ಏಕತೆಯ ಸರದಾರ
ಬಾಲ್ಯದಿ ದಿಟ್ಟತನ ಮೆರೆದ ಉಕ್ಕಿನ ಮನುಷ್ಯ
ವಕೀಲಿ ಓದಿ,ವಿದೇಶದಿ ಅಣ್ಣನ ಓದಿಸಿದವರು
ಪ್ಲೇಗ್ ಬಂದಾಗ ಸ್ನೇಹಿತರ ಕಾಪಾಡಿದವರು
ಕಾಯಕದಿ ಸತಿ ವಿರಹವನು ನುಂಗಿದವರು
ಇಂಗ್ಲೆಂಡನಲಿ ಓದಿ ವಕೀಲಿ ಕೈಗೊಂಡವರು
ಗಾಂಧೀಜಿ ಹೆಗಲಿಗೆ ಹೆಗಲು ಕೊಟ್ಟವರು
ಖೇಡಾ ಬಾರ್ಡೋಲಿ ಹೋರಾಟ ‘ಸರದಾರ’
ಪ್ರಗತಿಪರ ವ್ಯಾಪಕ ಚಳವಳಿ ಹೂಡಿದವರು
ಜಿನ್ನಾ ಹಠಕ್ಕಾಗಿ ಗಾಂಧೀಜಿಯ ತಡೆದವರು
ಎಪ್ಪತ್ತೆರಡರ ಯುವಕ ನೂರಾರು ಅರಸರನು
ಸಾಮೋಪಾಯದಿ ಗೆದ್ದು ತೋರಿಸಿದವರು
ಬ್ರಿಟಿಷ್ ಇಂಡಿಯಾ ಇಂಡಿಯಾ ಮಾಡಿದವರು
ಜನಮತವ ಕೇಳಿ ಜುನಾಗಢವನು ಪಡೆದವರು
ಬಗ್ಗದ ನಿಜಾಮನ ಬಗ್ಗು ಬಡಿದ ‘ಬಿಸ್ಮಾರ್ಕ್’
ಭಾರತವ ಒಗ್ಗೂಡಿಸಿದ ಅಪರೂಪದ ರತ್ನ
ಏಕತಾ ಸರದಾರರಿಗೆ ‘ಏಕತಾ ಮೂರ್ತಿ’ ನಮನ
ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ – 9175547259
ಚಿತ್ರಕೃಪೆ- ಸೃಷ್ಟಿ ಗುರುಸಿದ್ಧಯ್ಯಾ ಸ್ವಾಮಿ
೧೦ ನೇ ಇಯತ್ತೆ