ಒಂಟಿ ಮನೆ – ಅಂತಿಮ ಭಾಗ

ಹಿಂದಿನ ಸಂಚಿಕೆಯಿಂದ…
ದಂಪತಿಗಳ ಪ್ರೀತಿ ಪಾತ್ರವಾದ ಆತ್ಮವು ಸದ್ದು ಬಂದ ಜಾಗದ ಬಾಗಿಲನ್ನು ಒದ್ದನಂತರ ಅಲ್ಲಿದ್ದ ದುಷ್ಟ ಆತ್ಮಗಳು ಬೆದರಿ ಕಂಗಾಲಾಗಿ ವಾಪಸ್ಸು ಅಲ್ಲಿದ್ದ ಅಷ್ಟದಿಗ್ಬಂಧನದಲ್ಲಿ ಸೇರಿ ಹೋಗುತ್ತವೆ. ದಂಪತಿಗಳು ಆ ಅಷ್ಟ ದಿಗ್ಬಂಧನದ ಸಮಸ್ಯೆಯಿಂದ ಹೊರಬರಲು ಮುಂದಿನ ದಾರಿ ತೋರುವಂತೆ ಮೊರೆಯಿಡ್ಡುತ್ತಾರೆ. ಆತ್ಮವು ಅವಿತಿರುವ ಶಿವಲಿಂಗವನ್ನು ಹುಡುಕಿ ತೆಗೆದು ಪೂಜೆ ಸಲ್ಲಿಸಿದರೆ ಪರಿಹಾರ ದೊರಕಿ ನನಗೂ ಸಹ ಮುಕ್ತಿ ದೊರೆಯುವುದು ಎಂದು ಹೇಳಿತು. ಆಗ ದಂಪತಿಗಳು ಮಕ್ಕಳ ನೆರವಿನಿಂದ ಶಿವಲಿಂಗವನ್ನು ಹುಡುಕಿ ತೆಗೆದು ಪೂಜೆ ಸಲ್ಲಿಸಿದಾಗ ತಕ್ಷಣವೇ ಕೆಲ ಬಿಳಿಯ ಕಿರಣಗಳು ಕಾಣಿಸಿಕೊಂಡು ಅದರಿಂದ ವಿಚಿತ್ರವಾದ ಧ್ವನಿಗಳು ಕೇಳತೊಡಗಿದವು.ಅದನ್ನೆಲ್ಲ ಕೇಳುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದ ನಾಲ್ಕು ಜನ ಕಣ್ಬಿಟ್ಟು ನೋಡಿದಾಗ ಎಲ್ಲಾ ಮನೆಗಳು ಒಂದಾಗಿ ಅದರಲ್ಲಿನ ಆತ್ಮಗಳ ಆರ್ಭಟ ಅವರಿಗೆ ಕೇಳತೊಡಗಿತ್ತು.ಆದರೆ ಅದರಲ್ಲಿ ಯಾವುದೇ ಆಕಾರವು ಕಾಣುತ್ತಿರಲಿಲ್ಲ. ಮುಂದೆ…

