ಏಜೆಂಟ್ ಆರೆಂಜ್ (Operation Ranch Hand)

ಇಡೀ ಇಪ್ಪತ್ತನೇ ಶತಮಾನವನ್ನು ಭೀಕರ ಯುದ್ಧಗಳ ಕಪ್ಪು ಚುಕ್ಕೆಗಳಿಂದ ಅದರ ಕರಾಳತೆಯನ್ನು ವಿವರಿಸಬಹುದು.

ಮೊದಲೆರಡು ಮಹಾಯುದ್ಧಗಳು ಹಾಗೂ ಇಂಡೋ-ಚೀನಾ ಯುದ್ಧ, ಸಾಮ್ರಾಜ್ಯಶಾಯಿ ದೋರಣೆಯಿಂದಾದರೆ, ಇನ್ನು ಮಿಕ್ಕ ಯುದ್ಧಗಳಲ್ಲಿ ಮುಖ್ಯ ಪಾಲು ಕಮ್ಯುನಿಸ್ಟ್ ಪಂಥೀಯರಿಂದ ಅಥವಾ ಧರ್ಮಾಂಧರಿಂದ ಆದದ್ದು.

ಇಸ್ರೇಲಿನ ಮೇಲೆ ಮುಗಿಬಿದ್ದ ಅರಬರ ಹಾಗೂ ನಮ್ಮ ಭಾರತವನ್ನು ಕೆಣಕಿದ ಪಾಕಿಸ್ತಾನದ ಉದ್ದೇಶವು ಧರ್ಮಾಂಧತೆಯಿಂದ ಕೂಡಿದ್ದಾದರೆ ಇನ್ನು ವಿಯೆಟ್ನಾಂ ನಲ್ಲಿ ಶುರುವಾದ ಯುದ್ಧವು ಕಮ್ಯುನಿಸ್ಟ್ ರಾಷ್ಟ್ರಗಳ ಅಕ್ರಮಣಾ ಮನೋಭಾವದಿಂದ ಆಗಿದ್ದು.

ಫ್ರೆಂಚ್ ಚಕ್ರವರ್ತಿ ‘ನೆಪೋಲಿಯನ್’ ಕಾಲದಿಂದಲೂ ಇದ್ದ ವಿಯೆಟ್ನಾಂ ಮೇಲಿನ ಫ್ರೆಂಚರ ನಿಯಂತ್ರಣವು ಎರಡನೇ ಮಹಾಯುದ್ಧದ ಕೊನೆಯವರೆಗೂ ಇತ್ತು. ಜಪಾನ್ ದೇಶದ ಮೇಲುಗೈನಿಂದ ಫ್ರೆಂಚ್ 1941 ರಲ್ಲಿ ಹಿಂದೆ ಸರಿಯಿತು. ಮುಂದೆ ಮಹಾಯುದ್ಧದ ಕೊನೆಯಲ್ಲಿ ಜಪಾನ್ ಸೋತು ಶರಣಾದಾಗ ವಿಯೆಟ್ನಾಂ ಎರಡು ಭಾಗವಾಯ್ತು.

MOT 1963: SOUTHEAST ASIA: VIETNAM: COLOR MAP w/ borders of North & South highlighted.

ಚೀನಾದ ಬೆಂಬಲದಿಂದ ಹೊ-ಚಿ-ಮಿನ್ ಎಂಬ ಕಮ್ಯುನಿಸ್ಟ್ ನಾಯಕ ಉತ್ತರ ವಿಯೆಟ್ನಾಂ ಅನ್ನು ಕಮ್ಯುನಿಸ್ಟ್ ಡೆಮಾಕ್ರೆಟಿಕ್ ರಿಪಬ್ಲಿಕ್ ಎಂದು ನಿಯಂತ್ರಣಕ್ಕೆ ತೆಗೆದುಕೊಂಡರೆ ದಕ್ಷಿಣ ವಿಯೆಟ್ನಾಂ ಡೆಮಾಕ್ರೆಟಿಕ್ ರಿಪಬ್ಲಿಕ್ ನಿಂದ ರಚನೆಯಾಯಿತು.

