ಒಂಟಿಮನೆ-3

ಇಲ್ಲಿಯವರೆಗೂ…
ಒಂಟಿ ಮನೆಯನ್ನು ಖರೀದಿಸಿದ ದಂಪತಿಗಳಿಗೆ ಮನೆಯಲ್ಲಿನ ವಿಕೃತ ಅನುಭವಗಳು ಬೆಚ್ಚಿಬೀಳಿಸುತ್ತವೆ ಹಾಗು ಮನೆಯಲ್ಲಿ ಸಿಕ್ಕ ತಾಮ್ರ ಹಾಳೆಯಲ್ಲಿ ಬರೆದಿರುವಂತೆ ಆತ್ಮಗಳನ್ನು ಬಂಧಿಸಿ ಅಷ್ಟ ದಿಗ್ಬಂದನದ ಅರಿವಾಗುತ್ತದೆ. ಅಗೋಚರ ಕೈಗಳು ದಂಪತಿಗಳು ಹೆದರುವಂತೆ ಮಾಡಿ ಮುದುಕಿಯ ರೂಪದಲ್ಲಿ ಆತ್ಮವು ಕಥೆಯನ್ನು ಹೇಳತೊಡಗುತ್ತದೆ. ಮುಂದೆ….

ಪಾತ್ರ ಪ್ರವೇಶ, ಶರತ್ತಿನಂತೆ ಕಥೆಯಲ್ಲಿ ಈ ದಂಪತಿಗಳು ಇಬ್ಬರು ಪಾತ್ರಗಳು, ಆತ್ಮಕ್ಕೆ ಬೇರೆಯವರು ಮುಟ್ಟುವಂತೆ ಭೌತಿಕ ದೇಹವಿಲ್ಲ.ಸನ್ನಿವೇಶಕ್ಕೆ ಪ್ರವೇಶಿಸುತ್ತಿದ್ದಂತೆ ಸುತ್ತ ಎತ್ತ ನೋಡಿದರೂ ಕಾಡು, ಸ್ವಲ್ಪ ದೂರದಲ್ಲಿ ಹೊಗೆ ಬರುತ್ತಿರುವ ಗೋಚರತೆ. ಏನು ಮಾಡುವುದು ತಿಳಿಯದೆ ದಂಪತಿಗಳು ಹೊಗೆಯ ಜಾಡನ್ನೆ ಹಿಡಿದು ಹೊರಟರು. ಯಾರೋ ಒಬ್ಬ ಅಲ್ಲೇ ಒಂದು ಸಮಾಧಿಯ ಮೇಲೆ ಕೂತಿದ್ದನು.ಅವನ ಕೈಗಳಿಂದಲೇ ಬೆಂಕಿಯ ಜೊತೆ ಹೊಗೆಯೂ ಸಹ ಹೊರಡುತ್ತಿತ್ತು.

ಅವನ ಮಧ್ಯದ ಬೆರಳಿನ ಜಾಗದಲ್ಲಿ ಬೆರಳಿನ ಬದಲು ಸಿಗರೇಟ್ ಇತ್ತು, ಹೆಬ್ಬಟ್ಟನ್ನು ಹೊರತು ಪಡಿಸಿ ಉಳಿದ ಮೂರು ಬೆರಳುಗಳಿಂದ ಚಿಕ್ಕದಾದ ಬೆಂಕಿ ಹೊತ್ತಿತ್ತು. ಹೆಬ್ಬೆಟ್ಟು ಮುರಿದಾಗಿತ್ತು, ಹೀಗೆ ಮುರಿದ ಹೆಬ್ಬೆಟ್ಟಿನ ಜಾಗದಲ್ಲಿ ತನ್ನ ಬಾಯಿಯಿಂದ ಮಧ್ಯ ಬೆರಳಿನ ಸಿಗರೇಟ್ ಎಳೆಯುತ್ತಾ ಅವನ ಧೂಮಪಾನವು ಸಾಗಿತ್ತು. ಅವರ ಜೊತೆ ಇದ್ದ ಆತ್ಮವೂ ಅವನಿಗೆ ಯಾವುದೇ ಪ್ರತಿಕ್ರಯಿಸಿದ ಕಾರಣ ಮುಂದೆ ಸಾಗಿದರು. ದೂರದಲ್ಲಿ ನಿಂತ ವ್ಯಕ್ತಿಗಳ ಗುಂಪೊಂದು ಕಂಡಿತು.ಒಂದು ಸಮಾಧಿಯ ಮುಂದೆ ಒಂದರ ಒಳಗೆ ಒಂದರಂತೆ ವೃತ್ತ ಬರೆದು, ಒಳ ವೃತ್ತದಲ್ಲಿ ನಕ್ಷತ್ರ ಆಕಾರ ಬರೆಯಲಾಗಿತ್ತು.

ಆ ವೃತ್ತ ಮತ್ತು ನಕ್ಷತ್ರಾಕಾರದ ಒಳಗೆ ಬೆಂಕಿ ಹಚ್ಚಲಾಗಿತ್ತು.ನೋಡಲು ಆ ದೃಶ್ಯ ನರಕದ ಕಾರ್ಕೋಟಕ ಕೂಪದಂತೆ ಗೋಚರವಾಗುತ್ತಿತ್ತು.ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಗಳು ಆ ವೃತ್ತದ ಸುತ್ತ ಮುಖ ನಾಚಿಕೊಂಡು ತಲೆ ಬಾಗಿ ನಿಂತಿದ್ದರು. ಆ ವ್ಯಕ್ತಿಗಳ ಮಧ್ಯದಲ್ಲಿ ಯಾವನೋ ಒಬ್ಬ ಮಾಂತ್ರಿಕ ವ್ಯಕ್ತಿ ಕೈಯಲ್ಲಿ ತಲೆ ಬುರುಡೆ ಹಿಡಿದು ಕೂತಿದ್ದ. ಆ ವ್ಯಕ್ತಿಯ ಕೂದಲುಗಳು ಗೋಚರವಾಗುತ್ತಿದ್ದರೂ ಮುಖ ಕಾಣದಾಗಿತ್ತು.ಕಾಲು ಕೈಗಳ ಹೊರತು ದೇಹದ ಯಾವ ಭಾಗವೂ ಸಹ ಕಾಣದಿತ್ತು.ಅವನು ತನ್ನ ಬೆರಳುಗಳನ್ನು ಕತ್ತರಿಸಿ, ಆ ಬೆರಳುಗಳಿಂದ ಹೊರ ಹೊಮ್ಮುತ್ತಿದ್ದ ರಕ್ತವನ್ನು ಸಮಾಧಿಯ ಮೇಲೆ ಹರಿಸುತ್ತಿದ್ದ. ನೋಡು ನೋಡುತ್ತಿದ್ದಂತೆ ದಂಪತಿಗಳ ಜೊತೆ ಇದ್ದ ಆತ್ಮವು ಸುಂದರ ಹೆಣ್ಣಿನ ರೂಪ ತಳೆದು ಅಲ್ಲಿದ್ದ ಸಮಾಧಿಯನ್ನು ಪ್ರವೇಶಿಸಿತು.

ಆ ಹೆಣ್ಣು ಮಾಂತ್ರಿಕನ ಕೈಯಿಂದ ಹೊಮ್ಮುತ್ತಿದ್ದ ರಕ್ತದ ಕಣಗಳಿಗೆ ತನ್ನ ನಾಲಿಗೆ ಒಡ್ಡಿದಳು.ಮಾಂತ್ರಿಕನ ಕೈಯಿಂದ ಹೊರಡುತ್ತಿದ್ದ ಆ ಹೆಣ್ಣಿನ ಮುಖ, ಬಾಯಿಯೊಳಗೆ ಬೀಳುತ್ತಿರುವಾಗ ಅವಳು ಆ ರಕ್ತದ ರುಚಿಯನ್ನು ತನ್ನ ನಾಲಿಗೆಯಿಂದ ಸವಿಯುತ್ತಾ, ನಾರಿಯರು ತೇಯ್ದ ಗಂಧವನ್ನು ತಮ್ಮ ಕೋಮಲವಾದ ತ್ವಚೆಗೆ ಲೇಪಿಸಿದಂತೆ ಅವಳು ಅದರಲ್ಲಿಉಳಿದ ರಕ್ತವನ್ನು ತನ್ನ ದೇಹಕ್ಕೆ ಲೇಪಿಸಿಕೊಳ್ಳುತ್ತಿದ್ದಳು. ಹೀಗೆ ಲೇಪಿಸುತ್ತ ಆ ಮಾಂತ್ರಿಕ ಹಾಗೂ ಅವಳ ಕಣ್ಣುಗಳು ರಕ್ತದಿಂದ ತುಂಬಿದ ಕೆಂಪಾದ ಗೋಲಿಯಂತೆ ಭಾಸವಾಗುತ್ತಿತ್ತು.ಕೆಂಪಾದ ಕಣ್ಣುಗಳಿಂದ ಒಬರನೊಬ್ಬರು ನೋಡುತ್ತಿದ್ದ ಆ ಕಣ್ಗಳಲ್ಲಿ ವಿರಹ ವೇದನೆಯ ಚುಂಬನದ ಆಲಿಂಗನದ ಬಯಕೆ ಎದ್ದು ಕಾಣುತ್ತಿತ್ತು. ಅಲ್ಲಿದ್ದ ಆ ಮಾಂತ್ರಿಕ ಆ ಆತ್ಮದ ಹೆಣ್ಣಿನ ಪ್ರಿಯಕನಾಗಿದ್ದ.

