಚ ಪಕ್ಷಿ ಸಾವಿನಿಂದಲೀ
ಸ್ತೋತ್ರ ಉದಿಸಿತು||

ಶಿವನಿಂದ ರಾಮಾಯಣ
ಲಿಖಿತಕೆ ಆದೇಶವಾಯಿತು|
ಬ್ರಹ್ಮದೇವನಿಂದ ನಿಮಗೆ
ಲಘುವಾಗಿ ಅರ್ಥವಾಯಿತು||

ಕರಣಿಕನಾಗೀ ಗಣಪ ಬಂದನು
ವಾಲ್ಮೀಕಿ ಮುನಿ ಹೇಳಿದಂತೇ|
ಗಣಪ ಬರೆಯುತ ಬಂದನು, ರಾಮಾಯಣ ಪೂರ್ತಿ ಆದಂತೆ||

ಶರಣು ಬಂದೆ ವಾಲ್ಮೀಕಿ ಮುನಿಗಳಿಗೆ
ಶರಣು ಶರಣು ನಮ್ಮ ನಾಗಶಯನನಿಗೆ|
ಶರಣು ಮಹಾಗ್ರಂಥವಾದ ರಾಮಾಯಣಕೇ
ಶರಣು ಶಿವಪುತ್ರ ಗಣಪತಿಗೆ||

ನಾಗರಾಜು.ಹ.
ಬೆಂಗಳೂರು

Related post

Leave a Reply

Your email address will not be published. Required fields are marked *