ಕರ್ಕಶ ಧ್ವನಿಯಿಂದ ಕೂಗುತ್ತಿದ್ದ ಆತ್ಮಗಳು ನಿಧಾನವಾಗಿ ಅವರ ಕಣ್ಣಿಗೆ ಕಾಣ ತೊಡಗಿದವು, ಅವೆಲ್ಲ ಆ ಮನೆಯ ಹಳೆಯ ಯಜಮಾನ ಆ ಪುರುಷನನ್ನು ಕೊಂದಿದ್ದ ಆತ್ಮಗಳೆಂದು ಅವನಿಗಾಗಲೆ ತಿಳಿದಿತ್ತು. ಅವನು ಆ ಒಬ್ಬೊಬ್ಬರನ್ನು ನೋಡುತ್ತಿದ್ದಂತೆ ಅವನಿಗೆ ಕೋಪ ಉಕ್ಕಿ ಬರುತ್ತಿತ್ತು, ಆದರೆ ಆ ನಾಲ್ಕು ಜನಕ್ಕೆ ಭಯ ಶುರುವಾಗಿದ್ದು ಅವರ ಮುಖ ಭಾವದಲ್ಲಿ ಕಾಣ ತೊಡಗಿತ್ತು. ಆದರೆ ಅವರು ಆ ಯಜ್ಞವನ್ನು ಪ್ರಾರಂಭಿಸಿದ್ದ ಕಾರಣ ಭಯದಿಂದ ಹಿಂದೆ ಸರಿಯುವ ಯಾವ ಅವಕಾಶವೂ ಅವರಿಗಿರಲಿಲ್ಲ ಅವರನ್ನು ಎದುರಿಸಿ ಅವರನ್ನು ಸಂಹರಿಸಲೆ ಬೇಕಿತ್ತು. ಆತ್ಮಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತ ಆ ಯಜ್ಞವನ್ನು ಪ್ರಾರಂಭಿಸಿದ ಆ ನಾಲ್ಕು ಜನರನ್ನು ಬಲಿ ತೆಗೆದುಕೊಳ್ಳಲು ಆತುರವಾಗಿದ್ದವು. ಬಲಿ ತೆಗೆದುಕೊಳ್ಳಲು ಅವರನ್ನು ನೋಡುತ್ತಾ ಅವರಿದ್ದ ಕಡೆಗೆ ಗಾಳಿಯಲ್ಲಿ ವೇಗವಾಗಿ ಬಂದವು. ತಕ್ಷಣ ಅಲ್ಲಿಯೇ ಇದ್ದ ಆ ಮನೆಯ ಪುರುಷ ಆತ್ಮನು ತನ್ನ ಶಕ್ತಿಯಿಂದ ಆ ನಾಲ್ಕು ಜನದ ಸುತ್ತ ಒಂದು ಶಕ್ತಿಯುತ ವೃತ್ತವನ್ನು ಸೃಷ್ಟಿಸಿದನು. ಅದು ಸೃಷ್ಟಿಗೊಂಡು ಆ ಆತ್ಮಗಳು ಅದಕ್ಕೆ ತಾಗುತ್ತಲೆ ಯಾವುದೋ ಬಲವಾದ ಶಕ್ತಿ ತಮ್ಮನ್ನು ಬಲವಾಗಿ ಹೊಡೆದಂತಾಗಿ ಮತ್ತೆ ಹಿಂದಕ್ಕೆ ನೂಕಲ್ಪಟ್ಟವು. ಆ ಶಕ್ತಿಯನ್ನು ಸೃಷ್ಟಿಸಿದ ಅವನನ್ನು ದಿಟ್ಟಿಸಿ ನೋಡಿ ಒಂದೊಂದಾಗಿ ಅವನ ಮೇಲೆರಗಿದವು.

ಮೊದಲ ಆತ್ಮ ಅವನ ಭಾವನದಾಗಿತ್ತು ಅವನೇ ಅವನ ಸಾವಿಗೆ ಪ್ರಮುಖ ಕಾರಣನಾಗಿದ್ದ. ಅವನನ್ನು ಹಾಗೆಯೇ ದಿಟ್ಟಿಸಿ ನೋಡುತ್ತ ಅವನ ತಲೆಯನ್ನು ಹಿಡಿದು ಇನ್ನೊಂದು ಕೈಯನ್ನು ಮುಷ್ಟಿ ಮಾಡಿ ಬಲವಾಗಿ ಅವನ ತಲೆಗೆ ಬಿಡದಂತೆ ಹೊಡೆಯುತ್ತಾ ಸಾಗಿದ. ಅದರಿಂದ ಅವನ ಭಾವನ ಆತ್ಮದ ಶಕ್ತಿ ಕುಗ್ಗುತ್ತಾ ಸಾಗಿತು. ತಕ್ಷಣ ಅವನು ಅವನ ಭಾವನ ಆತ್ಮವನ್ನು ಆ ಲಿಂಗದ ಕೆಳಗಿದ್ದ ತಾಮ್ರ ಶಿಲಾ ಹಾಳೆಗೆ ಎಸೆದ. ಎಸೆಯುತ್ತಿದ್ದ ಹಾಗೆ ಅವನು ತತ್ ಕ್ಷಣದಲ್ಲಿಯೇ ಬೂದಿಯಾಗಿ ಹೋದನು. ಇದನ್ನು ಗಮನಿಸಿದ ಉಳಿದ ಆರು ಆತ್ಮಗಳಿಗೆ ನಡುಕ ಶುರುವಾಯಿತು. ಅವುಗಳು ಅವನಿಂದ ದೂರ ದೂರ ಸರಿಯುತ್ತಾ ಇದ್ದವು. ಉಳಿದ ಆ ಆರು ಜನರಿಂದಲೇ ಅವನ ಹೆಂಡತಿ ಮತ್ತು ಮಗುವಿನ ಕೊಲೆಯಾಗಿತ್ತು. ಅದು ಆ ಪುರುಷನ ಆತ್ಮಕ್ಕೂ ತಿಳಿದ ವಿಷಯವೇ, ಅವರನ್ನು ನೋಡಿ ಅವನ ಕಣ್ಣುಗಳು ರಕ್ತದಿಂದ ತುಂಬಿದಂತೆ ಕೆಂಪಾದವು.

