ಒಂಟಿಮನೆ-1

ಶ್ವೇತ ವರ್ಣದ ಒಂಟಿ ಮನೆ, ಮನೆಯ ಹಿಂದೆ ಕಗ್ಗತ್ತಲ ಕಾಡು  ಮನೆಯ ಮುಂದೆ ಅಡಿಕೆ ತೋಟ. ನೋಡಲು ಸುಂದರವಾದ ತಾಣವಾಗಿದ್ದರೂ ಅಲ್ಲಿ ನಡೆದ ಕೆಲ ಘಟನೆಗಳಿಂದ ಯಾರೂ ಆ ಮನೆ ಕೊಳ್ಳುವ ಧೈರ್ಯ ಮಾಡಿರಲಿಲ್ಲ.

ಕೃಷಿಯ ಮೇಲಿನ ಆಸಕ್ತಿಯಿಂದ ಪಟ್ಟಣ ತೊರೆದು ಬಂದ ದಂಪತಿಗಳು ಊರಿನ ಎಷ್ಟೋ ಜನ ಎಷ್ಟು ರೀತಿಯಾಗಿ ಆ ಮನೆಯ ಬಗ್ಗೆ ಎಚ್ಚರಿಸಿದರು ಕೇಳದೆ ಆ ಮನೆ ಮತ್ತು ತೋಟವನ್ನು ಕೊಂಡಿದ್ದರು.ಆ ದಂಪತಿಗಳಿಗೆ ವಿಜ್ಞಾನದ ಹೊರತು ಮೂಢನಂಬಿಕೆಗಳ ಬಗ್ಗೆ ನಂಬಿಕೆ ಇರಲಿಲ್ಲ.

ಮನೆ ಪ್ರವೇಶಿಸಿ ಕೆಲ ದಿನಗಳು ಮಾತ್ರವೇ ಕಳೆದಿತ್ತು. ಮನೆಯಲ್ಲಿ ಗಂಡ,ಹೆಂಡತಿ, ಮಗ ಮತ್ತು ಒಬ್ಬ ಮಗಳು ವಾಸಿಸುತ್ತಿದ್ದರು. ಹೀಗೆ ದಿನ ಕಳೆದಂತೆ ಮನೆಯಲ್ಲಿ ವಿಚಿತ್ರ ವಿಚಿತ್ರ ಘಟನೆಗಳು ಸಂಭವಿಸಲು ಪ್ರಾರಂಭವಾಯಿತು.

ರಾತ್ರಿ ಹೊತ್ತಿನಲ್ಲಿ ನಿಶ್ಯಬ್ದವಾಗಿರುವಾಗ ಇದ್ದಕ್ಕಿದ್ದಂತೆ ಯಾರೋ ಜೋರಾಗಿ ಕಿರುಚಿದ ಶಬ್ದ, ಕಾಣದ ಬೆಕ್ಕೊಂದು ಬಿಡದೆ ಕೂಗಿದಂತೆ, ಮನೆಯಲ್ಲಿ ಓಡಾಡುತ್ತಿದ್ದವರ ಹಿಂದೆ ಯಾರೋ ನಿಂತಂತೆ, ಏನೋ ಭಾಸವಾದಂತೆ.

ಆ ದಿನ ಹುಣ್ಣಿಮೆಯ ಸಂಜೆ 8 ಘಂಟೆಯ ಸಮಯ, ದೇವರ ದರ್ಶನ ಪಡೆದು ದೇವಸ್ಥಾನದಿಂದ ಎಲ್ಲರೂ ಮನೆಗೆ ಹಿಂದಿರುಗಿದರು. ದಾರಿ ತುಂಬಾ ಹಾಲು ಚೆಲ್ಲಿದ ಬೆಳದಿಂಗಳ ಬೆಳಕು,ನೀಲಿ ಬಣ್ಣದ ಆಕಾಶದಲ್ಲಿ  ಬಿಳಿಯ ಚಂದಿರನನ್ನು ಯಾರೋ ಚಿತ್ರಿಸಿದಂತಿತ್ತು. ಮನೆ ಸಮೀಪಿಸಿತು ದೂರದಿಂದಲೇ ಶ್ವೇತ ವರ್ಣದ ಮನೆ ಕಗ್ಗತ್ತಲೆಯಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಅಹುದು ಆ ಮನೆಯ ಎಲ್ಲರಿಗೂ ಇದೇ ಆಶ್ಚರ್ಯ ಇಂತಹ ಹುಣ್ಣಿಮೆಯಲ್ಲಿಯೂ ಕೂಡ ಮನೆಯ ಸುತ್ತ ಕತ್ತಲೆಯೇ. ಒಂದ್ ಕ್ಷಣ ದಂಪತಿಗಳಿಗೆ ಭ್ರಮೆ ಎನಿಸಿತು. ಯೋಚಿಸುತ್ತಲೇ ಮನೆಯ ಕಾಂಪೌಂಡ್ ಗೇಟ್ ಕಡೆಯಿಂದ ಒಳ ಪ್ರವೇಶಿಸಿದರು. ಪರಮಾಶ್ಚರ್ಯ ಹುಣ್ಣಿಮೆಯಲ್ಲಿಯೂ ಸಹ ಬೆಳದಿಂಗಳ ಬೆಳಕು ಆ ಮನೆಯ ಸುತ್ತಲಿನ ಅಗಳು ನೆಲವನ್ನೂ ಸಹ ತಾಕಿರಲಿಲ್ಲ. ಕೆಲ ದಿನಗಳಿಂದ ಅಲ್ಲಿ ನಡೆಯುತ್ತಿದ್ದ ಘಟನೆಗಳು ನೆನಪಾಗಿ ಭಯದಿಂದಲೇ ಮನೆ ಪ್ರವೇಶಿಸಿದರು.

ಮನೆಯ ಎಲ್ಲಾ ಲೈಟುಗಳನ್ನು ಹೊತ್ತಿಸಿದರು. ಹೆಂಡತಿ ಅಡುಗೆ ಮಾಡಲು ಅಡುಗೆ ಕೋಣೆ ಪ್ರವೇಶಿಸಿದಳು. ಗಂಡ ಅವನ ಕೋಣೆಗೆ, ಮಕ್ಕಳು ಮನೆಯ  ಟಿವಿ ಕೋಣೆಯಲ್ಲೇ ಟಿವಿ ನೋಡುತ್ತಾ ಕುಳಿತರು.

ಬೆನ್ನ ಮೇಲೆ ಯಾರೋ ಬೆರಳಾಡಿಸಿದಂತೆ ಭಾಸವಾಯಿತು ಅಡುಗೆ ಮನೆಯಲ್ಲಿದ್ದ ಹೆಂಡತಿಗೆ. ಒಂದು ಕ್ಷಣ ತಿರುಗಿ ನೋಡಿದಾಗ ಯಾರೂ ಇಲ್ಲ. ಭಯದಿಂದ ಸಹಾಯಕ್ಕಾಗಿ ತನ್ನ ಮಗಳನ್ನು ಕೂಗಿದಳು. ಓಡುತ್ತಲೇ ಬಂದ ಮಗಳು ಅಮ್ಮನ ಅಡುಗೆ ಸಹಾಯಕ್ಕೆ ಅಣಿಯಾದಳು.ಕೋಣೆ ಸೇರಿದ್ದ ಗಂಡ ತನ್ನ ಲೆಕ್ಕ ಪರಿಶೋಧನೆಯಲ್ಲಿ ನಿರತನಾಗಿದ್ದ.ತಕ್ಷಣ ವಿದ್ಯುತ್ ಹೋದಂತಾಗಿ ಕಣ್ಣ ಮುಂದೆ ಭಯಂಕರ ಆಕೃತಿ ಕಂಡ ಅನುಭವವಾಯಿತು. ಆದರೆ ಅದು ಆತನ ಭ್ರಮೆ ಎಂದುಕೊಂಡ. ಕೋಣೆಯಲ್ಲಿ ಕೂತಿದ್ದ ಮಗ ಟಿವಿ ನೋಡುತ್ತಾ  ಹಾಗೆಯೇ ನಿದ್ರೆಗೆ ಜಾರಿದ್ದ. ಟಿವಿ ಕೋಣೆಯಿಂದ ಇದ್ದಕ್ಕಿದ್ದಂತೆ ಮಗ ಕೂಗಿದ ಶಬ್ದ, ತಕ್ಷಣ ಗಾಬರಿಗೊಂಡ ತಾಯಿ ಅತ್ತ ಧಾವಿಸಿದಳು. ಮಲಗಿರುವ ಮಗನ ದೇಹ ಗಾಳಿಯಲ್ಲಿ ತೇಲುತ್ತಿದೆ, ಇದನ್ನು ಕಂಡ ತಾಯಿ ಗಾಬರಿಯಲ್ಲಿ ಕಣ್ಮುಚ್ಚಿ ತನ್ನ ಗಂಡನನ್ನು ಕೂಗಿದಳು. ಓದೊಡಿಬಂದ ಗಂಡ ಏನೆಂದು ಕೇಳಿದಾಗ ಆಕೆ ತನ್ನ ಮಗನೆಡೆಗೆ ಕೈ ತೋರಿದಳು.

