ಎದೆಯಾಳ

ಎದೆಯಾಳ

ಒದ್ದೆಯಾದ ಕಣ್ಣುಗಳಿಗಷ್ಟೇ ಗೊತ್ತು,
ಒಡಲಿನ ನೋವು,
ಹೃದಯದ ಗಾಯ,
ಮನಸಿನ ಸಂಕಟ,

ಹತ್ತಿರವೇ ಇದ್ದ ತುಟಿಗಳು ಮಾತ್ರ
ಅರಳಿ ನಿಲ್ಲುವ ಹಠ ಬಿಡಲಿಲ್ಲ
ಕಾರಣ ಅವಕೆ ಗೊತ್ತಿದೆ;

ಎದೆಯಲ್ಲಿನ ಸಾವಿರ ನೋವುಗಳಿಗೆ
ಶಬ್ದದ ರೂಪ ಎಂದೂ ಕೊಡಬಾರದು
ಎಂಬ ಸತ್ಯ..

ಅದಕ್ಕೆ ಮತ್ತೆ ಮತ್ತೆ
ಬಿರಿಯುತ್ತವೆ ಆ ನಗೆಯ
ಸೊಬಗು ಕಣ್ಣಿನ ಹನಿಯ
ಹೊಳಪು ಹೆಚ್ಚಿಸುತ್ತವೆ.

ಸುಕೃತಿ ಕಂದ

Related post

1 Comment

  • Very nice 👌👌

Leave a Reply

Your email address will not be published. Required fields are marked *