ಏಳು ಸುತ್ತಿನ ಮಲ್ಲಿಗೆ
ತಾರಸಿಯ ತೋಟದಲಿ ಬೆಳೆದ ಬಳ್ಳಿಯದು
ಸದಾ ಹಸಿರನ್ನು ಹೊದ್ದು ಮೆರೆಯುತಿಹುದು
ಆಗಸದ ನೀಲಾಂಬರದಿ ಮೋಡ ಮುಸುಕಿದಂತೆ
ಆಗೀಗ ಈ ಬಳ್ಳಿಯಲಿ ಮಲ್ಲಿಗೆ ಅರಳುತಿಹುದು
ಇರುವಂತಿಗೆಯು ಏಕಾಂಗಿಯಾಗಿ ಬೆಳೆವುದು
ಮೂರು ಸುಮಗಳ ಗುಚ್ಛವಾಗಿ ಬರುವುದು
ದಿನವಿಡೀ ಅರಳಿಸುವ ಘಮಲಿನ ಮಲ್ಲಿಗೆ
ಮೊಂಡು ಎಲೆಗಳ ನಡುವೆ ಚೂಪಾಗಿಹುದು
ದಿಂಡಿನಾಕಾರದಲ್ಲಿ ಮಾಲೆಯ ರೂಪದಲ್ಲಿ
ಕಟ್ಟಿಹ ಮಲ್ಲಿಗೆ ರಾಶಿಯ ಪರಿಮಳ ಸೊಗಸು
ಇದರ ಸುಗಂಧಕ್ಕುಂಟು ಔಷಧೀಯ ಗುಣವು
ಏಳು ಸುತ್ತಿನ ಮಲ್ಲಿಗೆ ನಿನ್ನ ನೋಟ ಚೆಂದವು.

ಸಿ.ಎನ್. ಮಹೇಶ್