ವಿಧಿಯಿಲ್ಲದೆ ಆ ಆತ್ಮಗಳು ಅವನ ಜೊತೆ ಸೆಣಸಿದವು, ಅವನು ಕೋಪದಿಂದ ತನ್ನ ಕೈಗಳನ್ನು ಉದ್ದವಾಗಿ ಬೆಳೆಸಿ ಅವರ ತಲೆಗಳನ್ನು ಹಿಡಿದು ಮತ್ತೆ ಮತ್ತೆ ನೆಲಕ್ಕೆ ಬಲವಾಗಿ ಕುಕ್ಕ ತೊಡಗಿದ.ಎಷ್ಟು ಹೊಡೆದರೂ ಅವನ ಕೋಪ ಕಡಿಮೆ ಆಗಲಿಲ್ಲ. ಕೊನೆಗೆ ಅವರ ತಲೆಗಳನ್ನು ಗಟ್ಟಿಯಾಗಿ ಹಿಡಿದು ಗಾಳಿಯಲ್ಲಿ ವೇಗವಾಗಿ ತಿರುಗಿಸಿ ಜೋರಾಗಿ ತನೆಲ್ಲ ಬಲ ಪ್ರಯೋಗಿಸಿ ನೆಲಕ್ಕೆ ಹೊಡೆದನು. ಅವನು ಹೊಡೆದ ಹೊಡೆತಕ್ಕೆ ಅವರೆಲ್ಲ ಸತ್ತ ಕೋಳಿಗಳಂತೆ ಆಗಿದ್ದರು. ಕೊನೆಗೆ ಕೋಪದಿಂದ ಅವುಗಳನ್ನು ಲಿಂಗದ ಮುಂದಿದ್ದ ತಾಮ್ರ ಶಿಲಾ ಹಾಳೆಯ ಮೇಲೆ ಎಸೆದ. ಅದನ್ನು ತಾಕುತ್ತಲೆ ಆ ಎಲ್ಲ ಆತ್ಮಗಳು ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿ ಹೋದರು. ಅವರು ಸುಟ್ಟು ಬೂದಿಯಾಗುತ್ತಲೆ ಆ ಅಷ್ಟ ದಿಗ್ಬಂಧನದ ರೇಖೆಗಳು ಮಾಯವಾದವು.ಅವರ ಸುತ್ತ ಆ ಆತ್ಮನು ಹಾಕಿದ್ದ ಶಕ್ತಿಯುತವಾದ ವೃತ್ತವನ್ನು ಹಿಂತೆಗೆದುಕೊಂಡ. ಆ ನಾಲ್ಕು ಜನ ನಡೆದ ಇದ್ಯಾವುದನ್ನೂ ಗಮನಿಸದೆ ಮೊದಲಿನಿಂದಲೇ ಹೆದರಿ ಕಣ್ಮುಚ್ಚಿ ದೇವರ ಧ್ಯಾನ ಮಾಡುತ್ತಿದ್ದರು.

