ಒಂಟಿ ಮನೆ – 7

ಹಿಂದಿನ ಸಂಚಿಕೆಯಿಂದ…
ದಂಪತಿಗಳ ಸಹಾಯಕ್ಕೆ ಬಂದ ಇನ್ನೊಂದು ಆತ್ಮವನ್ನು ಕಂಡು ವಿಚಲಿತಳಾದ ಪ್ರೇಯಸಿಯ ಆತ್ಮ ತನ್ನ ಪ್ರಿಯಕರನಾದ ಮಾಂತ್ರಿಕನ ದೇಹ ಹೊಕ್ಕಿತು. ಇದರ ಅರಿವಿಲ್ಲದ ಮಾಂತ್ರಿಕನ ಸಹಚರ ಮಾಂತ್ರಿಕನ ಕತ್ತನ್ನು ಕತ್ತರಿಸಿಬಿಟ್ಟ. ದಂಪತಿಗಳು ತಮ್ಮ ಸಹಾಯಕ್ಕೆ ಬಂದ ಆತ್ಮಕ್ಕೆ ಕೈ ಮುಗಿದು ಮುಂದೆ ಹೋಗುವ ದಾರಿಯ ಬಗ್ಗೆ ಸಲಹೆ ಕೇಳಿದರು. ಆತ್ಮವು ಅಷ್ಟ ದಿಗ್ಬಂಧನದ ಮೊದಲ ಹಂತದಿಂದ ಹೊರ ನಡೆಸುವ ಹೊಣೆ ತನ್ನದೆಂದು ಹೇಳುತ್ತ ಅಲ್ಲಿಂದ ಅವರನ್ನು ಅಲ್ಲಿಂದ ಕರೆದೊಯ್ಯಲು ಸಜ್ಜಾಯಿತು ಮುಂದೆ…

ಅಲ್ಲಿಂದ ಮುಂದೆ ನಡೆದು ಅಲ್ಲಿಯೇ ಇದ್ದ ಅಗ್ನಿ ಕುಂಡದ ಮುಂದೆ ನಿಂತರು. ಆ ಆತ್ಮ ಕೊಂದು ಶರತ್ತಿನಂತೆ ಅಗ್ನಿ, ವಾಯು ಅಥವಾ ಜಲ ಮೂಲ ಬಳಸಿ ಅಲ್ಲಿಂದ ಹೊರ ನಡೆಯಬೇಕು. ಹೀಗೆ ಅವರ ಜೊತೆ ಅಲ್ಲಿಂದ ಹೊರ ನಡೆಯಲು ಆತ್ಮ ಆ ಅಗ್ನಿ ಕುಂಡದಲ್ಲಿ ಒಂದು ಬೆಂಕಿ ಕೂಪವನ್ನು ಸೃಷ್ಟಿಸಿತು. ಆ ಅಗ್ನಿಕುಂಡದಲ್ಲಿ ಒಂದು ಸುರುಳಿಯಾಕಾರದ ಬೆಂಕಿ ಕೂಪ ಉದ್ಭವಿಸಿ ಆ ಮೂವರು ಅದನ್ನು ಪ್ರವೇಶಿಸುತ್ತಿದ್ದಂತೆ ಅದು ತನ್ನ ಮೂಲವನ್ನು ಅಗ್ನಿಕುಂಡದಿಂದ ಕೊನೆಗೊಳಿಸಿ ಮತ್ತೆ ಆ ಒಂಟಿಮನೆಯ ಅಷ್ಟ ದಿಗ್ಬಂಧನದ ಮೊದಲನೆ ಮನೆಯಲ್ಲಿ ಆ ದಂಪತಿಗಳ ಜೊತೆ ಆತ್ಮವನ್ನು ಸೇರಿಸಿ ಮರೆಯಾಯಿತು. ಮೊದಲನೆಯ ಮನೆಯಲ್ಲಿದ್ದ ಆ ಹೆಣ್ಣಿನ ಆತ್ಮದ ಸತ್ತ ದೇಹವು ಅಲ್ಲೇ ಬಿದ್ದಿತ್ತು. ಅದನ್ನು ಇಬ್ಬರು ದಂಪತಿಗಳು ಸೇರಿ ಸಂಪೂರ್ಣವಾಗಿ ಸುಟ್ಟು ಹಾಕಿದರು. ಅಲ್ಲಿಗೆ ಅಷ್ಟ ದಿಗ್ಬಂಧನದ ಮೊದಲ ಮನೆಯ ಸಮಸ್ಯೆಯಿಂದ ಬಿಡುಗಡೆ ಸಿಕ್ಕಿತು. ಅವರ ಜೊತೆ ಅಲ್ಲಿಗೆ ಬಂದಿದ್ದ ಆ ಪುರುಷನ ಆತ್ಮಕ್ಕೂ ಆ ಒಂಟಿ ಮನೆಗೂ ಅವಿನಾಭಾವ ಸಂಬಂಧ. ಆ ಮನೆಯ ಮಾಲೀಕ ಅವನೇ. ಆ ಒಂಟಿ ಮನೆ ತಮ್ಮ ಕೈ ವಶ ಮಾಡಿಕೊಳ್ಳುವ ಸಲುವಾಗಿ ಅವನ ಕೊಲೆ ಮಾಡಲಾಗಿತ್ತು. ಆ ಒಂಟಿ ಮನೆ ನೋಡುತ್ತಿದ್ದಂತೆ ಅವನ ಕಣ್ಣುಗಳು ಒದ್ದೆಯಾಗ ತೊಡಗಿದವು. ಅಲ್ಲಿ ಅವನು ತನ್ನ ಸಂಸಾರದೊಂದಿಗೆ ಕಳೆದ ಹಳೆಯ ದಿನಗಳು ನೆನಪಿಗೆ ಬರತೊಡಗಿದವು. ತನ್ನ ತಂದೆ ತಾಯಿಯ ಜೊತೆ ಚಿಕ್ಕವನಿದ್ದಾಗಿನಿಂದಲೂ ಕಳೆದ ತನ್ನ ಬಾಲ್ಯದ ನೆನಪುಗಳು. ನಂತರ ವಯಸ್ಸಿಗೆ ಬಂದಾಗ ತನ್ನ ಯೌವ್ವನ, ತನ್ನ ಮದುವೆಯಾಗಿ ತನ್ನ ಹೆಂಡತಿಯ ಜೊತೆ ಕಳೆದ ಸುಖ ಸಂತೋಷದ ಕ್ಷಣಗಳು.

