ಆಶ್ರಯದಾತ
ಮನಸು ಮುದುಡಿದೆ. ಆಸೆಗಳು ನಶಿಸಿವೆ
ಜೀವ ಸಂಕುಲದ ಕ್ರೌರ್ಯಕ್ಕೆ ನಲುಗಿಹೋದೆ
ಅದೆಷ್ಟು ಬಾರಿ ತಿಳಿ ಹೇಳಿದರೂ ಅರಿಯಾದಾಗಿದೆ
ಗಢಚಿಕ್ಕುವ ಶಬ್ದ ಗುಡುಗು ಸಿಡಿಲುಗಳು
ಆಗಾಗ ಬೀಳುವ ಕೋಲ್ಮಿಂಚುಗಳು
ಮಾಡುತಿವೆ ನಿರಂತರ ದಾಳಿಗಳು
ಒಂದೊಮ್ಮೆ ಆರೋಗ್ಯಪೂರ್ಣನಾಗುವೆ
ನಳನಳಿಸಿ ಎದೆಯುಬ್ಬಿಸುವಾಗಲೇ
ರೋಗ ತಾಗಿ ಅಸ್ಥಿಪಂಜರದಂತೆ ಬಡಕಲಾಗುವೆ
ಕಷ್ಟ ಕೋಟಲೆಗಳೆಲ್ಲವನ್ನೂ ಸಹಿಸುಷ್ಟರಲ್ಲಿ
ಬುಡಕ್ಕೆ ಸಂಚಕಾರ ತಂದಿಡುವ ಜನರು
ಈ ಗೋಳಿನಾ ಕಥೆಯ ಕೇಳುವರಾರು
ಜೀವವಿದ್ದರೂ ನಾನಾದೆ ಬರೀ ಮರ
ಜೀವಿಗಳಿಗೆ ಕೊಟ್ಟೆ ಪ್ರಾಣವಾಯುವಿನ ವರ
ಇಷ್ಟಾದರೂ ಯಾರಿಗೂ ಇಲ್ಲ ನನ್ನಲ್ಲಿ ಕನಿಕರ
ಆಶ್ರಯ ಕೊಟ್ಟ ನನ್ನನ್ನೇ ಮರೆತರಾ…
ಮರ ಮರ ಹೆಮ್ಮರ ನೀನೆಷ್ಟು ಸುಂದರ
ಹಸಿರು ರಾಶಿಯ ಮರ ನೀನಾಗು ಅಮರ.
ಸಿ.ಎನ್. ಮಹೇಶ್