ಆ ಹೆಣ್ಣಿಗೆ ದೈಹಿಕ ಆಲಿಂಗನ ಸಾಧ್ಯವಿರಿದ ಕಾರಣ,ವಿರಹದಲ್ಲಿ ಇಬ್ಬರ ನಾಲಿಗೆಗಳೂ ಹೊರ ಚಾಚಿದವು.ಮಾಂತ್ರಿಕ ತನ್ನ ಒಂದು ಕೈ ಬೆರಳ ರಕ್ತವನ್ನು ತನ್ನ ನಾಲಿಗೆಯ ಮೇಲೆ ಸುರಿಸಿದ, ರಕ್ತ ತುಂಬಿದ ನಾಲಿಗೆಗಳ ಆಲಿಂಗನ. ಆ ಎರಡೂ ನಾಲಿಗೆಗಳು ಸೇರುತ್ತಿದ್ದಂತೆ,ಸಿಹಿ ದಿನಿಸು ಹೆಚ್ಚಾಗಿ ತಿಂದ ಕ್ಷಣ ನಾಲಿಗೆಯಿಂದ ಸುರಿವ ಸಿಹಿ ರಸದಂತೆ ಆ ನಾಲಿಗೆಗಳ ತುದಿಯಿಂದ ಹರಿದ ರಕ್ತ ಆ ಬುರುಡೆಯ ಮೇಲೆ ಬಿದ್ದು ಬುರುಡೆಯ ಕಂಗಳಿಂದ ಅಗೋಚರ ಶಕ್ತಿಯ ಬೆಳಕು ಸುತ್ತಲೂ ಆವರಿಸಿತು. ಆ ಬೆಳಕಿನ ಪ್ರಭಾವದಿಂದ ಸುತ್ತ ನಿಂತಿದ್ದ ಆ ಗುಂಪಿನ ವ್ಯಕ್ತಿಗಳ ಕಣ್ಣಲ್ಲಿ ಬೆಂಕಿ ಜ್ವಾಲೆ ಆವರಿಸಿತು. ಇದನ್ನೆಲ್ಲ ನೋಡುತ್ತಿದ್ದ ದಂಪತಿಗಳು ಆ ಕೆಂಬಳಕಿನಲ್ಲಿ ತಮಗೆ ತಾವೇ ಪಿಶಾಚಿಗಳು ಎಂಬಂತೆ ಗೋಚರವಾಗಿ ಜೀವವೇ ಹೋದಂತಾಗಿತ್ತು.

ಆ ಚುಂಬನದ ಆಲಿಂಗದಲ್ಲಿ ಮಾಂತ್ರಿಕ ಹಾಗೂ ಆತ್ಮದ ಶಕ್ತಿ ಆ ಬುರುಡೆಯಲ್ಲಿ ಕ್ರೋಢೀಕರಣವಾಗಿತ್ತು. ಆ ಸನ್ನಿವೇಶದ ಕಗ್ಗತ್ತಲೆಯ ಕೆಂಬಳಕಲ್ಲಿ ಮನಕೆ ಆವರಿಸಿದ ಭಯದ ಕಾರ್ಮೋಡಕೆ ಕಣ್ಣೀರು ಮಳೆಹನಿಯಾಗಿ ಜಲಪಾತದಂತೆ ಹೆಂಡತಿಯ ಬಾಡಿದ ಕಣ್ಣುಗಳಿಂದ ಸುರಿಯುತ್ತಿತ್ತು. ಈ ಭಯಂಕರ ಸನ್ನಿವೇಶವನ್ನು ಸಹಿಸದಾದ ಹೆಂಡತಿ, ಆಕಾಶವೇ ಕಿವಿ ಮುಚ್ಚುವಂತೆ ಅತೀವ ಭಯದಲ್ಲಿ ಜೋರಾಗಿ ಕಿರುಚಿದಳು. ಶಬ್ದ ಕೇಳುತ್ತಲೇ ಎಚ್ಚೆತ್ತ ಗುಂಪಿನ ವ್ಯಕ್ತಿಗಳು ತಕ್ಷಣ ತಮ್ಮ ಗಮನವನ್ನು ಆಕೆಯ ಕಡೆ ತಿರುಗಿಸಿದರು.ಕಪ್ಪು ವಸ್ತ್ರದಲ್ಲಿ ಕಣ್ಣಿನಲ್ಲಿ ಕಾಣುತ್ತಿದ್ದ ಬೆಂಕಿಯಲ್ಲಿ ಅವರೂ ಸಹ ಕೊಳ್ಳಿ ದೆವ್ವಗಳಂತೆ ಗೋಚರಿಸುತ್ತಿದ್ದರು.ಅವರನ್ನು ನೋಡುತ್ತಲೇ ಪತಿಯ ಹೆಂಡತಿ ಮೂರ್ಛೆ ತಿರುಗಿ ನೆಲಕ್ಕುರುಳಿದಳು.

