ಏಕೆ ಹೀಗೆ

ಏಕೆ ಹೀಗೆ

ನನ್ನೊಡನಿರುವವರೆಲ್ಲಾ
ನನ್ನವರೇ ಎಂದು
ಸಂತಸದಿ ಬೀಗುತ್ತೇನೆ !

ಅವರಾಡುವ ಮಾತುಗಳ
ನಂಬಿ, ಪದೇ ಪದೇ
ಮೋಸ ಹೋಗುತ್ತೇನೆ !

ಚುಚ್ಚಿ ಅಂದಾಡಿದರೂ
ನಗುತಲವರೊಡನೆ
ಮಾತನಾಡುತ್ತೇನೆ !

ದಕ್ಕದೊಲವಿನ ಸವಿ
ನೆನಪಿನಲಿ, ಬಿಕ್ಕಿ
ಬಿಕ್ಕಿ ಅಳುತ್ತೇನೆ !

ಮನ ರೋಸಿ, ಬಾಳು
ಸಾಕೆನಿಸಿದರೂ ನಾ
ಬಾಳುತ್ತಿದ್ದೇನೆ !!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *