ಹಿಂದಿನ ಸಂಚಿಕೆಯಿಂದ…
ದಂಪತಿಗಳ ಸಹಾಯಕ್ಕೆ ಬಂದ ಆ ಆತ್ಮವು ತನ್ನ ಶಕ್ತಿಯನ್ನು ಉಪಯೋಗಿಸುತ್ತಾ ಪತ್ನಿಯ ದೇಹದಲ್ಲಿ ಸೇರಿದ್ದ ಮಾಂತ್ರಿಕನ ಪ್ರೇಯಸಿಯ ಆತ್ಮವನ್ನು ಹೊರಗೆಳೆದು ಬಿಸಾಡಿತು. ಹೀಗೆ ಅವಳ ದೇಹದಿಂದ ಆತ್ಮ ಹೊರಬರುತ್ತಿದ್ದಂತೆ ಆಕೆಯ ದೇಹವು ಸಮಾಧಿಯ ಪಕ್ಕಕ್ಕೆ ಬಿದ್ದಿತು. ಇತ್ತ ಆಕೆಯ ಪತಿ ಕತ್ತಿಯಿಂದ ಹಗ್ಗವನ್ನು ಕತ್ತರಿಸಿ ಅದರ ಹಿಡಿತದಿಂದ ಬಿಡುಗಡೆಗೊಂಡ. ಮುಂದೆ…
-ಆರು-
ಆ ಪತಿಯ ಆತ್ಮವನ್ನು ಮತ್ತೆ ಅದರ ದೇಹದೊಳಕ್ಕೆ ಸೇರಿಸಲಾಯಿತು.ಆದರೂ ಆಕೆಯ ದೇಹಕ್ಕೆ ಎಚ್ಚರವಿರಲಿಲ್ಲ.
ಹಗ್ಗದ ಬಂಧನದಿಂದ ಬಿಡುಗಡೆಗೊಂಡ ಆಕೆಯ ಪತಿ ತನಗೆ ಸಿಕ್ಕ ಕತ್ತಿಯಿಂದ ಅಲ್ಲಿದ್ದ ಇಬ್ಬರು ಸಹಚರರ ತಲೆ ತುಂಡರಿಸಿದ.ಅವನು ಕತ್ತರಿಸಿದ ರೀತಿಗೆ ಅವರ ರಕ್ತವು ಪಕ್ಕದಲ್ಲಿರುವ ಇನ್ನೊಬ್ಬ ಸಹಚರನ ಮೇಲೆ ಝಲ್ ಎಂದು ಸಿಡಿದಿತ್ತು. ಹೀಗೆ ಸಿಡಿದ ರಕ್ತದಿಂದ ಆ ಸಹಚರ ಎಚ್ಚರಗೊಂಡು ಅಲ್ಲಿಂದ ಹಿಂದೆ ಸರಿದ. ಪತಿ ಅವನನ್ನೂ ಕೊಲ್ಲಲು ನೋಡಿದಾಗ ಆ ಸಹಚರ ಕಾಲಿನಿಂದ ಕತ್ತಿಯನ್ನು ಒದ್ದು, ಅವನ ಕಣ್ಣೊಳಗೆ ಮಣ್ಣನ್ನು ಎಸೆದ. ಹೀಗೆ ಮಣ್ಣಿನ ಧೂಳಿನಿಂದ ಅವನ ಕಣ್ಣು ಮುಚ್ಚಿದ. ಅವನ ಕತ್ತಿ ಎಲ್ಲೋ ಕಾಣದ ಕಡೆ ಹೋಗಿ ಬಿದ್ದಿತು. ಬೆಂಕಿ ತಗುಲಿ ಕಣ್ಣು ನೋವಿನಿಂದ ಒದ್ದಾಡುತ್ತಿದ್ದ ಮಾಂತ್ರಿಕ ಸ್ವಲ್ಪ ಸುಧಾರಿಸಿಕೊಂಡು ಕಣ್ಬಿಟ್ಟು ನೋಡತೊಡಗಿದ, ಎದುರುಗಡೆ ತನ್ನ ಸಹಚರರ ಕತ್ತರಿಸಿದ ರುಂಡಗಳು.ಹೆಣ್ಣಿನ ದೇಹದಿಂದ ಹೊರಬಂದು ಅಲೆದಾಡುತ್ತಿದ್ದ ತನ್ನ ಪ್ರೇಯಸಿಯ ಆತ್ಮ. ಹಗ್ಗದ ಬಂಧನದಿಂದ ಬಿಡುಗಡೆಗೊಂಡು ಕಣ್ಣು ಹಿಡಿದು ನಿಂತಿದ್ದ ಆ ಹೆಣ್ಣಿನ ಪತಿ, ಸೀಸೆಯಲ್ಲಿ ಬಂಧಿಯಾಗಿದ್ದ ಪುರುಷನ ಆತ್ಮ ಬಿಡುಗಡೆಗೊಂಡು ಆ ದಂಪತಿಗಳನ್ನು ರಕ್ಷಿಸುವ ಕಾರ್ಯದಲ್ಲಿ ಮಗ್ನವಾಗಿತ್ತು. ಒಂದು ಕ್ಷಣದಲ್ಲಿ ಏನೆಲ್ಲಾ ಆಗಿಹೋಗಿದೆ ಎಂದು ಕಕ್ಕಾಬಿಕ್ಕಿಗೊಂಡ.
ತನ್ನ ಎಲ್ಲಾ ಪ್ರಯತ್ನಗಳು ವಿಫಲವಾದವು, ಕೋಪ ನೆತ್ತಿಗೇರಿತ್ತು. ಹೇಗಾದರೂ ಮಾಡಿ ತನ್ನ ಪ್ರೇಯಸಿಯ ಆತ್ಮಕ್ಕೆ ಪುನರ್ಜನ್ಮ ಕೊಡಬೇಕೆಂದು ಮತ್ತೆ ಅವನ ಪಕ್ಕಕ್ಕೆ ಕತ್ತಲೆಯಲ್ಲಿ ಬಿದ್ದಿದ್ದ ಕತ್ತಿಯನ್ನು ಹಿಡಿಯುತ್ತ ಮಂತ್ರ ಪಠಣ ಮಾಡುತ್ತಾ ಸಮಾಧಿಯ ಪಕ್ಕದಲ್ಲಿ ಬಿದ್ದಿದ್ದ ಪತ್ನಿಯ ದೇಹದೆಡೆಗೆ ಸಾಗಿದ. ಅವನ ಉದ್ದೇಶವನ್ನು ಅರಿತ ಅವನ ಸಹಚರ ಆ ಹೆಣ್ಣಿನ ದೇಹವನ್ನು ಹಿಡಿಯಲು ಮುಂದಾದ. ಎಷ್ಟೇ ಪ್ರಯತ್ನ ಪಟ್ಟರೂ ಆಕೆಯ ದೇಹ ನೆಲದಿಂದ ಮೆಲೇಳಲಿಲ್ಲ. ಅಸಹಾಯಕನಾಗಿ ಮಾಂತ್ರಿಕನ ಮುಖವನ್ನು ನೋಡತೊಡಗಿದ. ಆ ಕತ್ತಿಯನ್ನು ಅವನ ಕೈಗೆ ಕೊಡುತ್ತಾ ತಾನು ಆಕೆಯ ದೇಹವನ್ನು ಎತ್ತಲು ಮುಂದಾದ, ಆಕೆಯ ದೇಹ ನೆಲದ ಮೇಲಿಂದ ಏಳಿಸುತ್ತಲೆ ಆಕೆಯ ರುಂಡ ಕತ್ತರಿಸಿ ಮಾಂತ್ರಿಕನ ಪ್ರೇಯಸಿಯ ಸಮಾಧಿಯ ಮೇಲೆ ಕೆಡವಲು ಅವನ ಸಹಚರ ಸನ್ನದ್ಧನಾದ. ತನ್ನ ಪ್ರೇಯಸಿಯ ದೇಹಕ್ಕೆ ಪುನರ್ಜೀವನ ದೊರೆಯಬೇಕಾದರೆ ಆಕೆಯ ಆತ್ಮ ಹೆಣ್ಣಿನ ದೇಹ ಹೊಕ್ಕು ಅದನ್ನು ಕತ್ತರಿಸಿ ಆಕೆಯ ಸಮಾಧಿಯ ಮೇಲೆ ಆ ದೇಹ ಬಿದ್ದಾಗ ಮಾತ್ರ ತನ್ನ ಪ್ರೇಯಸಿಗೆ ಪುನರ್ಜೀವ, ದೇಹ ಕತ್ತರಿಸುವಾಗ ಸ್ವಲ್ಪ ವ್ಯತ್ಯಾಸವಾಗಿಯು ಆಕೆಯ ಆತ್ಮ ಗಂಡಸಿನ ದೇಹ ಹೊಕ್ಕು ಅವನ ದೇಹ ಕತ್ತರಿಸಿದರೆ ಆಕೆಯ ದೇಹದೊಂದಿಗೆ ಅವನ ಆತ್ಮವೂ ಸುಟ್ಟು ಬೂದಿ ಆಗುವುದೆಂದು ಅದಕ್ಕೆ ಎಚ್ಚರದಿಂದ ಆಕೆಯ ದೇಹ ಛೇದಿಸೆಂದು ಹೇಳಿದ.ಅದಕ್ಕೆ ಸರಿ ಎಂದು ಹೇಳಿದಂತೆ ಸಹಚರ ತಲೆಯಾಡಿಸಿದ. ಮಾಂತ್ರಿಕ ಆಡಿದ ಈ ಮಾತುಗಳು ಆ ಪತಿಯ ಕಿವಿಗೂ ಬಿದ್ದಿತು ಹಾಗೆ ಅವರ ಸಹಾಯಾಕ್ಕೆಂದು ಬಂದಿದ್ದ ಆ ಆತ್ಮದ ಗಮನಕ್ಕೂ ಬಂದಿತ್ತು. ಸರಿಯಾಗಿ ಆಕೆಯ ದೇಹ ಕತ್ತರಿಸುವ ಮುನ್ನ ಅವನ ಪ್ರೇಯಸಿಯ ಆತ್ಮ ಹೆಣ್ಣಿನ ದೇಹ ಪ್ರವೇಶಿಸಬೇಕು ಮತ್ತು ಇನ್ನೊಬ್ಬರು ಆ ದೇಹ ಕತ್ತರಿಸಿ ಆ ದೇಹ ಆಕೆಯ ಸಮಾಧಿಯ ಮೇಲೆ ಬೀಳಬೇಕು ಹಾಗಾದಲ್ಲಿ ಮಾತ್ರ ಆಕೆಗೆ ಪುನರ್ಜೀವ. ಮಾಂತ್ರಿಕ ತನ್ನ ಪತ್ನಿಯ ದೇಹ ಕತ್ತರಿಸಲು ಮುಂದಾದನೆಂದು ತಿಳಿದು ತನ್ನ ಕಣ್ಣುಗಳನ್ನು ಉಜ್ಜುತ್ತಾ, ತನ್ನ ಬಟ್ಟೆಯಿಂದ ಕಣ್ಣಿನ ಧೂಳನ್ನು ಶುಚೀಕರಿಸಿದ. ಮಾಂತ್ರಿಕನ ಸಹಚರ ಆಕೆಯ ದೇಹ ತುಂಡರಿಸಲು ಮುಂದಾದ, ನೋಡಿದರೆ ಆಕೆಯ ಪತಿ ಅವರಿಂದ ಸ್ವಲ್ಪ ದೂರದಲ್ಲಿರುವ ಓಡಿ ಬಂದು ಅವನನ್ನು ತಳ್ಳುವಷ್ಟರಲ್ಲಿ ಆಕೆಯ ದೇಹ ತುಂಡರಿಸುತ್ತದೆ.
ಮಾಂತ್ರಿಕನ ಪ್ರೇಯಸಿಯ ಆತ್ಮ ಆಕೆಯ ದೇಹ ಪ್ರವೇಶಿಸುವಾಗ ಅಲ್ಲಿದ್ದ ದಂಪತಿಗಳ ಸಹಾಯಕ್ಕೆ ಬಂದಿದ್ದ ಆ ಪುರುಷನ ಆತ್ಮ ಮಾಂತ್ರಿಕ ಹಿಡಿದಿದ್ದ ಆ ಪತಿಯ ದೇಹವನ್ನು ಪಕ್ಕಕ್ಕೆ ಜೋರಾಗಿ ತಳ್ಳಿತು, ಆ ರಭಸಕ್ಕೆ ಅವಳ ದೇಹ ಮಾಂತ್ರಿಕನ ಕೈಯಿಂದ ಪಕ್ಕಕ್ಕೆ ಜಾರಿತು. ಸಹಚರನ ಕೈ ಆಕೆಯ ದೇಹ ಕತ್ತರಿಸಲು ಚಲಿಸಿಯಾಗಿತ್ತು, ಪ್ರೇಯಸಿಯ ಆತ್ಮವೂ ಸಹ ಆಕೆಯ ದೇಹ ಪ್ರವೇಶಕ್ಕೆ ಮುಂದಾಗಿತ್ತು. ಆ ಹೆಣ್ಣಿನ ದೇಹ ಪಕ್ಕಕ್ಕೆ ಜಾರಿದ್ದರಿಂದ ಪ್ರೇಯಸಿಯ ಆತ್ಮ ಹಠಾತ್ತಾಗಿ ತನ್ನ ಪ್ರಿಯಕರನ ದೇಹ ಪ್ರವೇಶಿಸಿತು, ಸಹಚರನ ಕೈ ಚಲನೆಯಲ್ಲಿರುವುದರಿಂದ ಆಕೆಯ ದೇಹ ಪಕ್ಕಕ್ಕೆ ಬೀಳುತ್ತಿದ್ದಂತೆ ಅವನು ಅವನ ಕೈಯನ್ನಾಗಲೆ ಮಾಂತ್ರಿಕನ ಕುತ್ತಿಗೆಯ ಪಕ್ಕದಲ್ಲಿ ತಂದಾಗಿತ್ತು . ಪ್ರೇಯಸಿಯ ಆತ್ಮ ಮಾಂತ್ರಿಕನ ದೇಹ ಹೊಕ್ಕಿತ್ತು ಸಹಚರ ತನಗೆ ಅರಿವಿಲ್ಲದೆಯೇ ಮಾಂತ್ರಿಕನ ಕತ್ತನ್ನು ಕತ್ತರಿಸಿದ. ಇದನ್ನೆಲ್ಲಾ ಗಮನಿಸಿದರೂ ತನ್ನ ಕೈ ಮೇಲೆ ಹಿಡಿತ ಸಾಧಿಸಲಾಗದ ಸಹಚರ ಕಣ್ಣುಗಳನ್ನು ದೊಡ್ಡದಾಗಿಸಿ, ಬಾಯಿಯನ್ನು ಬಿಗಿಯಾಗಿ ಹಿಡಿದು ತಾನು ಏನು ಮಾಡಿದ್ದೇನೆ ಎಂಬ ಮುಖಭಾವ ಅವನ ಮುಖದಲ್ಲಿ ಕ್ಷಣದಲ್ಲಿ ಗಾಬರಿಯಿಂದ ಎದ್ದು ತೋರುತ್ತಿತ್ತು. ಕತ್ತರಿಸಿದ ವೇಗಕ್ಕೆ ಕುತ್ತಿಗೆಯಿಂದ ರಕ್ತದ ಮಡುವು ಪಕ್ಕಕ್ಕೆ ಬಿದ್ದಿದ್ದ ಆ ಹೆಣ್ಣಿನ ದೇಹ ಮತ್ತು ಮುಖದ ಮೇಲೆ ಚಿಮ್ಮಿತು, ಮಾಂತ್ರಿಕನ ರುಂಡವು ಮಕ್ಕಳಾಡುವ ಚೆಂಡಿನಂತೆ ಗಾಳಿಯಲ್ಲಿ ಎಗರಿ ತನ್ನ ಪ್ರೇಯಸಿಯ ಸಮಾಧಿಯ ಗೋಡೆಗೆ ತಗುಲಿ ಪತ್ನಿಯ ದೇಹದ ಕಾಲಿನ ಕೆಳಗೆ ಬಿದ್ದಿತು. ಕತ್ತರಿಸಿದ ಅವನ ದೇಹ ಅರೆಜೀವದಲ್ಲಿ ಸಣ್ಣ ಸಣ್ಣ ಹೆಜ್ಜೆ ಹಾಕುತ್ತಾ ಬಿದ್ದ ಹೆಣ್ಣಿನ ದೇಹಕ್ಕೆ ಅವನ ಕಾಲುಗಳು ಎಡವಿ ಅವನ ದೇಹ ತನ್ನ ಪ್ರೇಯಸಿಯ ಸಮಾಧಿಯ ಮೇಲೆ ಬಿದ್ದಿತು. ದೇಹ ಸಮಾಧಿಯ ಮೇಲೆ ಬೀಳುತ್ತಿದ್ದಂತೆ ಅನ್ಯ ಲಿಂಗ ದೇಹ ಪ್ರವೇಶಿಸಿದ ಕಾರಣ ನೂರೆಂಟು ಹೋಳುಗಳಾಗಿ ಸಿಡಿದು, ಬೆಂಕಿ ಹೊತ್ತಿ ಉರಿಯತೊಡಗಿತು. ಇದನ್ನೆಲ್ಲಾ ಗಮನಿಸುತ್ತಿದ್ದ ಸಹಚರ ಗಾಬರಿಯಿಂದ ಪುರುಷನ ಆತ್ಮ ಹಾಗೂ ಅಲ್ಲಿರುವ ಪತಿಯನ್ನು ಕಂಡು ತನ್ನನ್ನು ಅವರು ಬದುಕಲು ಬಿಡುವುದಿಲ್ಲವೆಂದು ಅಲ್ಲಿಂದ ಓಡುತ್ತಾ, ಕಾಲ್ಕಿತ್ತ.
ಕಣ್ಣೀರು ಸುರಿಯುತ್ತಿರುವ ಪತಿಯ ಕಣ್ಣಲ್ಲಿ ಪುರುಷನ ಆತ್ಮ ನೋಡುತ್ತಾ ಸಂತೋಷ, ಅವಿನಾಭಾವ ಸಂಬಂಧ ಇರದಿದ್ದರೂ ಯಾವುದೇ ಫಲ ಅಪೇಕ್ಷಿಸದೆ ತನ್ನ ಹಾಗೂ ತನ್ನ ಪತ್ನಿಯ ಪ್ರಾಣ ಉಳಿಸಿದ ಆ ಆತ್ಮಕ್ಕೆ ಚಿರಋಣಿಯಾಗಿರುವ ಸಂದೇಶ ಕೊಡುವ ಭಾವ ಅವನ ಕಣ್ಣಲ್ಲಿ ಎದ್ದುತೋರುತ್ತಿತ್ತು. ತನಗೆ ತಿಳಿಯದೇ ಅವನ ಕೈಗಳು ಜೋಡಿಸ ತೊಡಗಿದವು, ಕೈಮುಗಿಯುತ್ತ ಜೋರಾಗಿ ಅಳುತೊಡಗಿ ತನ್ನ ಮಂಡಿಯೂರಿ ನೆಲಕ್ಕೊರಗಿದ. ಇದನ್ನೆಲ್ಲಾ ಗಮನಿಸುತ್ತಿದ್ದ ಆ ಆತ್ಮಕ್ಕೂ ತನ್ನಿಂದಾದ ಈ ಕಾರ್ಯಕ್ಕೆ ಏನೋ ಅರಿಯದ ಖುಷಿ, ಸಾರ್ಥಕ ಮನೋಭಾವ. ಕಣ್ಣೀರಿಡುತ್ತಲೇ ನಿಧಾನವಾಗಿ ಮೇಲೆದ್ದ ಪತಿ ತನ್ನ ಪತ್ನಿಯತ್ತ ಸಾಗಿದ. ಆಕೆಯನ್ನು ಎಚ್ಚರಗೊಳಿಸಿದ, ರಕ್ತ ಸಿಕ್ತವಾಗಿರುವ ತನ್ನ ಮೈ, ಒಂದೆಡೆ ಸಹಚರರ ಹೆಣಗಳು ಮತ್ತೊಂದೆಡೆ ಸಮಾಧಿಯ ಮೇಲೆ ಛಿದ್ರವಾಗಿ ಉರಿಯುತ್ತಿರುವ ದೇಹ ಆ ಸಮಾಧಿಯ ಮೇಲಿದ್ದ ಛಿದ್ರವಾಗಿದ್ದ ಕೈ ಗಮನಿಸಿದಾಗ ಆಕೆಗೆ ಅರಿವಾಯಿತು ಅದು ಮಾಂತ್ರಿಕನದೆ ಎಂದು. ಇಬ್ಬರು ಒಬ್ಬರನ್ನೊಬ್ಬರು ನೋಡುತ್ತಾ , ಕಣ್ಣೀರಿಡುತ್ತಾ ಅಪ್ಪಿಕೊಂಡರು. ನಡೆದ ವೃತ್ತಂತವನ್ನೆಲ್ಲ ಆಕೆಗೆ ವಿವರಿಸಿದ ಅದನ್ನೆಲ್ಲ ಕೇಳುತ್ತಾ ಆಕೆಯ ಕಂಗಳು ಒದ್ದೆಯಾದವು, ಆಕೆಯೂ ಕೃತಜ್ಞತಾ ಭಾವದಿಂದ ತನ್ನ ಪ್ರಾಣ ರಕ್ಷಿಸಿದ ಆತ್ಮಕ್ಕೆ ವಂದಿಸಿದಳು. ಮುಂದೆ ಹೋಗುವ ದಾರಿ ತೋಚದೆ ಆ ಆತ್ಮಕ್ಕೆ ಸಲಹೆ ಬೇಡಿದರು. ತಾವು ಅಲ್ಲಿಗೆ ಏಕೆ ಬಂದರು, ಆ ಒಂಟಿ ಮನೆಯಲ್ಲಿ ನಡೆದ ಕಥೆಯನ್ನೆಲ್ಲ ವಿವರಿಸಿದರು.ವಿಷಯ ಕೇಳುತ್ತಿದ್ದಂತೆ ಒಂಟಿ ಮನೆಗೂ ಆ ಆತ್ಮಕ್ಕೂ ಅವಿನಾಭಾವ ಸಂಬಂಧವಿದೆ ಎಂದೂ ಅದು ತನ್ನ ಮನೆ ಅದರಿಚ್ಚೆಯಿಂದಲೆ ತನ್ನ ಕೊಲೆ ಮಾಡಿ ತನ್ನ ಆತ್ಮವನ್ನು ಇಲ್ಲಿ ಬಂಧಿಸಲಾಯಿತು ಎಂದೂ ಆ ಆತ್ಮ ವಿವರಿಸಿತು. ಇಲ್ಲಿಂದ ಹೋಗುವ ದಾರಿ ತನಗೆ ಗೊತ್ತು, ಆ ಒಂಟಿ ಮನೆಯ ಸಮಸ್ಯೆಗಳಿಂದ ಬರುವ ಮುಂದಿನ ಎಲ್ಲಾ ಕಷ್ಟಗಳಲ್ಲಿ ತಾನು ಸಹಾಯವಾಗುವೆ ಎಂದು ಹೇಳುತ್ತ ಅಷ್ಟ ದಿಗ್ಬಂಧನದ ಮೊದಲ ಹಂತದಿಂದ ಹೊರ ನಡೆಸುವ ಹೊಣೆ ತನ್ನದೆಂದು ಹೇಳುತ್ತ ಅಲ್ಲಿಂದ ಅವರನ್ನು ಅಲ್ಲಿಂದ ಕರೆದೊಯ್ಯಲು ಸಜ್ಜಾಯಿತು …
ಮುಂದುವರೆಯುವುದು ……..
ಅ