ಪತಿಯೇನು ವೀರನಲ್ಲ ಭಯದಲ್ಲಿ ಅವನ ಕಾಲುಗಳು ಕೂಡ ನೃತ್ಯವಾಡುತ್ತಿದ್ದವು.ಭಯದಲ್ಲೇ ಆಕೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿದನು.ಮಾಂತ್ರಿಕ ಶಕ್ತಿಗೆ ಒಳಗಾಗಿದ್ದ ವ್ಯಕ್ತಿಗಳ ಗುಂಪು ಇವರನ್ನು ಹಿಡಿಯಲು ಸಾವಕಾಶವಾಗಿ ಹೆಜ್ಜೆ ಇಡತೊಡಗಿದರು. ಮೂರ್ಛೆ ಹೋದ ಹೆಂಡತಿ ಅವನನ್ನು ಅಲ್ಲಿಯೇ ಕಟ್ಟಿ ಹಾಕಿದ ಪರಿಸ್ಥಿತಿ ಅವನದಾಗಿತ್ತು. ಇನ್ನೇನು ಮಾಡುವುದು ಬಂದವರನ್ನು ಎದುರಿಸಲೇಬೇಕಾದ ಸ್ಥಿತಿ. ಆ ವ್ಯಕ್ತಿಗಳು ಇವರ ಹತ್ತಿರ ಸುಳಿಯುತ್ತ , ಅದರಲ್ಲಿ ಇಬ್ಬರು ಬಿದ್ದ ಪತ್ನಿಯನ್ನು ಹೊತ್ತುಕೊಂಡರು, ಪತಿ ಉಳಿದವರನ್ನು ತಳ್ಳಿ ಬೀಳಿಸುವ ಪ್ರಯತ್ನದಲ್ಲಿ ವಿಫಲನಾಗಿ, ಅವರ ಬಂಧನಕ್ಕೊಳಗಾಗಿ ಅವರೊಂದಿಗೆ ಸಮಾಧಿಯತ್ತ ಹೆಜ್ಜೆ ಇರಿಸಿದ. ಇಷ್ಟೆಲ್ಲಾ ನಡೆದರೂ ಪ್ರೇಮ ಬಂಧಿಗಳಾಗಿದ್ದ ಮಾಂತ್ರಿಕ ಮತ್ತು ಆತ್ಮದ ಹೆಣ್ಣು ಸ್ವಲ್ಪವೂ ವಿಚಲಿತರಾಗಲಿಲ್ಲ. ಅವರ ಚುಂಬನ ಹಾಗೆಯೇ ಸಾಗಿತ್ತು ಅದು ಬರೀ ಪ್ರಣಯವಲ್ಲದೆ ತಮ್ಮಲ್ಲಿದ್ದ ಅತೀವ ದುಷ್ಟ ಶಕ್ತಿಗಳ ಸಮ್ಮಿಲನವಾಗಿತ್ತು. ಇಬ್ಬರನ್ನೂ ತಂದ ವ್ಯಕ್ತಿಗಳು ಹೆಂಡತಿಯನ್ನು ಸಮಾಧಿಯ ಮೇಲೆ ಮಲಗಿಸಿದರು, ಪತಿಯನ್ನು ಅಗ್ನಿ ವೃತ್ತದ ಮಧ್ಯದಲ್ಲಿ ಎಸೆಯಲಾಗಿತ್ತು.