ಶುರುವಿನಿಂದಲೇ ಎರಡರ ಮದ್ಯೆ ಆಂತರಿಕ ಸಂಘರ್ಷ ಏರ್ಪಟ್ಟು ಉತ್ತರ ವಿಯೆಟ್ನಾಂ ತಮ್ಮ ವಿಯೆಟ್ ಕಾಂಗ್ ಗೆರಿಲ್ಲಾ ಪಡೆಗಳಿಂದ ದಕ್ಷಿಣ ವಿಯೆಟ್ನಾಂ ಮೇಲೆ ಆಕ್ರಮಣ ಮಾಡಿತು.

ಇತ್ತ ಅಮೇರಿಕಾ ದಕ್ಷಿಣ ವಿಯೆಟ್ನಾಂಗೆ ಶಸ್ತ್ರಾಸ್ತಗಳನ್ನು ಸರಬರಾಜು ಮಾಡುತ್ತಾ ತನ್ನ ಬೆಂಬಲವನ್ನು ಸೂಚಿಸಿ ನಂತರ ವಿಯೆಟ್ನಾಂ ಸಂಪೂರ್ಣ ಕಮ್ಯೂನಿಸ್ಟುಗಳ ಪಡೆಗೆ ಸೇರುವುದನ್ನು ನೋಡಲಾಗದೆ ನೇರವಾಗಿ ಯುದ್ಧರಂಗಕ್ಕೆ ದುಮುಕಿತು.

1962 ರಲ್ಲಿ ಅಮೇರಿಕಾ ತನ್ನ ಅರೆ ಸೇನಾಪಡೆಯನ್ನು ದಕ್ಷಿಣ ವಿಯೆಟ್ನಾಂ ಸಹಾಯಕ್ಕೆ ಕಳುಹಿಸಿತು. ಕ್ರಮೇಣ ಯುದ್ಧದಲ್ಲಿ ವಿಯೆಟ್ ಕಾಂಗ್ ಪಡೆಯ ಕೈ ಮೇಲಾದಾಗ ಅಮೇರಿಕಾ ಪಡೆಗಳು ‘ಆಪರೇಷನ್ ರಾಂಚ್ ಹ್ಯಾಂಡ್’ ಎಂಬ ತಂತ್ರವನ್ನು ಹೆಣೆದು ಎಲ್ಲೆಲ್ಲಿ ಉತ್ತರ ವಿಯೆಟ್ನಾಂ ಪಡೆಗಳು ನಿಯೋಜನೆಗೊಂಡಿದ್ದವೋ ಅಲ್ಲಿ ಸಸ್ಯನಾಶಕವನ್ನು ಬಳಸಿ ಸುತ್ತಲಿನ ಪರಿಸರವನ್ನೇ ಹಾನಿಗೊಳಿಸಲು ತೀರ್ಮಾನಿಸಿತು. ಏಕೆಂದರೆ ವಿಯೆಟ್ ಕಾಂಗ್ ಪಡೆಗಳು ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಪರಿಣಿತರಾಗಿ ಇಡೀ ಅಮೇರಿಕಾ ಸೇನಾ ಪಡೆಗೆ ತಲೆನೋವಾಗಿದ್ದರು. ಸುತ್ತಲೂ ಇದ್ದ ದಟ್ಟ ಅರಣ್ಯದಿಂದ ಅವರನ್ನು ಹುಡುಕಿ ಯುದ್ಧ ಮಾಡಲು ಅಸಾಧ್ಯವಾಗಿತ್ತು. ಅದರಿಂದ ಅಮೇರಿಕಾ ಪಡೆ ತಮ್ಮ ಕುಖ್ಯಾತ ‘ಆಪರೇಷನ್ ರಾಂಚ್ ಹ್ಯಾಂಡ್’ ಯೋಜಿಸಿ ತಮ್ಮ ವಾಯು ಸೇನೆಗೆ ದಟ್ಟಾರಣ್ಯವನ್ನು ಸಸ್ಯನಾಶಕದಿಂದ ತೆರೆಮಾಡಲು ಆದೇಶಿಸಿತು. ಆಗ ಶುರುವಾದದ್ದೇ ‘ಏಜೆಂಟ್ ಆರೆಂಜ್’ ನ ಪ್ರಯೋಗ.

ಏಜೆಂಟ್ ಆರೆಂಜ್

ಈ ಏಜೆಂಟ್ ಆರೆಂಜ್ 2,4,5-T ಮತ್ತು 2,4-D ಎಂಬ ಸಸ್ಯನಾಶಕಗಳ ಮಿಶ್ರಣವಾಗಿದ್ದು ಇದರಲ್ಲಿ ಮುಖ್ಯವಾಗಿ ವಿಷಕಾರಿ ಡಯಾಕ್ಸಿನ್ (toxic) ಸೇರಿತ್ತು. ಈ ಡಯಾಕ್ಸಿನ್ ಎಂಬುದು ಸುಡುವ ಪ್ರಕ್ರಿಯೆಯಿಂದ ಉಧ್ಭವಿಸುವಂತದ್ದು. ಇದು ಕಾಳ್ಗಿಚ್ಚು ಅಥವಾ ಜ್ವಾಲಾಮುಖಿಗಳಿಂದ ನೈಸರ್ಗಿಕವಾಗಿ ಉತ್ಪತ್ತಿಯಾದರೆ, ಕಾರ್ಖಾನೆಗಳ ತಾಜ್ಯ ಅಥವಾ ನಗರಗಳ ಕಸವನ್ನು ಸುಡುವ ಮಾನವ ಚಟುವಟಿಕೆಗಳಿಂದ ಉತ್ಪಾದನೆಯಾಗುವಂತಹದ್ದು. ಅಸಂಖ್ಯಾತ ಡ್ರಮ್ಮುಗಳಲ್ಲಿ ಇವುಗಳ ಶೇಖರಣೆ ಮಾಡಿದ್ದು ‘ಏಜೆಂಟ್ ಆರೆಂಜ್ ಆರೆಂಜ್’ ಅಲ್ಲದೆ, ಹಸಿರು, ಗುಲಾಬಿ ಹಾಗು ನೇರಳೆ ಬಣ್ಣಗಳಿಂದ ಕೂಡಿತ್ತು. ಇವೆಲ್ಲವೂ ಮೋನ್ಸ್ಯಾಂಟೋ, ಡೌ ಕೆಮಿಕಲ್ ಮುಂತಾದ ರಾಸಾಯನಿಕ ಸಂಸ್ಥೆಗಳಿಂದ ತಯಾರಿಸಿದಂತಹವಾಗಿದ್ದವು.

1962 ರಿಂದ 1971 ರ ವರೆಗೂ (ಸಮಾರು ಹತ್ತು ವರ್ಷಗಳ ಕಾಲ) ವಿಯೆಟ್ನಾಂ ಅಲ್ಲದೆ ಸುತ್ತಲ ಗಡಿ ಪ್ರದೇಶಗಳಾದ ಕಾಂಬೋಡಿಯಾ, ಲಾವೋಸ್, ಗಳ ಅರಣ್ಯ ಹಾಗೂ ಕೃಷಿ ಪ್ರದೇಶಗಳ ಮೇಲೆ ತನ್ನ ವಾಯುಪಡೆಯ ಸಹಾಯದಿಂದ  (ಹತ್ತೊಂಬತ್ತು ದಶಲಕ್ಷ ಗ್ಯಾಲೋನ್ಗಳಷ್ಟು) ಸಿಂಪಡಿಸುತ್ತ ಬಂದಿತ್ತು. ಇವುಗಳ ಸಿಂಪಡುವಿಕೆಯಿಂದ ದಟ್ಟ ಕಾನನದ ಮರಗಳು ತಮ್ಮ ಎಲೆಗಳನ್ನು ಉದುರಿಸಿಕೊಂಡವು.

