ಆನ್ಲೈನ್ ದುನಿಯಾ

ಆನ್ಲೈನ್ ದುನಿಯಾ

ನಮ್ಮ ಭದುಕು OLX ನಲ್ಲಿಟ್ಟು
ಪೇಸ್ ಬುಕ್ನಲ್ಲಿ ಕಾಣದ ವರಿಗಾಗಿ ಹುಡುಕಾಡಿದೆವು
ಟ್ವಿಟರ್ನಲ್ಲಿ ಭಾಷಣ ಬಿಗಿದು
ಇನ್ಸ್ಟಾಗ್ರಾಮ್ ನಲ್ಲಿ ಬೆತ್ತಲಾದಿವಿ

ಯೂಟೂಬ್ ನ ರಸಪಾಕ
ಹೊಟ್ಟೆ ತುಂಬೀಸಿತೇ
ಗ್ರಹಿಸಲಾರದ ವಾಸನೆಗೆ
ಬಾಯೊಳಗೆ ನೀರೂರಿದಹಾಗೆ..

ನಮ್ಮ ಸಮಸ್ಯೆಗಳಿಗೆ ಜೀ. ಪೀ. ಟಿ
ನೆರವಾಗುವುದೆಂದು
ಶಾಲೆ ಕಾಲೇಜುಗಳ ಮುಚ್ಚಿಬಿಡೋಣವೇ..

ಕೈ ಬೆರಳು ಚಲಿಸುತ್ತಿರುತ್ತವೆ ನಿರಂತರ
ಬಾಸ್ ನಂಬುವುದಿಲ್ಲ ಎಂದಿಗೂ
ಲೊಕೇಶನ್ ವೀಡಿಯೋ
ಆಡಿಯೋ ರೆಕಾರ್ಡಿಂಗ್
ಸಾಕ್ಷಿ ಸಮೇತ ದಿನ, ಪ್ರತಿ ದಿನ, ಕಟಕಟೆಯೊಳಗೆ ಜೀವನ
ಈ ಬದುಕೆಷ್ಟು ಸಂಕೀರ್ಣ….

ಪವನ ಕುಮಾರ ಕೆ. ವಿ.
ಬಳ್ಳಾರಿ
ಮೊಬೈಲ್ : 9663346949

Related post