ಆ ಆತ್ಮದ ಹೆಣ್ಣಿನ ರಕ್ತದ ಹನಿಗಳು ಒಂದೊಂದಾಗಿ ಆ ಹೆಂಡತಿಯ ಮುಖದ ಮೇಲೆ ಬೀಳತೊಡಗಿ ಆಕೆ ಎಚ್ಚರಗೊಂಡಳು.ಭಯದ ಆತಂಕದಲ್ಲಿ ಎದುರಲ್ಲಿದ್ದ ಮಾಂತ್ರಿಕನನ್ನು ತಳ್ಳಿದಳು. ಆಕೆ ತಳ್ಳಿದ ಭರಕ್ಕೆ ಮಾಂತ್ರಿಕ ತನ್ನ ಬಲ ಭಾಗದಲ್ಲಿ ಉರುಳಿದನು ಇದರೊಂದಿಗೆ ಅವರ ಆಲಿಂಗನದ ಬೇರ್ಪಡೆಯಾಗಿತ್ತು. ಇದರಿಂದ ಆ ಹೆಣ್ಣಿಗೆ ಸಿಗುತ್ತಿದ್ದ ರಕ್ತವೂ ನಿಂತುಹೋಗಿತ್ತು. ಮತ್ತೆ ಆಕೆ ಆತ್ಮದ ರೂಪ ತಳೆದಳು. ಬುರುಡೆಯಲ್ಲಿದ್ದ ಶಕ್ತಿ ಕುಂದಿ ಹೋಗಿ ಬೆಳಕು ಮಾಯವಾಗಿತ್ತು,ಗುಂಪಿನ ವ್ಯಕ್ತಿಗಳ ಕಣ್ಣಲಿದ್ದ ಬೆಂಕಿಜ್ವಾಲೆ ಆರಿಹೋಗಿತ್ತು. ಆಕೆಯ ಈ ಕಾರ್ಯದಿಂದ ಕುಪಿತನಾದ ಮಾಂತ್ರಿಕ ಆಕೆಯನ್ನು ಹಿಡಿದು, ಸತ್ತ ತನ್ನ ಪ್ರೇಯಸಿಯ ಆತ್ಮವನ್ನು ಆ ಹೆಂಡತಿಯ ದೇಹದಲ್ಲಿ ವಿವಶಗೊಳಿಸಿ ಆಕೆಯನ್ನು ಕೊನೆಯತನಕ ತನ್ನಲ್ಲಿಯೇ ಉಳಿಸಿಕೊಳ್ಳುವ ತೀರ್ಮಾನ ಮಾಡಿದನು. ಅದಕ್ಕಾಗಿ ಆಕೆಯ ದೇಹವನ್ನು ಸಮಾಧಿಯೊಳಗೆ ಕತ್ತರಿಸಿ,ಆಕೆಯ ದೇಹವನ್ನು ಅದರಲ್ಲೇ ಬಿಸಾಡಿದರೆ ಸಾಕು ತನ್ನ ಪ್ರೇಯಸಿಯ ಆತ್ಮ ಆಕೆಯ ದೇಹವನ್ನು ಪ್ರವೇಶಿಸಿ, ಅದನ್ನು ಕೊನೆಯತನಕ ವಶಕ್ಕೆ ಪಡೆಯಬಹುದಾಗಿತ್ತು.

ಅಲ್ಲಿದ್ದ ಅವನ ಸಹಚರರಿಗೆ ಆ ಹೆಂಗಸನ್ನು ಹಿಡಿದು, ಕಟ್ಟಿಹಾಕಿ ಸಮಾಧಿಯ ಒಳಗೆ ಎಸೆಯಲು ಸೂಚಿಸಿದನು.ಇದನ್ನು ಆಲಿಸಿದಳು ಆ ಹೆಂಗಸು ಅಲ್ಲಿಂದ ಓಡುವ ಪ್ರಯತ್ನ ಮಾಡಿದಳು, ಆದರೆ ಈ ಬಾರಿ ತನ್ನ ಪತಿ ಬೆಂಕಿ ವೃತ್ತದಲ್ಲಿ ಬಂಧಿಯಾಗಿದ್ದರಿಂದ ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವ ಪ್ರಯತ್ನದ ಬಾಗಿಲೇ ಮುಚ್ಚಿಯಾಗಿತ್ತು….

ಮುಂದುವರೆಯುವುದು …….

Related post

Leave a Reply

Your email address will not be published. Required fields are marked *