ಮದುವೆಯಾಗಿ ಕೆಲ ವರ್ಷಗಳಲ್ಲಿ ತನ್ನ ಮಗಳು ಹುಟ್ಟಿದ ಸಂಭ್ರಮ , ಅವಳ ಜೊತೆ ತಾನೂ ಚಿಕ್ಕ ಮಗುವಿನಂತೆ ಆಟವಾಡಿ ಮಗುವಾಗಿದ್ದ ಮಧುರ ಕ್ಷಣಗಳು. ನಂತರ ಅವನಲ್ಲಿದ್ದ ಆಸ್ತಿ ತನ್ನ ಹೆಂಡತಿಯ ಮನೆಯವರ ಕಣ್ಣಿಗೆ ಕುಕ್ಕಿ ಅವರೇ ಆ ಊರಿನ ಕೆಲ ಹಣವಂತರ ಜೊತೆ ಸೇರಿ ಗರ್ಭವತಿಯಾಗಿದ್ದ ತನ್ನ ಹೆಂಡತಿ ಮತ್ತು ಮಗುವನ್ನು ತಾನು ಮನೆಯಲ್ಲಿ ಇಲ್ಲದ ಕ್ಷಣ ಅವರನ್ನು ಅಡುಗೆ ಮನೆಯಲ್ಲಿ ಬೆಂಕಿ ಹಾಕಿ ಸುಟ್ಟು ಅದು ಗ್ಯಾಸ್ ಅಗ್ನಿ ಅವಘಡ ಸಂಭವಿಸಿದ್ದು ಎಂದು ಸುಳ್ಳು ಸುದ್ದಿ ಹುಟ್ಟಿಸಿದರು. ನಂತರ ತಾನೂ ಆ ಮನೆಯಲ್ಲಿ ಒಂಟಿಯಾಗಿ ಕೊರಗುವಂತೆ ಮಾಡಿ, ತನಗೂ ದುಶ್ಚಟಗಳ ಅಭ್ಯಾಸ ಬೆಳೆಸಿ ತಮ್ಮ ವಶಕ್ಕೆ ತೆಗೆದುಕೊಂಡು ತನ್ನ ಆಸ್ತಿಯನ್ನು ಅವರ ಹೆಸರಿಗೆ ಮಾಡಿಕೊಂಡು ತನ್ನನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ ಆ ಕ್ಷಣಗಳು ಅವನ ಕಣ್ಮುಂದೆ ಬಂದು ಹೋದವು. ಇವನು ಸತ್ತ ಮೇಲೆ ಅವನ ಸಂಸಾರದ ಸಾವಿಗೆ ಕಾರಣವಾಗಿದ್ದ ಆ ಮನೆಯಲ್ಲಿಯೇ ವಾಸವಿದ್ದ.