ಆ ದೃಶ್ಯ ಕಂಡ ಗಂಡ ದಿಗ್ಭ್ರಾಂತನಾದ. ಗಾಳಿಯಲ್ಲಿ ತೇಲುತ್ತಲೆ ಮಗನ ದೇಹ ಅವರನ್ನು ಸಮೀಪಿಸಿ ಮಾಯವಾಯಿತು. ಕಣ್ಮುಚ್ಚಿದ್ದ ಇಬ್ಬರೂ ಕಣ್ಬಿಟ್ಟು ನೋಡಿದಾಗ ಮಗ ಹಾಸಿನ ಮೇಲೆ ಹೊದಿಕೆ ಹೊದ್ದು ಮಲಗಿದ್ದಾನೆ. ಕ್ಷಣದಲ್ಲೇ ಮಗನ ಹಿಂದೆ ಮಲಗಿದ್ದ ಮಗಳು ಅದೇ ಹೊದಿಕೆಯನ್ನು ಎಳೆದು ಮಲಗಿದಳು. ತಾಯಿಗೆ ಒಂದು ಕ್ಷಣ ಸಿಡಿಲು ಬಡಿದಂತಾಯಿತು ಇಲ್ಲಿ ಮಲಗಿರುವವಳು ತನ್ನ ಮಗಳಾದರೆ ಅಡುಗೆ ಮನೆಗೆ ತನ್ನ ಸಹಾಯಕ್ಕೆ ಬಂದಿರುವವಳಾರು.

ಮನೆಯ ದಂಪತಿಗಳಿಬ್ಬರಿಗೂ ಆದ ಘೋರ ಅನುಭವ ದಿಕ್ಕೇ ತೋಚದಂತೆ ಮಾಡಿತ್ತು. ಜನಗಳು ಹೇಳುತ್ತಿದ್ದ ವಿಷಯ ಈಗ ಅರಿವಿಗೆ ಬಂದಿತ್ತು. ಭಯಭೀತನಾಗಿ ಗಂಡ ತನ್ನ ಎರಡೂ ಮಕ್ಕಳನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಹೆಂಡತಿಯೊಡನೆ ತನ್ನ ಕೋಣೆ ಸೇರಿ ಲಾಕ್ ಮಾಡಿದನು.

ಪುನಃ ಮುಂಜಾನೆ ಏನಾದರೂ ಮಾಡಿದರಾಯಿತು ಎಂದು ಚರ್ಚಿಸಿ, ತಮ್ಮ ಮಕ್ಕಳನ್ನು ಹಾಸಿಗೆಯ ಮಧ್ಯ ಹಾಕಿ ಭಯದಲ್ಲೇ ಹೊದಿಕೆ ಹೊದ್ದು ಮಲಗಿದರು. ತಕ್ಷಣವೇ ಕೊಠಡಿಯ ಬಲ್ಬುಗಳು ತನ್ನಷ್ಟಕ್ಕೆ ತಾನೇ ಆರಿದವು. ಹೊದ್ದಿದ್ದ ಹೊದಿಕೆ ತಾನಾಗಿಯೇ ಹೊರ ಎಳೆಯ ತೊಡಗಿತು. ಎರಡು ಕೈಗಳು ಹೆಂಡತಿಯ ಕಾಲಿನ ಪಾದವನ್ನಿಡಿದವು.

ಮುಂದಿನ ವಾರಕ್ಕೆ…..

Related post

7 Comments

 • Its ver interesting.

 • Dear Brother,

  Super story and may be next episode get turn to horror,

  BEST OF LUCK.

 • Super story. Waitimg next story

 • ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ …. ಹೀಗೆ ಈ ಪತ್ರಿಕೆಯ ಎಲ್ಲಾ ಬರಹಗಳನ್ನ ಪ್ರೋತ್ಸಾಹಿಸಿ

 • ಖಂಡಿತ…. ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ …. ಹೀಗೆ ಈ ಪತ್ರಿಕೆಯ ಎಲ್ಲಾ ಬರಹಗಳನ್ನ ಪ್ರೋತ್ಸಾಹಿಸಿ

 • Super story , when is next episode waiting…….. Ekkada

 • This Saturday next episode will publish

Leave a Reply

Your email address will not be published. Required fields are marked *