ಎಲ್ಲಿಗೀ ಪಯಣ
ಈ ಬದುಕು ಒಂದು ಜಟಕಾಬಂಡಿಯಂತೇ!
ಆ ಪರಮಾತ್ಮ ಇದರ ಮಾಲೀಕನಂತೇ!!
ಈ ಜೀವನೇ ಒಬ್ಬ ಪಯಣಿಗನಂತೇ
ಪಯಣವು ಆ ಮಾಲೀಕನ ಇಚ್ಛೆಯಂತೆ||
ಅದರಂತೆಯೇ ಇತರರು ಸಹ ಪಯಣಿಗರು
ಪಯಣದಲಿ ಎಲ್ಲರೂ ಒಂದೇ ಕಡೆ ಇರುವರು|
ಕೆಲವರು ಬಂಧು ಬಳಗದವರು ಸ್ನೇಹಿತರು;
ಕೆಲವರು ಏನೂ ತಿಳಿಯದ ಅಪರಿಚಿತರು||
ಹೆಂಗಸರು ಮಕ್ಕಳು ಮುದುಕರು ಇತ್ಯಾದಿಗಳು
ಪ್ರಯಾಣಿಕರಲ್ಲಿ ಮನುಜರಲ್ಲದೇ;
ಪ್ರಾಣಿ ಪಕ್ಷಿಗಳು, ಕೀಟಾದಿ ಜಂತುಗಳು
ಬರುವುವು ಯಾವುದೇ ಯೋಚನೆ ಇಲ್ಲದೇ||
ಪಯಣಿಗರು ತಾವು ಇಚ್ಛಿಸಿದಲ್ಲಿಗೆ
ಹೋಗುವಂತಿಲ್ಲ ದಾರಿ ತಿಳಿದಿಲ್ಲ ಅಲ್ಲಿಗೆ !|
ಚಾಲಕನ ಇಷ್ಟದಂತೆ,ಯಾರನ್ನು ಎಲ್ಲಿಗೆ
ಇಳಿಸಬೇಕೋ ಇಳಿಯಬೇಕಲ್ಲಿಗೇ||
ನಾಗಶಯನನೇ ಚಾಲಕನಾಗಿಹನು
ವಾಯು ದೇವರೇ ವಾಹನವಾಗಿಹನು|
ಜೀವಿಯೇ ಪಯಣಿಗನಾಗಿಹನು
ಈ ಜೀವನ ಚಕ್ರವ ಸದಾ ಉರುಳಿಸುತಿಹನು||
ಯಾರು ಹೇಳಬಲ್ಲರು!
ಯಾರ ಪಯಣ ಎಲ್ಲಿಗೋ

ನಾಗರಾಜು. ಹ