ಇಷ್ಟಾದರೂ ಹೊ-ಚಿ-ಮಿನ್ ಪಡೆಗೆ ದಕ್ಷಿಣ ವಿಯೆಟ್ನಾಂ ನನ್ನು ಆಕ್ರಮಿಸುವುದನ್ನು ತಡೆಯಲು ಅಮೇರಿಕಾ ಪಡೆಗಳಿಗೆ ಸಾಧ್ಯವಾಗದೆ ಅಪಾರ ಪ್ರಮಾಣದಲ್ಲಿ ಸೈನ್ಯದಲ್ಲಿ ನಷ್ಟ ಉಂಟಾಯ್ತು‌ ಅಂತಿಮವಾಗಿ ತನ್ನ ಪಡೆಗಳನ್ನು 1975 ರಲ್ಲಿ ಹಿಂದಕ್ಕೆ ಕರೆಸಿಕೊಂಡಿತು. ವಿಯೆಟ್ ಕಾಂಗೋ ಪಡೆಗಳಿಗೆ ದೊರೆತ ಗೆಲುವಿನಿಂದ ವಿಯೆಟ್ನಾಂ ಒಂದಾಗಿ ಕಮ್ಯುನಿಸ್ಟ್ ರಾಷ್ಟ್ರವಾಯಿತು.

ಉತ್ತರ ವಿಯೆಟ್ನಾಂ ಯುದ್ಧವನ್ನು ಗೆದ್ದರು ಅಮೇರಿಕಾ ಪಡೆಗಳು ಸುರಿಸಿದ ‘ಏಜೆಂಟ್ ಆರೆಂಜ್’ ನಿಂದಾಗಿ ಅಪಾರ ಪ್ರಮಾಣದಲ್ಲಿ ಅರಣ್ಯ ಹಾಗೂ ಕೃಷಿ ಬೆಳೆಗಳ  ನಷ್ಟವಾಯಿತು. ಇದರ ಜೊತೆಯಲ್ಲಿ ಹತ್ತಿರ ಹತ್ತಿರ ನಾಲ್ಕು ದಶ ಲಕ್ಷದಷ್ಟು ಜನರಿಗೆ ವಿಧವಿಧವಾದ ಅರೋಗ್ಯ ಸಮಸ್ಯೆಯುಂಟಾಯಿತು.

‘ಏಜೆಂಟ್ ಆರೆಂಜ್’ ನಲ್ಲಿದ್ದ ವಿಷಕಾರಿ (ಟಾಕ್ಸಿಕ್) ಡಯಾಕ್ಸಿನ್ ನಿಂದಾಗಿ ಜನರು ತೀವ್ರ ತರಹದ ಚರ್ಮ ರೋಗದಿಂದ ಬಳಲಿದರು. ಜೊತೆಗೆ ಕ್ಯಾನ್ಸರ್, ಸಕ್ಕರೆ ಕಾಯಿಲೆಗಳು ಹರಡಿದವು., ಅಲ್ಲದೇ ರೋಗನಿರೋಧಕ ಶಕ್ತಿಯಲ್ಲಿ ಕುಸಿತ ಕಂಡು ಬಂದು ಹಲವು ನರವಸಂಬಂಧಿ ಕಾಯಿಲೆಗಳು, ಹೃದ್ರೋಗ ಸಮಸ್ಯೆಗಳಿಂದ ಕಂಗಾಲಾಗಿ ಹೋದರು.

ಈಗಲೂ ಅಲ್ಲಿನ ಕೆಲ ಪ್ರದೇಶದಲ್ಲಿ ಹುಟ್ಟುತ್ತಿರುವ ಮಕ್ಕಳಲ್ಲಿ ದೈಹಿಕ ನ್ಯೂನ್ಯತೆ, ದೃಷ್ಠಿ ಮಂದ, ಬುದ್ದಿಮಾಂದ್ಯತೆ ಕಾಡುತ್ತಿದೆ. ಈ ‘ಏಜೆಂಟ್ ಆರೆಂಜ್’ ನ ಕೊಡುಗೆ.

