ಆಮೆಗಳು

 ಆಮೆಗಳು

ಆಮೆಗಳು

ಆಮೆಗಳು ‘ಅನಪ್ಸಿಡಾ’ ಉಪವರ್ಗದ ‘ಕೆಲೋನಿಯಾ’ ಗಣಕ್ಕೆ ಸೇರಿವೆ.

ಇವುಗಳಿಗೆ ‘ಟೊರ್ಟಾಯಿಜ್ ‘ ‘ಟರ್ಟಲ್’ ಮತ್ತು ‘ಟೆರಾಪಿನ್ ‘ ಎಂದು ಕರೆಯುವುದುಂಟು ಇವೆಲ್ಲ ಒಂದೇ ಅರ್ಥ ನೀಡಿದರೂ ಆಮೆಗಳು ಆಶ್ರಯಿಸಿರುವ ಸ್ಥಳಗಳ ಮೇಲಿಂದ ಈ ಶಬ್ದಗಳನ್ನು ಬಳಸುವರು.

Tortoise

ಭೂ ವಾಸಿಗಳಾದರೆ ಟೊರ್ಟಾಯಿಜ್(tortoise) ಎಂದು,
ಸಿಹಿ ನೀರು, ಸಾಗರ ಸಮುದ್ರಗಳಲ್ಲಿದ್ದರೆ ಟರ್ಟಲ್(turtle) ಎಂದು
ಹಾಗೂ ಅಮೆರಿಕಾದ ಸಿಹಿ ನೀರು ಹಾಗೂ ಜವುಗಿನ ಆಮೆಗಳಿಗೆ ಟೆರಾಪಿನ್(terrapin) ಎಂದು ಕರೆವರು.
ಆಮೆಗಳಲ್ಲಿ 300ಕ್ಕೂ ಹೆಚ್ಚು ಪ್ರಬೇದಗಳಿದ್ದು ಸರೀಸೃಪಗಳ ಗುಂಪಿಗೆ ಸೇರುತ್ತವೆ, ಇವು ಸಸ್ಯಹಾರಿ, ಮಾಂಸಾಹಾರಿ ಮಿಶ್ರ ಹಾರಿಗಳಾಗಿವೆ.

ಬದುಕಿರುವ ಆಮೆಗಳಲ್ಲಿ ಸಾಗರ ವಾಸಿ ಆಮೆಗಳೇ ದೊಡ್ಡವು, ನೆಲ ವಾಸಿಗಳಲ್ಲಿ ಗ್ಯಾಲ ಪಾಗೋಸ್ ದ್ವೀಪದ ಆಮೆಗಳು ದೊಡ್ಡ ಗಾತ್ರ ಹೊಂದಿವೆ.

Turtle

ಆಮೆಗಳು ಎಲುಬಿನಿಂದ ಕೂಡಿದ ಜೋಡು ಪೆಟ್ಟಿಗೆಯಲ್ಲಿವೆ, ಈ ಪೆಟ್ಟಿಗೆ ರಂದ್ರದೊಳಗೆ ತಲೆ ಕಾಲುಗಳನ್ನು ಒಳ-ಹೊರ ಚಾಚಲು ಬರುವಂತಿದೆ, ಆಮೆಯ ದವಡೆಯಲ್ಲಿ ಹಲ್ಲುಗಳು ಇಲ್ಲ, ಆದರೆ ಕೊಂಬಿನಂತಹ ಕಡಿಯಲು ಬರುವ ಹರಿತವಾದ ಅಂಚುಗಳು ಇವೆ.

ಭೂ ಆಮೆಗಳ ಕೈಕಾಲುಗಳು ಗಿಡ್ಡ ಹಾಗೂ ದಪ್ಪವಾಗಿವೆ, ಸಿಹಿನೀರಿನ ಆಮೆಗಳಿಗೆ ಜಾಲ ಪಾದಗಳಿವೆ, ಕಡಲಾಮೆಗಳಿಗೆ ಕಾಲುಗಳು ಈಜು ರೆಕ್ಕೆಯಂತಿವೆ.

ಆಮೆಗಳು ಮೊಟ್ಟೆಗಳನ್ನು ಇಡುತ್ತವೆ, ಕೆಲ ಭೂ ಆಮೆಗಳು 5-10 ಮೊಟ್ಟೆ ಇಟ್ಟರೆ, ಕಡಲಾಮೆಗಳು 100ಕ್ಕೂ ಹೆಚ್ಚು ಮೊಟ್ಟೆ ಇಡುತ್ತವೆ, ಕೆಲ ಆಮೆಗಳ ಮೊಟ್ಟೆ ಒಡೆದು ಮರಿ ಹೊರಬರಲು 8-10 ತಿಂಗಳು ಬೇಕು. ಮರಿಯಾದ ನಂತರ ಸಾವಿರಾರು KM ದೂರ ಹೋಗಿ ಪ್ರಾಯಕ್ಕೆ ಬಂದ (ಸುಮಾರು 15 ವರ್ಷ)ಮೇಲೆ ಮೂಲ ಸ್ಥಳಕ್ಕೆ ಮೊಟ್ಟೆ ಇಡಲು ಬರುವುದು ನಿಜಕ್ಕೂ ಅಚ್ಚರಿ!!!!!!
ಕಡಲಾಮೆಗಳು ಪ್ರತಿ ವರ್ಷ ಒಂದೇ ಜಾಗಕ್ಕೆ ಬಂದು ಮೊಟ್ಟೆ ಇಡುತ್ತವೆ, ನಮ್ಮ ದೇಶದ ಒಡಿಶಾ ರಾಜ್ಯದ ಕರಾವಳಿ ತೀರ ಕಡಲಾಮೆಗಳ ಮೊಟ್ಟೆ ಇಡುವ ಜಾಗಕ್ಕೆ ಪ್ರಸಿದ್ಧಿ ,ಇತ್ತೀಚಿನ ಹವಾಮಾನ ಬದಲಾವಣೆ ಹುಟ್ಟುವ ಮರಿಗಳ ಲಿಂಗಾನುಪಾತ ವ್ಯತ್ಯಾಸ ಮಾಡುತ್ತಿದೆ.

ಕಡಲಾಮೆಗಳಲ್ಲಿ green turtle, Olive Ridley, Hawksbill, leather back turtle ಇನ್ನೂ ಅನೇಕ ಪ್ರಭೇದಗಳಿವೆ.ಇದರಲ್ಲಿ Leather back turtle ದೊಡ್ಡದು (ಸುಮಾರು 400 kg)

Leather back turtle

ಭೂ ವಾಸಿ ಆಮೆಗಳಲ್ಲಿ ಗ್ಯಾಲ ಪಾಗೋಸ್ ದ್ವೀಪದ ಆಮೆಗಳು ದೊಡ್ಡ ಗಾತ್ರ ಹೊಂದಿವೆ, ಇತ್ತೀಚಿಗೆ ಜಾರ್ಜ್ ಹೆಸರಿನ ಆಮೆ ಈ ದ್ವೀಪದಲ್ಲಿ ವಿನಾಶ(extinct) ವಾಯಿತು.

ಆಮೆಗಳ ಜೈವಿಕ ಕ್ರಿಯೆ (metabolism) ತುಂಬಾ ನಿಧಾ ವಾಗಿದ್ದು ಸುಮಾರು 150 ಕ್ಕಿಂತ ಹೆಚ್ಚಿನ ವರ್ಷ ಬದುಕಬಲ್ಲವು ಹಾಗೂ ವರ್ಷಗಳ ಕಾಲ ಶಿಶಿರನಿದ್ರೆ (Hibernation) ಮಾಡಬಲ್ಲವು. ಸಾಗರದ ಆಮೆಗಳಾದರೂ ಉಸಿರಾಟಕ್ಕೆ ನೀರಿನ ಮೇಲೆ ಬರಲೇಬೇಕು.

ಇತಿಹಾಸ ಕಾಲದಿಂದಲೂ ಆಮೆಗಳ ಹತ್ಯೆ ನಡೆಯುತ್ತಿದ್ದು, ವರ್ಷ ಗಟ್ಟಲೆ ಮಾಡುವ ಹಡಗಿನ ಪ್ರಯಾಣದಲ್ಲಿ ತಾಜಾಮಾಂಸಕ್ಕಾಗಿ ಸಾವಿರಾರು ಜೀವಂತ ಆಮೆಗಳನ್ನು ಒಯ್ಯುತ್ತಿದ್ದರಂತೆ. ಜನಸಂಖ್ಯೆ ಬೆಳೆದಂತೆ ಇವುಗಳ ಸಂತತಿ ವಿನಾಶದತ್ತ ತಲುಪಿದೆ, ಸಮುದ್ರ ಸಾಗರಗಳಲ್ಲಿ ಮೀನುಗಾರಿಕೆ ಬಲೆಗಳಲ್ಲಿ ಸಿಲುಕಿ ಸಾಯುತ್ತಿವೆ. ಸಮುದ್ರದ ನೀರಿಗೆ ತೈಲ ಸೋರುವಿಕೆ, ಹಾಗೂ ಪ್ಲಾಸ್ಟಿಕ್ ಇವುಗಳಿಗೆ ತುಂಬಾ ಅಪಾಯಕಾರಿಯಾಗಿದ್ದು. ಹವಾಮಾನ ವೈಪರಿತ್ಯ ಇತ್ತೀಚಿನ ಕಳ್ಳಸಾಗಣೆ ಆಮೆಗಳ ವಿನಾಶಕ್ಕೆ ಕಾರಣವಾಗಿದೆ. ಎಲ್ಲಾ ಆಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ ಬರುತ್ತವೆ, ಇವುಗಳನ್ನು ಹಿಡಿಯುವುದು, ಕಳ್ಳಸಾಗಣೆ ಮಾಡುವುದು ಶಿಕ್ಷಾರ್ಹ.

ನಾಗರಾಜ್ ಬೆಳ್ಳೂರು

Related post

Leave a Reply

Your email address will not be published. Required fields are marked *