ಆ ಜನಗಳನ್ನು ಸಹ ಇವನ ಹೆಂಡತಿ ಮತ್ತು ತಾನು ಆತ್ಮವಾಗಿ ಒಬ್ಬೊಬ್ಬರನ್ನಾಗಿ ಕೊಲ್ಲಲಾಗುತ್ತಿದ್ದಂತೆ ಇದನ್ನು ಅರಿತ ಆ ಮನೆಯವರು ತನ್ನ ಸಂಸಾರದ ಎಲ್ಲಾ ಆತ್ಮಗಳನ್ನು ಆ ಮಾಂತ್ರಿಕನ ಸಹಾಯದಿಂದ ಮುಕ್ತಿ ಕೊಡಿಸಿ ಮತ್ತು ಅವರ ಮನೆಯ ಸತ್ತ ಎಲ್ಲಾ ಆತ್ಮಗಳನ್ನು ಆ ಅಷ್ಟ ದಿಗ್ಬಂಧನದಲ್ಲಿ ಬಂಧಿಸಲಾಗಿ ತಾವು ಮಾರಾಟ ಮಾಡುವ ಆ ಮನೆಯನ್ನು ತೆಗೆದುಕೊಂಡವರಿಗೆ ಕಾಟ ಕೊಟ್ಟು ಮತ್ತೆ ಆ ಮನೆಯನ್ನು ತಮ್ಮ ವಶಕ್ಕೆ ಪಡೆಯುವ ಕುತಂತ್ರದ ದೃಶ್ಯಗಳು ಅವನ ಕಣ್ಮುಂದೆ ಬಂದು ಹೋಯಿತು. ಹೀಗೆ ಆ ಮನೆಯನ್ನು ಮಾರಿ ಅದರ ಲಾಭ ಪಡೆಯಲು ಆತುರದಲ್ಲಿ ಆ ಒಂಟಿ ಮನೆಯನ್ನು ಕಡಿಮೆ ಬೆಲೆಗೆ ತಮಗೆ ಮಾರಲಾಯಿತು ಎಂದು ಅವನು ಆ ದಂಪತಿಗಳಿಗೆ ವಿವರಿಸಿದನು. ತನ್ನ ಮಧುರ ನೆನಪುಗಳನ್ನ ಮೆಲುಕು ಹಾಕುತ್ತಾ ಆ ಪುರುಷನ ಆತ್ಮವು ಆ ಮನೆಯ ಸುತ್ತ ನಿಧಾನಗತಿಯಲ್ಲಿ ಸುತ್ತ ತೊಡಗಿತು.

ಈ ದೃಶ್ಯವನ್ನು ಆ ದಂಪತಿಗಳು ಭಾವುಕರಾಗಿ ನೋಡ ತೊಡಗಿದ್ದರು. ಮನೆಯನ್ನು ನೋಡುವುದನ್ನು ಮುಗಿಸಿ ದಂಪತಿಗಳ ಬಳಿ ಬಂದ ಅವನ ಆತ್ಮವು ತನ್ನ ಕೊಲೆಗೆ ಕಾರಣರಾದ ಅವರ ಮನೆಯವರ ಆತ್ಮಗಳಿಂದ ತಾನು ಅವರ ಜೊತೆ ಹೋರಾಡಿ ಮುಕ್ತಿಕೊಡಿಸುವುದಾಗಿ ಅವರಿಗೆ ಮಾತನ್ನಿತ್ತನು. ಅಲ್ಲಿದ್ದ ಉಳಿದ ಏಳು ಮನೆಯ ಆತ್ಮಗಳನ್ನು ಒಂದೆ ಮನೆಯಲ್ಲಿ ಕ್ರೋಢೀಕರಿಸಿ ಅವುಗಳ ಜೊತೆ ಸೆಣಸಾಡಿ ಆ ದಂಪತಿಗಳಿಗೆ ಮುಕ್ತಿ ಕೊಡಿಸುವ ಯೋಚನೆ ಅವನ ತಲೆಯಲ್ಲಿ ಸುಳಿದಾಡಿತ್ತು. ಈ ಕಾರ್ಯವನ್ನು ಕೈಗೊಳ್ಳುವಾಗ ಯಾರ ಜೀವಕ್ಕೂ ಅಪಾಯ ಬರದಂತೆ ಜಾಗ್ರತೆ ವಹಿಸಿ ಅಲ್ಲಿದ್ದ ದುಶ್ಟ ಆತ್ಮಗಳನ್ನು ನಾಶಮಾಡಿ, ಆ ಆತ್ಮಗಳ ಕಾಟದಿಂದ ತನ್ನ ಒಂಟಿಮನೆಗೆ ಮುಕ್ತಿ ಕೊಡುವುದಾಗಿ ಯೋಚಿಸಿ, ಆ ಕಾರ್ಯದಲ್ಲಿ ಬರಬಹುದಾದ ಅಪಾಯಗಳು ಮತ್ತು ಮುನ್ನೆಚ್ಚರಿಕೆಗಳನ್ನು ಆ ದಂಪತಿಗಳಿಗೆ ವಿವರಿಸಿದನು.