ಅವರು ಕಣ್ಬಿಟ್ಟು ನೋಡಿದಾಗ ಎಲ್ಲವೂ ಸ್ವಚ್ಚವಾಗಿ ಹೋಗಿತ್ತು, ಒಂದು ಕ್ಷಣ ನಿಬ್ಬೆರಗಾದರು. ಆ ಒಂಟಿ ಮನೆ ಮತ್ತೆ ಮೊದಲಿನ ಹಾಗೆ ಸಂಪೂರ್ಣ ಸಹಜ ಸ್ಥಿತಿಗೆ ಮರಳಿತ್ತು. ಅದನೆಲ್ಲಾ ನೋಡುತ್ತಾ ಅವರ ಕಣ್ಣಲ್ಲಿ ಆನಂದ ಭಾಷ್ಪ ತುಂಬಿಕೊಂಡಿತ್ತು. ಆ ಪುರುಷ ಮಾಡಿದ ಸಹಾಯಕ್ಕೆ ಅವರ ಎಂತಹ ಮಾತುಗಳು,. ಎಷ್ಟು ಧನ್ಯವಾದಗಳು ಸಹ ಕಡಿಮೆ ಎಂದೆನಿಸಿತು ಯಾಕೆಂದರೆ ಅವನು ಕಾಪಾಡಿದ್ದು ಕೇವಲ ಆ ಮನೆಯನ್ನೆಲ್ಲ ಅವರ ಪ್ರಾಣಗಳನ್ನು. ಕಣ್ಣೀರಿಡುತ್ತಾ ಅವನಿಗೆ ಕೈ ಮುಗಿಯುತ್ತಾ ಆ ನಾಲ್ಕು ಜನ ಕೃತಜ್ಞತೆ ತಿಳಿಸಿದರು. ತನಗೆ ಆತ್ಮದಿಂದ ಮುಕ್ತಿ ದೊರೆಯಬೇಕಾದರೆ ಆ ತಾಮ್ರ ಶಿಲಾ ಹಾಳೆಯನ್ನು ಸುಟ್ಟು ಹಾಕಿ ಆ ಲಿಂಗವನ್ನು ಆ ಮನೆಯ ಮುಂದೆ ಪ್ರತಿಷ್ಟಾಪಿಸಿ ಪೂಜೆ ಮಾಡುವಂತೆ ಹೇಳಿದ. ಅವನು ಹೇಳಿದಂತೆ ಆ ಲಿಂಗವನ್ನು ತಮ್ಮ ಮನೆಯ ಒಂದು ಕಟ್ಟೆ ಇದ್ದ ಜಾಗದಲ್ಲಿ ಪ್ರತಿಷ್ಟಾಪಿಸಿ, ಆ ತಾಮ್ರ ಶಿಲಾ ಹಾಳೆಯನ್ನು ಸುಟ್ಟು ಹಾಕಿ ಅದರ ಬೂದಿಯನ್ನು ಆ ಲಿಂಗದ ಕೆಳಗೆ ಹಾಕಿದರು. ನಂತರ ಅವನು ಹೇಳಿದಂತೆ ಪೂಜೆಗೈಯಲು ಎಲ್ಲರೂ ಹೋಗಿ ಸ್ನಾನ ಗೈದು ಮತ್ತೆ ಆ ಮನೆಗೆ ಎಂದೂ ಕಂಟಕ ಬಾರದಂತೆ ತಡೆಯಲು ಆ ಶಿವಲಿಂಗ ಪೂಜೆಗೈದರು. ಹೀಗೆ ಪೂಜೆ ಸಂಪೂರ್ಣಗೊಳ್ಳುತ್ತಲೆ ಆ ಆತ್ಮ ಶಾಂತಿಸಿ ಮುಕ್ತಿ ದೊರೆಯುವ ಕಾಲ ಸಮೀಪಿಸಿ. ಇದಕ್ಕೆಲ್ಲ ಕಾರಣರಾದ ಆ ದಂಪತಿಗಳಿಗೆ ವಂದಿಸುತ್ತಾ ಅವನ ಆತ್ಮವು ಆಕಾಶದೆಡೆಗೆ ಹಾರುತ್ತಾ ಮಾಯವಾಯಿತು.

ನಂತರ ಆ ದಂಪತಿಗಳು ತಮ್ಮ ಮಕ್ಕಳನ್ನು ಮುದ್ದಾಡಿ, ತಾವೂ ಒಬ್ಬರನ್ನು ಒಬ್ಬರು ಅಪ್ಪಿಕೊಳ್ಳುತ್ತ ಒಳ ನಡೆದರೂ. ಆ ಶಿವಲಿಂಗದ ರಕ್ಷಣೆ ಇರುವಾಗ ಮತ್ತೆ ಆ ಒಂಟಿ ಮನೆಗೆ ಎಂದೂ ಕಂಟಕ ಬರಲಿಲ್ಲ. ಹೀಗೆ ದಂಪತಿಗಳು ತಮ್ಮ ಮಕ್ಕಳೊಂದಿಗೆ ಮುಂದಿನ ಜೀವನವನ್ನು ಅಲ್ಲಿಯೇ ಸುಖವಾಗಿ ಜೀವಿಸಿದರು.

ಸುಖಾಂತ್ಯ…

Related post

Leave a Reply

Your email address will not be published. Required fields are marked *