ಆ ದಿನಗಳು!!
ನಾವು ಕಳೆದ ಬಾಲ್ಯದ ದಿನಗಳು
ಅದೆಷ್ಟು ಸುಂದರ!!
ಹೋಲಿಸಲಾಗದು ಇಂದಿನ ಜೀವನಕೆ
ಇಹುದು ಅಜಗಜಾಂತರ
ಕಳೆಯುತಿದೆ ಇಂದಿನ ದಿನಗಳು
ಬರಿ ದುಡಿತದಲ್ಲಿ
ಉಳಿದ ನಿದ್ದೆಯನು ಮಾಡುವರಿಲ್ಲಿ
ಎಲ್ಲರು ವಾರಾಂತ್ಯದಲಿ
ಊಟವೋ ನಿದ್ದೆಯೊ ಯಾವುದು ತಿಳಿಯದು
ಮುಳುಗಿಹರೆಲ್ಲರು ಕೆಲಸದಲಿ
ಮನೆಯವರನು ಸಹ ಮರೆತಿಹರಿಲ್ಲಿ
ತುಂಬಿದೆ ಕೆಲಸವು ತಲೆಯಲ್ಲಿ!!
ಶೋಕಿಯ ಜೀವನಕೆ ಮರುಳಾಗಿಹರೆಲ್ಲಾ
ಆತ್ಮೀಯತೆಗೆ ಬೆಲೆಯಿಲ್ಲಾ
ಮೊಬ್ಯೆಲ್, ವಾಟ್ಸ್‍ಪ್ ಫೇಸ್ ಬುಕ್ ಬಂದು
ಕೊಂದಿಹುದು ಅತ್ಮೀಯತೆಯನ್ನೆಲ್ಲಾ!!
ಬಾಲ್ಯದ ಗೆಳೆಯರೊಡನೆ ಕಳೆದ
ಆ ದಿನಗಳಲ್ಲಿತ್ತು ಮೋಜಿನ ಗಮ್ಮತ್ತು
ಅಮ್ಮನು ಹಾಕಿದ ಕ್ಯೆತ್ತುತ್ತು
ನೆನೆಪಿಸುತಿಹುದು ಬಾಲ್ಯದ ಹೊತ್ತು!!
ಹಿತ್ತಲ ಬಾಗಿಲ ಬಳಿಯಲಿ ಬಂದು
ಕರೆಯುತ್ತಿದ್ದರು ಗೆಳೆಯರು ಅಂದು
ಕೆಲಸವ ಮುಗಿಸಿ ಹೋಗೆಂದು
SMS ಮಾಡ್ತನೆ ಮ್ಯಾನೆಜರ್ ಇಂದು
ಬಾಲ್ಯಕೆ ಹೋಗುವ ಮನಸಾಗಿದೆ ಇಂದು
ಎಲ್ಲಾ ಜಂಜಡವ ಕಿತ್ತೊಗೆದು
ನೆಮ್ಮದಿಯ ಜೀವನವನು ಬಯಸುತಿಹುದು
ಮನಸು, ಕೃತಕ ವೇಶವನು ಬದಿಗೆಸೆದು!!
ಪ್ರಕಾಶ್ ಕೆ.ನಾಡಿಗ್,
ಶಿವಮೊಗ್ಗ.