ಈ ಕೊಡುಗೆ ಕೇವಲ ವಿಯೆಟ್ನಾಂ ಹಾಗೂ ಸುತ್ತಲ ಜನತೆಗಷ್ಟೇ ಅಲ್ಲದೆ ಹಿಂದಿರುಗಿದ ಅಮೇರಿಕಾ ಪಡೆಗಳ ಸಾಕಷ್ಟು ಸಿಬ್ಬಂದಿಗಳಲ್ಲೂ ಹಾಗೂ ಅಲ್ಲಿ ಹುಟ್ಟಿದ ಮಕ್ಕಳಲ್ಲೂ ಕಾಣಿಸಿಕೊಂಡು ಇಡೀ ಜಗತ್ತಿಗೆ ‘ಏಜೆಂಟ್ ಆರೆಂಜ್’ ನ ತೀವ್ರತೆ ಅರಿವಾಯಿತು.

ಮುಂದೆ 1976 ರಲ್ಲಿ ಎರಡು ದಶಲಕ್ಷ ಯುದ್ಧಪೀಡಿತರ ಪರವಾಗಿ ಹಲವಾರು ನ್ಯಾಯ ಮೊಕದ್ದಮೆಗಳನ್ನು ಸಲ್ಲಿಸಲಾಯಿತು. ಎಷ್ಟೋ ಪ್ರಕರಣಗಳು ನ್ಯಾಯಾಲಯದ ಹೊರಗೆ ತೀರ್ಮಾನವಾಗಿ ಸಸ್ಯನಾಶಕಗಳನ್ನು ಸರಬರಾಜು ಮಾಡಿದ ಏಳು ಪ್ರಮುಖ ರಾಸಾಯನಿಕ ಸಂಸ್ಥೆಗಳು 180 ದಶ ಲಕ್ಷದಷ್ಟು ಮೊತ್ತವನ್ನು ರೋಗಪೀಡಿತರಿಗೆ ಹಾಗೂ ಅವರ ಮುಂದಿನ ಪೀಳಿಗೆಗೆ ಪಾವತಿಸಲು ಒಪ್ಪಿಕೊಂಡವು.

ಅಮೇರಿಕಾ ತನ್ನ ಸ್ವಹಿತಾಸಕ್ತಿಯಿಂದ ಯುದ್ಧರಂಗಕ್ಕೆ ನುಗ್ಗಿದರ ಫಲವೇನು? ಯುದ್ಧದ ಗೆಲುವಿನಿಂದ ಉತ್ತರ ವಿಯೆಟ್ನಾಂ ಸಾಧಿಸಿದ್ದು ಅನಾರೋಗ್ಯ ಹಾಗೂ ಪ್ರಕೃತಿನಾಶವಲ್ಲದೆ ಮತ್ತಿನೇನು?

ಹೀಗೆ ಸ್ವಾರ್ಥ ಪರತೆಗಾಗಿ ಮಾಡಿದ ಈ ದುಷ್ಕೃತ್ಯವು ಮನುಕುಲಕ್ಕೇ ಕುತ್ತು ತಂತು ಎಂಬುದನ್ನು ನಾವಿಲ್ಲಿ ಅರಿಯಬೇಕಿದೆ.

ಕು ಶಿ ಚಂದ್ರಶೇಖರ್

ಚಿತ್ರ ಕೃಪೆ: https://www.wbez.org/ ಹಾಗು https://poison.news/

Related post

1 Comment

  • Whole world is facing problem because of America, they are the supporters of evil and they plan to create problem to other countries then they will also suffer still they won’t learn. They supported terrorism they lost WTc , they spoiled Afghanistan and they only supported China for creating Corona. They also suffered still they won’t learn. Please share the article in corruption free INDIA thank u

Leave a Reply

Your email address will not be published. Required fields are marked *