ಆಪ್ಯಾಯ ಮೌನ
ಮನವೇಕೋ ಮೌನದ
ಮೊರೆ ಹೋದಂತಿದೆ.
ಮಾತಿಗೆ ಮೌನ
ಬೇಲಿ ಹಾಕಿದಂತಿದೆ.
ಎಂದೂ ಕಂಡಿರದ
ಮಾತಿಲ್ಲದ, ಮೌನವ
ಕಂಡ ಮನ ಅರೆಕ್ಷಣ
ಗಲಿಬಿಲಿಗೊಂಡಂತಿದೆ.
ಮೌನದಲ್ಲೇ ಮನ
ಎಲ್ಲವ ಮನನ ಮಾಡಿ
ಸರಿತಪ್ಪುಗಳನೆಣಿಸಿದಂತೆ
ಭಾಸವಾಗುತ್ತಿದೆ.
ಇತ್ತೀಚೆಗೇಕೆ ಯಾವ
ಮಾತೂ ಬೇಡವೆನಿಸಿ,
ಏಕಾಂತಕ್ಕಾಗಿ ಮನ
ಕಾತರಿಸುತ್ತಲಿದೆ !
ಶ್ರೀವಲ್ಲಿ ಮಂಜುನಾಥ