ಆ ಮನೆಯಲ್ಲಿ ತಮ್ಮ ಮಕ್ಕಳು ಬಂದವಾಗಿರುವ ವಿಷಯ ಅವರು ಆ ಆತ್ಮಕ್ಕೆ ತಿಳಿಸುತ್ತಿದ್ದಂತೆ ಮೊದಲು ಅವರನ್ನು ಆ ಮನೆಯಿಂದ ಹೊರ ತರುವ ಕಾರ್ಯ ಮುಗಿಸುವುದಾಗಿ ನಿಶ್ಚಯಿಸಿದ. ಆ ದಂಪತಿಗಳು ಆ ದಿಗ್ಬಂಧನದಿಂದ ಎಲ್ಲೂ ಹೊರಬರದ ಕಾರಣ ತಾನೇ ಆ ಒಂಟಿ ಮನೆಯನ್ನು ಪ್ರವೇಶಿಸಿ ಆ ಮಕ್ಕಳನ್ನು ಅಲ್ಲಿಂದ ಹೊರ ತರುವ ಕಾರ್ಯದಲ್ಲಿ ಮುಂದಾದ. ಆ ಮನೆಯ ಬಾಗಿಲನ್ನು ತೆಗೆಯುತ್ತಾ ಆ ಮನೆಯನ್ನು ಪ್ರವೇಶಿಸಿದ. ಆತ್ಮಗಳ ಪ್ರಭಾವಕ್ಕೆ ಒಳಗಾಗಿ ಮನೆಯೆಲ್ಲಾ ಮತ್ತೆ ಧೂಳಿನಿಂದ ತುಂಬಿಕೊಂಡಿತ್ತು. ಮನೆ ತುಂಬೆಲ್ಲಾ ಹಸಿರು ಬಳ್ಳಿಗಳು ಹರಡಿಕೊಂಡಿದ್ದವು. ಮನೆಯ ಎಲ್ಲಾ ಕೋಣೆಗಳ ಪ್ರವೇಶಿಸುತ್ತ ಆ ಮಕ್ಕಳಿಗಾಗಿ ನೋಡತೊಡಗಿದ. ಕೆಲ ಭಾಗದ ಮನೆಯ ಯಾವ ಕೋಣೆಯಲ್ಲೂ ಅವರು ಸಿಗದ ಕಾರಣ ಮೇಲಿನ ಭಾಗದ ಮನೆಗೆ ಹೋದ. ಅಲ್ಲಿ ಬಳ್ಳಿಗಳಿಂದ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದ ಒಂದು ಬಾಗಿಲನ್ನು ಕಂಡು ಆ ಕಡೆ ಧಾವಿಸಿದ. ತನ್ನ ಶಕ್ತಿಯಿಂದ ಆ ಬಳಿಗಳನ್ನೆಲ್ಲ ಬಾಗಿಲಿನಿಂದ ತೆಗೆದು ಎಸೆದ. ಅವರ ಹೆಸರನ್ನು ಕೂಗಿದರೆ ಮತ್ತೆಲ್ಲಿ ಬೇರೆ ಧ್ವನಿ ಕೇಳಿ ಹೆದರಿಯಾರು ಎಂದು ಯೋಚಿಸಿ ಬಾಗಿಲನ್ನು ಬಡಿದ, ಬಡಿದ ತಕ್ಷಣವೇ ಒಳಗಡೆಯಿಂದ ತಿರುಗಿ ಬಾಗಿಲು ಬಡಿದ ಶಬ್ದವಾಯಿತು. ಮತ್ತೊಮ್ಮೆ ಬಾಗಿಲು ಬಡಿದ ಮತ್ತೊಮ್ಮೆ ಒಳಗಡೆಯಿಂದ ಬಾಗಿಲು ಬಡಿದ ಶಬ್ದ ….

ಮುಂದಿನ ವಾರಕ್ಕೆ…

Related post

Leave a Reply

Your email address will not be published. Required fields are marked *