ಆಸೆ – ವಾಂಛೆ

ತೃಪ್ತಿಅರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು,
ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ,
ಪ್ರಾಪ್ತಿಗೊಳುಪುದು ಜೀವನ್ಕುನ್ಮಾದ,
ತಾಪಗಳ ಸುಪ್ತವಹುದೆಂತಿಚ್ಛೇ ????

ವಿವೇಕದ ಜೀವನ..ಸಾಕ್ಷಾತ್ಕಾರ,
ಕಾಗೆ ನವಿಲಾಗದು,ನವಿಲು ಹಂಸವಾಗದು,
ಜೀವನದ ಯಾನ ನಾವುಗಳಂದಂತಿಲ್ಲ,
ನಮ್ಮ ಜೀವನದ ಭಿಕ್ಷೆ… ಸುಭಿಕ್ಷೆಯಾಗಲಿ,
ಕ್ಷಣಿಕ ಸುಖಕ್ಕೆ ಮರುಳಾಗದೆ,
ಮೇರು ದುಂದುಭಿಯಲ್ಲಿ ಇರಲಿ ಚಿತ್ತ.

ಪರಾಧಿಯೊಳಗೆ ಇರಲಿ ಆಸೆ,
ಸಂತೃಪ್ತ ಮನಸ್ಸು ಧನಾತ್ಮಕ ಇರಲಿ,
ನಾವೇರಿದ ವಾಹನ ನಮ್ಮ ಹಿಡಿತದಲ್ಲಿರಲಿ,ಪುಟಿದೇಳುವ ಆಸೆಗಳಿಗೆ ಸಮಯೋಚಿತ ಜಾಣ್ಮೆಯ ಮಾರ್ಗದರ್ಶನವಿರಲಿ.
ವಿವೇಕದ ಮುಷ್ಠಿ ಹಿಡಿದರಷ್ಠೆ ಶಾಂತಿ.

ಮಾಧವ(ಅಪ್ಪಣ್ಣ)ಯದುನಾಥ ಜೋಶಿ
ಬೆಂಗಳೂರು ಹಾಗು ಗಲಗಲಿ.

Related post

4 Comments

 • Good depth poems sir Mada. Joshi ಅಣ್ಣಿಗೇರಿ nice writtend

 • ಮೇರು ದುಂದುಭಿಯಲಿ ಇರಲಿ ಚಿತ್ತ…..
  ತುಂಬಾ ಸೊಗಸಾಗಿದೆ ಸರ್

 • ಬಹಳ ಚೆನ್ನಾಗಿದೆ,
  ಸಮಯೋಚಿತವಾಗಿದೆ,
  ಧರ್ಮ ಅರ್ಥ ಕಾಮ ಮೋಕ್ಷಗಳ ತಕ್ಕಡಿ ಹಿಡಿದು ಭಗವಂತ ನಿಮಗೆ ಸರ್ವಸ್ವ ಗಳನ್ನು ದಯಪಾಲಿಸಲಿ🙏

 • ಬಹಳ ಚೆನ್ನಾಗಿದೆ ಅರ್ಥಗರ್ಭಿತವಾಗಿದೆ
  ಭಗವಂತ ಧರ್ಮ ಅರ್ಥ ಕಾಮ ಮೋಕ್ಷ ಗಳ
  ತಕ್ಕಡಿ ಹಿಡಿದು ನಿಮಗೆ ಸಕಲ ಸೌಭಾಗ್ಯವನ್ನು ದಯಪಾಲಿಸಲಿ,
  ಶುಭಮಸ್ತು,🙏

Leave a Reply

Your email address will not be published. Required fields are marked *